ಪದವಿ ವಿದ್ಯಾರ್ಥಿಗಳು ತಾವು ಕಲಿಯಲು ಬಯಸುವ ಕೋರ್ಸ್ ಗಳ ಅವಧಿಯನ್ನು ಕಡಿಮೆ ಮಾಡುವ ಅಥವಾ ವಿಸ್ತರಿಸುವ ಆಯ್ಕೆಯನ್ನು ಶೀಘ್ರವೇ ಪಡೆದುಕೊಳ್ಳಲಿದ್ದಾರೆ. ವಿದ್ಯಾರ್ಥಿಗಳಿಗೆ ಇಂತಹ ಆಯ್ಕೆ ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಸಾಧ್ಯವಾಗಲಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಜಗದೀಶ್ ಕುಮಾರ್ ತಿಳಿಸಿದ್ದಾರೆ.
ಉನ್ನತ ಶಿಕ್ಷಣ ಸಂಸ್ಥೆಗಳು ಆಕ್ಸಲರೇಟೆಡ್ ಡಿಗ್ರಿ ಪ್ರೋಗ್ರಾಮ್ ಮತ್ತು ಎಕ್ಸ್ ಟೆಂಡೆಡ್ ಡಿಗ್ರಿ ಪ್ರೋಗ್ರಾಮ್ ನೀಡಲು ರಚಿಸಿರುವ ಪ್ರಮಾಣಿತ ಕಾರ್ಯಾಚರಣೆ ವಿಧಾನಕ್ಕೆ ಇತ್ತೀಚೆಗೆ ನಡೆದ ಸಭೆಯಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ ಅನುಮೋದನೆ ನೀಡಿದೆ ಎಂದು ಹೇಳಲಾಗಿದೆ.