ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 10ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಈ ವಾರ ಇಡೀ ಬಿಗ್ಬಾಸ್ ಮನೆ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಆದರೆ ಇದರ ಮಧ್ಯೆ ಈ ವಾರದ ಕಳಪೆ ಪಟ್ಟವನ್ನು ವೈಲ್ಡ್ ಕಾರ್ಡ್ ಸ್ಪರ್ಧಿಗೆ ಕೊಟ್ಟಿದ್ದಾರೆ.
ಈ ವಾರ ಶೋಭಾ ಅವರು ಕಳಪೆ ಪಟ್ಟ ಪಡೆದುಕೊಂಡಿದ್ದಾರೆ. ಮೊದಲಿಗೆ ಧನರಾಜ್ ಅವರು ಈ ವಾರ ಶೋಭಾ ಅವರ ಪರ್ಫಾರ್ಮೆನ್ಸ್ ತುಂಬಾ ಲೋ ಆಗಿತ್ತು ಎಂದಿದ್ದಾರೆ. ಇದಕ್ಕೆ ಶೋಭಾ ಅವರು ಚಪ್ಪಾಳೆ ತಟ್ಟಿ, ಯಾಕೆ ಯಾವಾಗಲೂ ನನ್ನನ್ನೇ ಟಾರ್ಗೆಟ್ ಮಾಡ್ತೀರಾ? ಎಂದು ಕೇಳಿದ್ದಾರೆ. ಇನ್ನೊಂದು ಕಡೆ ಮಂಜು ಅವರೂ ಗೌತಮಿ ಜತೆ ಮಾತನಾಡುವಾಗ, ಸರ್ಪ್ರೈಸ್ ಆಯ್ತು ಎಂದಿದ್ದಾರೆ. ಲೈಫ್ನಲ್ಲಿ ಏನೇನೋ ಫೇಸ್ ಮಾಡಿದ್ದೀನಿ. ಆದರೆ 24 ಗಂಟೆ ಜೈಲು ನನಗೇನೂ ಅಲ್ಲ ಅಂತ ಹೇಳಿ ಎದ್ದು ಹೋಗಿದ್ದಾರೆ.
ಇನ್ನು ಗೋಲ್ಡ್ ಸುರೇಶ್ ಅವರು ಕೂಡ ಬೆಳ್ಳಗಿರೋದೆಲ್ಲ ಹಾಲಲ್ಲ ಅಂತ ಹಿನ್ನೆಲೆಯಲ್ಲಿ ಹೇಳಿರುವುದು ಪ್ರೋಮೋದಲ್ಲಿದೆ. ಇನ್ನು ಶೋಭಾ ಅವರು ನಿರೀಕ್ಷೆ ತುಂಬಾ ಇಟ್ಟಿದ್ದೆ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಇದಾದ ಬಳಿಕ ತಮ್ಮ ತಾಯಿಗೆ ಅಳುತ್ತಲೇ ಸಂದೇಶ ಕೊಟ್ಟಿದ್ದಾರೆ. ಅಮ್ಮ ಇವತ್ತು ನಾನು ಜೈಲಿಗೆ ಹೋಗುತ್ತಿದ್ದೇನೆ. ಇದನ್ನೂ ನೋಡಿ ಅಳಬೇಡ ನೀನು ಅಂತ ಹೇಳಿದ್ದಾರೆ. ನಂತರ ಜೈಲಿಗೆ ಹೋಗಿ ಕಣ್ಣೀರು ಹಾಕಿದ್ದಾರೆ. ನನಗೆ ಕಳಪೆ ಕೊಡುತ್ತಾರೆ ಅಂತ ನಿರೀಕ್ಷೆ ಮಾಡಿರಲಿಲ್ಲ ಅಂತ ಮಾತಾಡಿಕೊಂಡಿದ್ದಾರೆ.
ಕಳೆದ ವಾರ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ರಜತ್ ಕಿಶನ್ಗೆ ಸ್ಪರ್ಧಿಗಳು ಕಳಪೆ ಪಟ್ಟ ಕೊಟ್ಟಿದ್ದರು. ಆದರೆ ಈ ವಾರವು ಇದು ಮತ್ತೆ ರಿಪಿಟ್ ಆಗಿದೆ. ಈ ವಾರ ಸಖತ್ ಸ್ಟ್ರಾಂಗ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿಗೆ ಕಳಪೆ ಪಟ್ಟ ಕೊಟ್ಟಿದ್ದಾರೆ. ಹೀಗಾಗಿ ಶೋಭಾ ಶೆಟ್ಟಿ ಜೈಲಿನಲ್ಲೇ ಕಣ್ಣೀರು ಹಾಕಿದ್ದಾರೆ.
ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯಾ ಗೌಡ, ಐಶ್ವರ್ಯಾ ಸಿಂಧೋಗಿ, ಚೈತ್ರಾ ಕುಂದಾಪುರ ಹಾಗೂ ತ್ರಿವಿಕ್ರಮ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಕಳಪೆ ಪಟ್ಟ ಪಡೆದಿದ್ದರೂ ಕೂಡ ಈ ವಾರ ರಜತ್ ಅವರು ನಾಮಿನೇಷನ್ನಿಂದ ಬಚಾವ್ ಆಗಿದ್ದಾರೆ. ವೈಲ್ಡ್ ಕಾರ್ಡ್ ಮೂಲಕ ಬಂದಿರುವ ಶೋಭಾ ಶೆಟ್ಟಿ ಅವರು ಆರಂಭದಲ್ಲಿ ಸಖತ್ ಸದ್ದು ಮಾಡಿದ್ದರು. ಆದರೆ ಈ ಬಾರಿ ನಾಮಿನೇಟ್ ಆಗಿದ್ದು, ಅವರಿಗೆ ಎಲಿಮಿನೇಷನ್ ಭಯ ಕಾಡುತ್ತಿದೆ.