ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಆಟ ರಂಗೇರಿದೆ. 60ನೇ ದಿನ್ಕಕೆ ಕಾಲಿಟ್ಟ ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಪಟ್ಟಕ್ಕಾಗಿ ಸ್ಪರ್ಧಿಗಳು ಹೋರಾಟ ನಡೆಸಿದ್ದಾರೆ.
ಈ ವಾರ ಇಡೀ ಮನೆ ಬಿಗ್ಬಾಸ್ ಸಾಮ್ರಾಜ್ಯವಾಗಿ ಬದಲಾಗಿ ಬಿಟ್ಟಿತ್ತು. ಮಹಾರಾಜ ಮಂಜಣ್ಣ ಹಾಗೂ ಯುವರಾಣಿ ಮೋಕ್ಷಿತಾ ತಂಡ ನಡುವೆ ಬಿಗ್ ಫೈಟ್ ನಡೆದಿತ್ತು. ಕೊನೆಯ ಹಂತದಲ್ಲಿ ಮಹಾರಾಜ ಮಂಜಣ್ಣ ತಂಡ ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾಗಿದ್ದರು. ಅದರಲ್ಲೂ ಮೋಕ್ಷಿತಾ ಅವರು ಕ್ಯಾಪ್ಟನ್ಸಿ ಓಟದಿಂದ ತ್ರೀವಿಕ್ರಮ್ ಅವರನ್ನು ಆಚೆಗೆ ಇಟ್ಟಿದ್ದರು. ಅವರನ್ನು ಹೊರತುಪಡಿಸಿ ಮಂಜು, ಐಶ್ವರ್ಯ, ಭವ್ಯಾ, ಧನರಾಜ್ ಗೌತಮಿ ಹಾಗೂ ಗೋಲ್ಡ್ ಸುರೇಶ್ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆಯಾದ್ದರು.
ಇನ್ನೂ, ಈ ಆರು ಮಂದಿಗೆ ಬಿಗ್ಬಾಸ್ ಟಾಸ್ಕ್ವೊಂದನ್ನು ನೀಡಿದ್ದಾರೆ. ಕ್ಯಾಪ್ಟನ್ಸಿ ಆಡುವ 6 ಅಭ್ಯರ್ಥಿಗಳು ಅಂತಿಮ ಸ್ಥಾನದಲ್ಲಿ ತಮಗೆ ಮಿಸಲಿರುವ ಜಾಗದಲ್ಲಿ ನಿಲ್ಲಬೇಕು. ಟಾಸ್ಕ್ ಆರಂಭವಾದ ಕೂಡಲೇ ಆರಂಭಿಕ ಸ್ಥಾನದಲ್ಲಿರೋ ಸದಸ್ಯರು ಒಂದು ಹಿಡಿಕೆಯನ್ನು ತೆಗೆದುಕೊಂಡು, ಲೋಟದಲ್ಲಿ ನೀರು ತುಂಬಿಸಿ, ಲೋಟವನ್ನು ಹಿಡಿಕೆಯ ಮೇಲ್ಭಾದಲ್ಲಿರುವ ತಟ್ಟೆಯಲ್ಲಿ ಇಡಬೇಕು. ನಂತರ ನೀರಿನ ಲೋಟ ಕೆಳಗೆ ಬಿಳದಂತೆ ಕ್ಯಾಪ್ಟನ್ಸಿ ಆಟದಿಂದ ಹೊರಗಡೆ ಹಾಕುವ ಅಭ್ಯರ್ಥಿಯ ಬುಟ್ಟಿಗೆ ನೀರು ಹಾಕಬೇಕು. ಯಾವ ಸ್ಪರ್ಧಿಯ ಬುಟ್ಟಿಯಲ್ಲಿ ಜಾಸ್ತಿ ನೀರು ಇರುತ್ತದೆ ಅವರು ಈ ಓಟದಿಂದ ಹೊರಗಡೆ ಉಳಿಯುತ್ತಾರೆ.
ಇದೇ ಟಾಸ್ಕ್ನಲ್ಲಿ ಸ್ಪರ್ಧಿಗಳು ಒಬ್ಬೊಬ್ಬರಾಗಿ ಬಂದು ಕಾಲಿ ಬುಟ್ಟಿಗೆ ನೀರು ಹಾಕಿ ಅವರನ್ನು ಔಟ್ ಮಾಡಿದ್ದಾರೆ. ಈ ವೇಳೆ ಸ್ಪರ್ಧಿಗಳು ಪ್ಲಾನ್ ಮಾಡಿ ಧನರಾಜ್ ಅವರ ಬುಟ್ಟಿಗೆ ನೀರು ಹಾಕದೇ ಹಾಗೇ ಬಿಟ್ಟಿದ್ದಾರೆ. ಹೀಗಾಗಿ ಧನರಾಜ್ ಆಚಾರ್ಯ ಅವರು ಈ ಟಾಸ್ಕ್ನಲ್ಲಿ ಗೆದ್ದು ಬಿಗಿದ್ದಾರೆ. ಸದ್ಯ ಈ ವಾರದ ಧನರಾಜ್ ಆಚಾರ್ಯ ಅವರು ಈ ಟಾಸ್ಕ್ನಲ್ಲಿ ಗೆದ್ದು ಬಿಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಮೊದಲ ಬಾರಿಗೆ ಕ್ಯಾಪ್ಟನ್ ಆದ ಖುಷಿಯಲ್ಲಿ ಧನರಾಜ್, ಮನೆಯ ತುಂಬ ಕುಣಿದಾಡಿದರು. ಕ್ಯಾಪ್ಟನ್ ರೂಮ್ನಲ್ಲಿ ಬಿದ್ದು ಹೊರಳಾಡಿದರು. ಆದರೆ ಕೊನೇ ಕ್ಷಣದಲ್ಲಿ ಕ್ಯಾಪ್ಟನ್ ಪಟ್ಟ ಮಿಸ್ ಆಗಿದ್ದು ಸುರೇಶ್ಗೆ ಬೇಸರವನ್ನು ಉಂಟು ಮಾಡಿತು. ಹಾಗಾಗಿ, ಜಿಮ್ ಏರಿಯಾದಲ್ಲಿ ನಿಂತುಕೊಂಡು ಅವರು ಭಾವುಕರಾದರು.