ದೊಡ್ಮನೆಯಲ್ಲಿ ಬಿಗ್ ಬಾಸ್ ಸಖತ್ ಆಗಿಯೇ ಟಾಸ್ಕ್ ಕೊಟ್ಟಿದ್ದಾರೆ. ವಾರದಿಂದ ವಾರಕ್ಕೆ ಆಟಗಳು ಜೋರಾಗಿಯೇ ಇವೆ. ಕಳೆದ ವಾರವಿಡಿ ಇಡೀ ಮನೆ ರಾಜನ ಆಡಳಿತದಲ್ಲಿಯೇ ಇತ್ತು. ಉಗ್ರಂ ಮಂಜು ರಾಜನಾಗಿ ಅಟ್ಟಹಾಸ ಮರೆದರು. ಮೋಕ್ಷಿತಾ ಪೈ ರಾಜನ ಸಹೋದರಿಯಾಗಿಯೇ ಕೆಂಡಕಾರಿದರು. ಮನೆಯ ಸದಸ್ಯರು ಪ್ರಜೆಗಳಾಗಿ ನಲುಗಿದ್ದರು. ತ್ರಿವಿಕ್ರಮ್ ಮತ್ತು ರಜತ್ ಸೇನಾಧಿಪತಿಗಳಾಗಿಯೇ ಕಾಣಿಸಿಕೊಂಡಿದ್ದರು. ಆದರೆ, ಈ ವಾರ ಆಟ ಬೇರೆ ಇದೆ. ಎರಡು ತಂಡಗಳಾಗಿಯೇ ಬೇರೆಯಾದ ಮನೆಯ ಸದಸ್ಯರು ಚಾನೆಲ್ ಆಟ ಆಡುತ್ತಿದ್ದಾರೆ. ಆದರೆ, ಈ ಅಟದ ಫಲಿತಾಂಶವನ್ನ ಈ ಸಲ ಬಿಗ್ ಬಾಸ್ ಕೊಡ್ತಾ ಇಲ್ಲ. ಬದಲಾಗಿ ಬಿಗ್ ಬಾಸ್ ವೀಕ್ಷಕರೇ ಕೊಡುತ್ತಿದ್ದಾರೆ.
ದೊಡ್ಮನೆಯಲ್ಲಿ ಎರಡು ಚಾನೆಲ್ಗಳಾಗಿ ವಿಂಗಡಿಸಿದ್ದಾರೆ. ಮನೆಯಲ್ಲಿರುವ ಸ್ಪರ್ಧಿಗಳು ಎರಡು ತಂಡಗಳಾಗಿ ಡಿವೈಡ್ ಆಗಿದ್ದಾರೆ. ಪರಸ್ಪರ ಪೈಪೋಟಿಗೆ ಬಿದ್ದಿದ್ದಾರೆ. ಬ್ರೇಕಿಂಗ್ ನ್ಯೂಸ್ ಆಟವನ್ನು ಆಡಿದ್ದಾರೆ. 2 ತಂಡಗಳಿಗೂ ಕೊಡ್ತಿರುವ ಟಾಸ್ಕ್ಗಳನ್ನು ಪೈಪೋಟಿಗೆ ಬಿದ್ದು ಆಟ ಆಡುತ್ತಿದ್ದಾರೆ.
ಈ ಎರಡು ತಂಡಗಳಲ್ಲಿ ಯಾರು ಹೆಚ್ಚು ಮನರಂಜನೆ ನೀಡಿದರು ಎಂಬುದನ್ನು ನಿರ್ಧರಿಸುವುದು ಮಾತ್ರ ವೀಕ್ಷಕರು. ಹೌದು, ‘ಬಿಗ್ ಬಾಸ್ ಕನ್ನಡ’ ಶೋನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಇಂಥದ್ದೊಂದು ಟ್ವಿಸ್ಟ್ ನೀಡಲಾಗಿದೆ. ಈ ವಾರ ಅತೀ ಹೆಚ್ಚು ಮನರಂಜನೆ ಕೊಡುವ ವಾಹಿನಿಯ ತಂಡ ಯಾವುದು ಎಂದು ವೀಕ್ಷಕರೇ ನಿರ್ಧರಿಸಿ ವೋಟ್ ಮಾಡಬೇಕಿದೆ. ಜಿಯೋ ಸಿನಿಮಾ ಆಪ್ ಮೂಲಕ ವೀಕ್ಷಕರು ವೋಟ್ ಮಾಡಲಿದ್ದಾರೆ.
ದೊಡ್ಮನೆಯ ಎರಡು ಚಾನೆಲ್ಗಳಲ್ಲಿ ಪ್ರತೇಕ ಸವಿರುಚಿ ಆಟವನ್ನೆ ಆಡಿದ್ದಾರೆ. ಹನುಮಂತ ಮತ್ತು ತ್ರಿವಿಕ್ರಮ್ ಇಲ್ಲಿ ಸಮೋಸಾ ತಯಾರು ಮಾಡಿದ್ದಾರೆ. ಇವರ ಈ ಒಂದು ಆಟದಲ್ಲಿ ತ್ರಿವಿಕ್ರಮ್ ಹೆಚ್ಚಿನ ಅಂಕ ಪಡೆದುಕೊಂಡಿದ್ದಾರೆ. ಮನೆಯ ಸದಸ್ಯರುಗಳೇ ಈ ಎರಡೂ ಆಟಗಳಿಗೆ ಉಸ್ತುವಾರಿಗಳಾಗಿದ್ದಾರೆ. ಇವರೇ ಅಂಕಗಳನ್ನ ಕೊಟ್ಟಿದ್ದಾರೆ.
ಆದರೆ, ಈ ಒಂದು ಆಟದ ಒಟ್ಟು ಫಲಿತಾಂಶವನ್ನ ಈ ಸಲ ವೀಕ್ಷಕರೇ ಕೊಡುತ್ತಿದ್ದಾರೆ. ಡಿಸೆಂಬರ್-2 ರಾತ್ರಿ 11 ಗಂಟೆ ಮೇಲೆ ಜಿಯೋ ಸಿನಿಮಾ ಆ್ಯಪ್ನಲ್ಲಿಯೇ ಈ ವೋಟಿಂಗ್ ಲೈನ್ ಓಪನ್ ಆಗಿದೆ. ಈ ಒಂದು ವೋಟಿಂಗ್ ಲೈನ್ ಬುಧವಾರ ಡಿಸೆಂಬರ್ 4 ರವರೆಗೂ ಓಪನ್ ಆಗಿರುತ್ತದೆ. ಈ ಮೂಲಕ ವೀಕ್ಷಕರೇ ದೊಡ್ಮನೆಯ ಎರಡೂ ತಂಡಗಳ ಭವಿಷ್ಯವನ್ನ ಡಿಸೈಡ್ ಮಾಡಲಿದ್ದಾರೆ ಅಂತಲೇ ಹೇಳಬಹುದು.