ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ವಾರದ ಎಲಿಮಿನೇಷನ್ ಅಚ್ಚರಿ ರೀತಿಯಲ್ಲಿ ನಡೆಿದಿದೆ. ಈ ಮನೆಯಲ್ಲಿ ಇನ್ನು ನನಗೆ ಉಳಿಯಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದ ಶೋಭಾ ಶೆಟ್ಟಿ ಅವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಭಾನುವಾರದ ಸಂಚಿಕೆಯಲ್ಲಿ ಕಿಚ್ಚನ ಮುಂದೆ ಶೋಭಾ ಶೆಟ್ಟಿ ದೊಡ್ಡ ಡ್ರಾಮಾ ಕ್ರಿಯೇಟ್ ಮಾಡಿದ್ರು. ಮುಖವಾಡ ಕಳಚಿ ಬಿಡ್ತೀನಿ ಅಂತ ಅಬ್ಬರಿಸುತ್ತಲೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಂದ ಶೋಭಾ ಶೆಟ್ಟಿ, ಸೇವ್ ಆಗಿದ್ರು ಮನೆಯಿಂದ ಹೊರಗೆ ಹೋಗೋದಾಗಿ ಡ್ರಾಮಾ ಮಾಡಿದ್ರು. ಕಿಚ್ಚನಿಗೆ ಕಿವಿ ಮಾತಿಗೂ ಬಗ್ಗದೆ ಮತ್ತೆ ನಾನು ಬಿಗ್ ಬಾಸ್ ಮನೆ ಬಿಟ್ಟು ಹೋಗ್ಬೇಕು ಎಂದು ಹಠ ಹಿಡಿದ್ರು. ಕಿಚ್ಚನ ಕೋಪ ಕೂಡ ನೆತ್ತಿಗೇರಿತ್ತು. ಸಿಟ್ಟಾದ ಸುದೀಪ್ ಬಿಗ್ ಬಾಸ್ ಮನೆಗೆ ಬಾಗಿಲು ತೆರೆಸಿ ಹೊರಗೆ ಹೋಗುವಂತೆ ಹೇಳಿದ್ರು.
ಭಾನುವಾರದ ಎಪಿಸೋಡ್ ಕೊನೆಯಲ್ಲಿ ನಟ ಸುದೀಪ್ ಫುಲ್ ಗರಂ ಆಗಿದ್ರು. ಅದೇ ಕೋಪದಲ್ಲೇ ಸುದೀಪ್ ಅವರು ಈ ಕೂಡಲೇ ನೀವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗಿ ಎಂದು ಶೋಭಾಗೆ ಹೇಳಿದ್ರು. ಬಾಗಿಲಿನಲ್ಲಿ ನಿಂತ ಶೋಭಾ ಶೆಟ್ಟಿ ಎಲಿಮಿನೇಟ್ ಆದ್ರೋ ಇಲ್ವಾ ಅನ್ನೋದು ಖಚಿತವಾಗಿರಲಿಲ್ಲ. ಸೋಮವಾರದ ಸಂಚಿಕೆಯಲ್ಲಿ ಶೋಭಾ ಹೊರಗೆ ಹೋಗಿದ್ದನ್ನು ತೋರಿಸಿದ್ದಾರೆ.
ಶೋಭಾ ಬಿಗ್ ಬಾಸ್ ಬಾಗಿಲ ಮುಂದೆ ನಿಂತು ಮತ್ತೆ ನಾಟಕ ಶುರು ಮಾಡಿದ್ರು. ಈಗ ಹೋಗ್ಬೇಕು ಅನಿಸ್ತಿಲ್ಲ ಅಂತ ಹೊಸ ಡ್ರಾಮಾ ಮಾಡಿದ್ರು. ಆದ್ರೆ ಬಿಗ್ ಬಾಸ್ ಮನೆಯ ಬಾಗಿಲು ಓಪನ್ ಆಯಿತು. ಶೋಭಾ ಹೊರಗೆ ಹೋದ್ರು.