ಬಹಳಷ್ಟು ಈರುಳ್ಳಿಗಳ ಮೇಲೆ ಕಪ್ಪು ಕಲೆಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನ ಗಮನಿಸಬೇಕು. ಲಘುವಾಗಿ ಉಜ್ಜಿದರೆ ಈ ಕಲೆಗಳು ಹೋಗಬಹುದು. ಅಂದ ಹಾಗೆ, ಹಸಿ ಈರುಳ್ಳಿಯನ್ನು ತಿನ್ನುವುದು ಜೀರ್ಣಕ್ರಿಯೆಯನ್ನ ಸುಧಾರಿಸುತ್ತದೆ. ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ ಮತ್ತು ಅದರ ವಿಟಮಿನ್ ಸಿ ಅಂಶದಿಂದಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಲ್ಲದೆ, ಇದು ಪೊಟ್ಯಾಸಿಯಮ್ ಅಂಶದಿಂದಾಗಿ ಹೃದಯವನ್ನ ಆರೋಗ್ಯಕರವಾಗಿರಿಸುತ್ತದೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನ ನಿಯಂತ್ರಿಸುತ್ತದೆ. ಇದು ಅನೇಕ ರೀತಿಯ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೆಲವೊಮ್ಮೆ ನೀವು ಈರುಳ್ಳಿಯನ್ನ ಖರೀದಿಸಿದಾಗ ಅಥವಾ ಸಿಪ್ಪೆ ತೆಗೆಯುವಾಗ ಈರುಳ್ಳಿ ಮೇಲೆ ಕಪ್ಪು ಕಲೆಗಳಿರುವುದನ್ನ ಕಾಣಬಹುದು. ಒಂದೇ ನೋಟದಲ್ಲಿ ಇದು ಸಾಮಾನ್ಯವಾಗಿ ಒಂದು ರೀತಿಯ ಶಿಲೀಂಧ್ರದಂತೆ ಕಾಣುತ್ತದೆ.
ವಾಸ್ತವವಾಗಿ, ಈ ಕಪ್ಪು ಕಲೆಗಳು ಆಸ್ಪರ್ಗಿಲಸ್ ನೈಗರ್ ಎಂಬ ನಿರ್ದಿಷ್ಟ ರೀತಿಯ ಶಿಲೀಂಧ್ರದಿಂದ ಉಂಟಾಗುತ್ತವೆ. ಈ ಶಿಲೀಂಧ್ರವು ಮಣ್ಣಿನಲ್ಲಿ ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ಈರುಳ್ಳಿಯಲ್ಲಿ ಕಂಡು ಬರುತ್ತದೆ. ಇದು ಕಪ್ಪು ಶಿಲೀಂಧ್ರದಂತಹ ಗಂಭೀರ ಕಾಯಿಲೆಯನ್ನ ಉಂಟು ಮಾಡದಿದ್ದರೂ, ಇದು ನಮ್ಮ ದೇಹಕ್ಕೆ ಹಾನಿಕಾರಕವಾಗಿದೆ.
ಈ ಶಿಲೀಂಧ್ರವು ನಮ್ಮ ದೇಹದಲ್ಲಿ ಅಲರ್ಜಿಯನ್ನ ಉಂಟು ಮಾಡುತ್ತದೆ. ವಿಶೇಷವಾಗಿ ಈಗಾಗಲೇ ಅಲರ್ಜಿಯಿಂದ ಬಳಲುತ್ತಿರುವವರು ಈ ರೀತಿಯ ಈರುಳ್ಳಿಯನ್ನ ತಿನ್ನಬಾರದು. ಅಲ್ಲದೆ, ಈ ಈರುಳ್ಳಿ ಅಸ್ತಮಾ ಅಥವಾ ಉಸಿರಾಟದ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಹಾನಿಕಾರಕವಾಗಿದೆ. ಆದ್ದರಿಂದ ಈರುಳ್ಳಿಯಲ್ಲಿ ಕಪ್ಪು ಕಲೆಗಳಿದ್ದರೆ, ಅದನ್ನು ಚೆನ್ನಾಗಿ ಸಿಪ್ಪೆ ಸುಲಿದು ತಿನ್ನಿ. ಈರುಳ್ಳಿಯ ಒಂದು ಅಥವಾ ಎರಡು ಪದರಗಳನ್ನ ತೆಗೆದು ನಂತರ ತಿನ್ನುವುದು ಉತ್ತಮ.
ಈರುಳ್ಳಿಯ ಮೇಲೆ ಕಪ್ಪು ಕಲೆಗಳು ಕಂಡುಬಂದರೆ, ಅದನ್ನು ತಿನ್ನುವುದನ್ನು ತಪ್ಪಿಸಿ, ವಿಶೇಷವಾಗಿ ಈ ರೀತಿಯ ಶಿಲೀಂಧ್ರವು ಅದರಲ್ಲಿ ಕಾಣಿಸಿಕೊಂಡರೆ. ಯಾಕಂದ್ರೆ, ಇದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ.