ಟಾಲಿವುಡ್ ಸೂಪರ್ ಸ್ಟಾರ್ ನಾಗರ್ಜುನ್ ಅವರು ಈಗಲೂ ಯುವ ನಟರಂತೆ ಅಭಿಮಾನಗಳನ್ನು ಸೆಳೆಯುತ್ತಾರೆ. ತೆಲುಗು ಚಿತ್ರರಂಗದ ಹಿರಿಯ ನಟ ನಾಗಾರ್ಜುನ ಅವರು ಚಿತ್ರರಂಗದ ಶ್ರೀಮಂತ ನಟರಲ್ಲಿ ಒಬ್ಬರು. ನಾಗಾರ್ಜುನ ಜೀವನಶೈಲಿ ಯಾವಾಗಲೂ ವಿಶಿಷ್ಟವಾಗಿದೆ. ಇವರ ಲೈಫ್ಸ್ಟೈಲ್ ಯಾವಗಲೂ ಎಲ್ಲರಿಗಿಂತಲೂ ಕೊಂಚ ಸ್ಪೆಷಲ್ ಆಗಿ ಇರುತ್ತದೆ. ತೆಲುಗು ಸಿನಿ ರಂಗದ ಶ್ರೀಮಂತ ನಟರಲ್ಲಿ ಇವರು ಒಬ್ಬರಾಗಿದ್ದು ನಾಗಾರ್ಜುನ ಅವರಿಗೆ ಆಟೋಮೊಬೈಲ್ಗಳ ಬಗ್ಗೆ ಬಹಳ ಆಸಕ್ತಿ ಇದೆ.
ಕಾಲಕಾಲಕ್ಕೆ ಹೊಸ ಮಾದರಿಯ ವಾಹನಗಳನ್ನು ತಮ್ಮ ಗ್ಯಾರೇಜಿಗೆ ಸೇರಿಸುತ್ತಾರೆ. ನಾಗಾರ್ಜುನ ಅವರಿಗೆ ಪ್ರೈವೆಟ್ ಜೆಟ್ ಕೂಡ ಇದೆ. ಈಗಾಗಲೇ ಇವರ ಗ್ಯಾರೇಜ್ನಲ್ಲಿ ಐಷಾರಾಮಿ ಬೈಕ್, ಕಾರುಗಳಿವೆ. ಸದ್ಯ ಇವುಗಳ ಪಟ್ಟಿಗೆ ಮತ್ತೊಂದು ದುಬಾರಿ ಮೊತ್ತದ ಕಾರು ಸೇರಿಕೊಂಡಿದೆ. ಹೌದು ಸದ್ಯ ನ್ಯೂ ಬ್ರ್ಯಾಂಡ್ ಟೊಯೊಟಾ ಲೆಕ್ಸಸ್ ಕಾರನ್ನು ಖರೀದಿ ಮಾಡಿದ್ದಾರೆ. ಈ ಕಾರಿನ ಬೆಲೆ ಕೇಳಿದರೆ ಫುಲ್ ಶಾಕ್ ಆಗೋದು ಗ್ಯಾರಂಟಿ. ಈ ಕಾರಿನ ರಿಜಿಸ್ಟ್ರೇಶನ್ ಮಾಡಿಸಲೆಂದು ಹೈದರಾಬಾದ್ನಲ್ಲಿರುವ ಖೈರತಾಬಾದ್ನ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್ಟಿಒ) ಕಚೇರಿಗೆ ಟಾಲಿವುಡ್ ಕಿಂಗ್ ನಾಗಾರ್ಜುನ್ ಕಾರು ಸಮೇತ ಆಗಮಿಸಿದ್ದರು. ಇನ್ನು ನಾಗರ್ಜುನ್ ಅವರು ಖರೀದಿ ಮಾಡಿದ ಬೆಲೆ 2 ಕೋಟಿ ರೂಪಾಯಿಗೂ ಅಧಿಕವಾಗಿದೆ. ಇದರಲ್ಲಿ ಒಮ್ಮೆಗೆ ನಾಲ್ವರು ಕುಳಿತು ಪ್ರಯಾಣಿಸಬಹುದು. ಕಾರಿನ ಒಳಗಡೆ ಸೇಫ್ಟಿ ಡೆಕ್ನಾಲಜಿ ಜೊತೆ ಡಿಜಿಟಲ್ ಮಾದರಿಯಲ್ಲಿ ಇರುತ್ತದೆ.