‘ವಾರದ ಕತೆ ಕಿಚ್ಚನ ಜೊತೆ’ ಇವತ್ತಿನ ಎಪಿಸೋಡ್ ವೀಕ್ಷಿಸಲು ಬಿಗ್ಬಾಸ್ ವೀಕ್ಷಕರು ಎಕ್ಸೈಟ್ ಆಗಿದ್ದಾರೆ. ಬಿಗ್ಬಾಸ್ ಶುರುವಾಗಿ 9 ವಾರಗಳು ಕಳೆದಿದ್ದು, ಮನೆಯಿಂದ ಯಾರು ಎಲಿಮಿನೇಟ್ ಆಗ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ.
ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು 7 ಮಂದಿ ನಾಮಿನೇಟ್ ಆಗಿದ್ದಾರೆ. ಶೋಭಾ ಶೆಟ್ಟಿ, ಗೋಲ್ಡ್ ಸುರೇಶ್, ಶಿಶಿರ್, ಭವ್ಯ, ಚೈತ್ರಾ, ತ್ರಿವಿಕ್ರಮ್ ಹಾಗೂ ಐಶ್ವರ್ಯ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ. ಇವರಲ್ಲಿ ಒಬ್ಬರಿಗೆ ಬಿಗ್ಬಾಸ್ ಜರ್ನಿ ಅಂತ್ಯಗೊಳ್ಳಲಿದೆ.
ಇನ್ನು ಕಿಚ್ಚನ ಪಂಚಾಯ್ತಿಯಲ್ಲಿ ಯಾವೆಲ್ಲ ವಿಚಾರಗಳು ಚರ್ಚೆಗೆ ಬರಲಿದೆ ಅನ್ನೋದ್ರ ಬಗ್ಗೆಯೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಬಿಗ್ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರು. ಅವರ ಕ್ಯಾಪ್ಟನ್ಸಿ ಅವಧಿಯಲ್ಲಿ ಮಹಾರಾಜರಾಗಿ ಬಡ್ತಿ ಪಡೆದಿದ್ದ ಮಂಜಣ್ಣ ರಾಜ ದರ್ಬಾರ್ ಜೋರಾಗಿ ನಡೆಸಿದ್ದಾರೆ. ಟಾಸ್ಕ್ ವೇಳೆ ನಡೆದ ಮಾತಿನ ಯುದ್ಧಗಳು, ಸರಿ ತಪ್ಪುಗಳ ಕಿತ್ತಾಟ, ಭಾವನೆಗಳ ಜೊತೆಗಿನ ಕಣ್ಣೀರನ ಬಗ್ಗೆ ಸುದೀಪ್ ಚರ್ಚೆ ನಡೆಸುವ ಸಾಧ್ಯತೆ ಇದೆ.
ಅಲ್ಲದೆ, ವೈಲ್ಡ್ ಕಾರ್ಡ್ ಎಂಟ್ರಿ ಎಂಬ ಕಾರಣಕ್ಕೆ ಕಳೆದ ವಾರ ಬಚಾವ್ ಆಗಿದ್ದ ಶೋಭಾ ಶೆಟ್ಟಿ ಕೂಡ ಈ ವಾರ ನಾಮಿನೇಟ್ ಆಗಿದ್ದಾರೆ. ಒಟ್ಟಾರೆಯಾಗಿ ಈ ಏಳು ಮಂದಿಯಲ್ಲಿ ಯಾರು ಈ ವಾರ ಮನೆಯಿಂದ ಎಲಿಮಿನೇಟ್ ಆಗಬಹುದು ಎಂಬ ಕುತೂಹಲವಂತೂ ಇದ್ದೇ ಇದೆ.