ಮದುವೆ ಮನೆ ಅಂದರೆ ಸಂಭ್ರಮ ಸಡಗರ, ವಿಜೃಂಭಣೆ, ಕೌತುಕ, ಕನಸು, ದುಃಖ ಎಲ್ಲದರ ಸಮ್ಮಿಲನ. ಎಲ್ಲ ರೀತಿಯ ಭಾವನೆಗಳು ಹೊರ ಬೀಳುವ ಸ್ಥಳ ಅಂದರೆ ಅದುವೇ ಮದುವೆ ಮನೆ. ಆ ಮನೆಯಲ್ಲಿ ಎಲ್ಲರ ಗಮನ ಮದುವೆ ಗಂಡು, ಹೆಣ್ಣಿನ ಮೇಲೆ ಇರುತ್ತದೆ. ಮದುವೆ ಗಂಡಿಗೆ ತನ್ನ ಬಾಳ ಸಂಗಾತಿಯನ್ನ ವರಿಸುವ ಸುಮಧುರ ಕ್ಷಣವಾದರೇ, ಹೆಣ್ಣಿಗೆ ತನ್ನ ಜೀವನದ ಅತ್ಯಮೂಲ್ಯ ಕ್ಷಣ. ಆದರೆ ಇಲ್ಲೊಂದು ವಿಚಿತ್ರ ಘಟನೆ ನಡೆದಿದೆ. ಮದುವೆ ಗಂಡು ವಿವಾಹ ಶಾಸ್ತ್ರ ಬಿಟ್ಟು ತನ್ನ ಸ್ನೇಹಿತರೊಡನೆ ಲೂಡೊ ಗೇಮ್ ಆಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Muskan_nnn ಹೆಸರಿನ ಎಕ್ಸ್ ಖಾತೆಯಲ್ಲಿ ಈ ಕುರಿತ ಫೋಟೊವನ್ನು ಹಂಚಿಕೊಳ್ಳಲಾಗಿದ್ದು, “ಅಣ್ಣ ತನ್ನದೇ ಆದ ಆದ್ಯತೆಯನ್ನು ಹೊಂದಿದ್ದಾನೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ಆಗುತ್ತಿರುವ ಈ ಫೋಟೋದಲ್ಲಿ ಮದುವೆ ಮಂಟಪದಲ್ಲಿ ವಿವಾಹ ಶಾಸ್ತ್ರಗಳು ನಡೆಯುತ್ತಿರುವ ಮಧ್ಯದಲ್ಲಿಯೇ ವರ ತನ್ನ ಇಬ್ಬರು ಫ್ರೆಂಡ್ಸ್ ಜೊತೆ ಕುಳಿತು ಮೊಬೈಲ್ನಲ್ಲಿ ಲೂಡೋ ಗೇಮ್ ಆಡುತ್ತಿರುವ ದೃಶ್ಯವನ್ನು ಕಾಣಬಹುದು.