ದಾವಣಗೆರೆ: ಕಷ್ಠ-ದುಃಖದಲ್ಲಿ ಜೊತೆಯಾಗಿ ನಿಂತು ಸುದೀರ್ಘ ದಾಂಪತ್ಯ ಜೀವನ ನಡೆಸಿದ ದಂಪತಿ, ಸಾವಿನನಲ್ಲೂ ಒಂದಾಗಿ ಜೀವನ ಪಯಣ ಮುಗಿಸಿದ್ದಾರೆ. ಈ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಕಸ್ತೂರಿ ರಂಗಪ್ಪ (65) ಜಯಮ್ಮ (58) ಸಾವನ್ನಪ್ಪಿದ ದಂಪತಿ. ಪಡಿತರ ಅಕ್ಕಿ ತರಲು ನ್ಯಾಯಬೆಲೆ ಅಂಗಡಿಗೆ ಕಸ್ತೂರಿ ರಂಗಪ್ಪ ಹೋಗಿದ್ದರು. ಈ ವೇಳೆ ಅವರು ಕುಸಿದು ಬಿದಿದ್ದಾರೆ. ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿನ ಸುದ್ದಿಯನ್ನ ಪತ್ನಿ ಜಯಮ್ಮಗೆ ಕರೆ ಮಾಡಿ ತಿಳಿಸಿದ್ದಾರೆ.
ಪತಿಯ ಸಾವಿನ ಸುದ್ದಿ ಪೋನ್ ನಲ್ಲಿ ಕೇಳುತ್ತಿದ್ದಂತೆ ಜಯಮ್ಮ ಕೂಡ ಹೃದಯಾಘಾತದಿಂದ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಸಾವಿನಲ್ಲಿ ಒಂದಾದ ದಂಪತಿಗೆ ದೇವರಹಳ್ಳಿ ಗ್ರಾಮದಲ್ಲಿ ಅಂತ್ಯಕ್ರಿಯೆ ನಡೆದಿದೆ.