ನ್ಯಾಷನಲ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಬೆನ್ನಲ್ಲೇ ಪತ್ನಿ ರಾಧಿಕಾ, ಮಕ್ಕಳೊಂದಿಗೆ ಯಶ್ ಗಲ್ಲಿ ಸುತ್ತಾಡಿದ್ದಾರೆ. ಫ್ಯಾಮಿಲಿ ಜೊತೆ ಯಶ್ ಗಲ್ಲಿ ಸುತ್ತಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಮುಂಬೈನಲ್ಲಿರೋ ಬಾಲಿವುಡ್ ಪಾಪರಾಜಿಗಳು ಯಶ್ ಅವರು ಸುತ್ತಾಡುತ್ತಿರುವ ವಿಡಿಯೋಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆ.
ಯಶ್ ಅವರಿಗೆ ಕರ್ನಾಟಕ ಮಾತ್ರವಲ್ಲ ಮುಂಬೈನಲ್ಲೂ ಫ್ಯಾನ್ಸ್ ಇದ್ದಾರೆ. ಅವರು ನಡೆದು ಬರುವಾಗ ಓರ್ವ ಅಭಿಮಾನಿ ಕಾಲಿಗೆ ಬಿದ್ದಿದ್ದಾನೆ. ಆದರೆ, ಇದಕ್ಕೆ ಯಶ್ ಅವಕಾಶ ನೀಡಲಿಲ್ಲ. ಅವರು ಕಾಲಿಗೆ ಬೀಳೋದು ಬೇಡ ಎಂದು ಕೈ ಸನ್ನೆ ಮೂಲಕ ತೋರಿಸಿದ್ದಾರೆ. ಪುಟ್ಟ ಮಗುವೊಂದು ಯಶ್ ಎದುರು ನಿಂತಿತ್ತು. ಆಗ ಅವರು ಖುಷಿಯಿಂದ ಪೋಸ್ ಕೊಟ್ಟಿದ್ದಾರೆ.
‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ಫ್ಯಾಮಿಲಿಗೂ ಯಶ್ ಸಮಯ ನೀಡಿದ್ದಾರೆ. ಮುಂಬೈನಲ್ಲಿ ರಾಧಿಕಾ ಮತ್ತು ಮುದ್ದಿನ ಮಕ್ಕಳೊಂದಿಗೆ ಮುಂಬೈ ಬೀದಿ ಸುತ್ತಾಡಿದ್ದಾರೆ. ಇದು ಮುಂಬೈ ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಮಾನ್ಯರಂತೆ ಮುಂಬೈನಲ್ಲಿ ಓಡಾಡಿದ ಯಶ್ ಫ್ಯಾಮಿಲಿ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
ಇನ್ನೂ ಬೆಂಗಳೂರಿನಲ್ಲಿ ಕೆಲ ಭಾಗದ ಚಿತ್ರೀಕರಣ ನಡೆದ ಮೇಲೆ ಈಗ ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗೆ ‘ಟಾಕ್ಸಿಕ್’ ಸೆಟ್ನಲ್ಲಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದರು. ಅವರು ಈ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ.
ಯಶ್- ರಾಧಿಕಾ ಪಂಡಿತ್ ವಿಡಿಯೋ ನೋಡಿ ಅಭಿಮಾನಿಗಳು ‘ಕೆಜಿಎಫ್ 3’ ಯಾವಾಗ ಅಂತಾನೂ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ‘ಟಾಕ್ಸಿಕ್’ ಸಿನಿಮಾವನ್ನು ಮಲಯಾಳಂ ನಟಿ ಗೀತು ಮೋಹನ್ ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಶೂಟಿಂಗ್ ಮುಗಿಸಿದ ಬಳಿಕ ಮುಂಬೈನಲ್ಲಿ ಎರಡನೇ ಹಂತದ ಚಿತ್ರೀಕರಣ ನಡೆಯುತ್ತಿದೆ. ಬಾಲಿವುಡ್ ನಟಿಯರು ಸೇರಿದಂತೆ ಹಾಲಿವುಡ್ ತಂತ್ರಜ್ಞರು ಈ ಸಿನಿಮಾಗಾಗಿ ಕೆಲಸ ಮಾಡುತ್ತಿದ್ದಾರೆ. ‘ಟಾಕ್ಸಿಕ್’ ಜೊತೆಗೆ ‘ರಾಮಾಯಣ’ ಸಿನಿಮಾಗೂ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ಮುಂಬೈನಲ್ಲೇ ಹೆಚ್ಚು ದಿನ ಇರುವ ಸಾಧ್ಯತೆಯಿದೆ.