ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಗಂಟೆಗಳ ಕಾಲ ಕುಳಿತುಕೊಂಡು ಕೆಲಸ ಮಾಡುತ್ತಾರೆ. ಇದರಿಂದಾಗಿ ಫಿಟ್ ಆಗಿರಲು ಕಷ್ಟವಾಗುತ್ತದೆ. ಅಲ್ಲದೇ ಹೆಚ್ಚಾಗಿ ಜಂಕ್ ಫುಡ್, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರಗಳನ್ನು ಸೇವಿಸುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ. ಇದರ ಪರಿಣಾಮದಿಂದಾಗಿ ಬೊಜ್ಜಿನ ಸಮಸ್ಯೆ ಎದುರಾಗುತ್ತದೆ.
ಜೊತೆಗೆ ನಾನಾ ರೋಗಗಳು ಕಾಡುತ್ತದೆ. ಎಷ್ಟೋ ಜನ ತೂಕ ಇಳಿಸಿಕೊಳ್ಳಲು ಕಷ್ಟಪಡುತ್ತಾರೆ. ಇದಕ್ಕಾಗಿ ಅನೇಕ ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ ಮತ್ತು ಜಿಮ್ಗೆ ಹೋಗಿ ಬೆವರಿಳಿಸುತ್ತಾರೆ. ಆದರೆ ಡಯಟ್ ಮಾಡದೇ ಮತ್ತು ಜಿಮ್ಗೆ ಹೋಗದೇ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ನಾವಿಂದು ನಿಮಗೆ ತಿಳಿಸುತ್ತೇವೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಬೇಗ ಸ್ಲಿಮ್ ಆಗಬಹುದು.
ವಾಕಿಂಗ್, ಸ್ವಿಮ್ಮಿಂಗ್, ಜಿಮ್ಗೆ ಹೋಗದೆ ತೂಕ ಇಳಿಸಿಕೊಳ್ಳಲು ವಾಕಿಂಗ್ ಉತ್ತಮ ಮಾರ್ಗವಾಗಿದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ವಾಕಿಂಗ್ ಮಾಡಿ. ಸಾಧ್ಯವಾದಷ್ಟು ಹೆಚ್ಚು ವಾಕಿಂಗ್ ಮಾಡಿ, ಒಂದು ವೇಳೆ ಬೆಳಗ್ಗೆ ಹೊತ್ತು ನಿಮಗೆ ಸಮಯವಿಲ್ಲದಿದ್ದರೆ, ರಾತ್ರಿ ಊಟದ ನಂತರ 15-20 ನಿಮಿಷಗಳ ಕಾಲ ನಿಧಾನವಾಗಿ ವಾಕ್ ಮಾಡಿ. ನಿಮಗೇನಾದರೂ ವಾಕಿಂಗ್ ಮಾಡಲು ಸಾಧ್ಯವಿಲ್ಲದಿದ್ದರೆ, ದಿನಾ ಸ್ವಿಮ್ಮಿಂಗ್ ಮಾಡುವ ಮೂಲಕ ತೂಕವನ್ನು ವೇಗವಾಗಿ ಇಳಿಸಿಕೊಳ್ಳಿ.
ಮನೆಯ ಊಟ ಇತ್ತೀಚಿನ ದಿನಗಳಲ್ಲಿ ಅನೇಕ ಮಂದಿ ಹೊರಗೆ ಸಿಗುವ ಜಂಕ್ ಫುಡ್ ಅಥವಾ ಕರಿದ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನಲು ಬಯಸುತ್ತಾರೆ. ಆದರೆ ಮನೆಯಲ್ಲಿ ತಯಾರಿಸಿದ ಆಹಾರ ಆರೋಗ್ಯಕರವಾಗಿರುತ್ತದೆ. ಆದ್ದರಿಂದ ಇದನ್ನು ಮಾತ್ರ ಸೇವಿಸಿ. ತೂಕ ನಷ್ಟಕ್ಕೆ ಫೈಬರ್ ಮತ್ತು ಪ್ರೋಟೀನ್ ಸಮೃದ್ಧವಾಗಿರುವ ಆಹಾರ ತಿನ್ನಬೇಕು. ನಾರಿನಂಶವಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯು ಹೆಚ್ಚು ಕಾಲ ತುಂಬಿರುತ್ತದೆ, ಇದರಿಂದಾಗಿ ಅನಗತ್ಯ ಆಹಾರ ಸೇವನೆ ನಿಲ್ಲುತ್ತದೆ. ಇದಷ್ಟೇ ಅಲ್ಲದೇ ಪ್ರತಿದಿನ ಆಹಾರದೊಂದಿಗೆ ಹುಳಿ ಮೊಸರು ಮತ್ತು ಸಲಾಡ್ ಅನ್ನು ಸೇರಿಸಿಕೊಳ್ಳಿ.
ಹೆಚ್ಚು ನೀರು ಕುಡಿಯಿರಿ ಪ್ರತಿದಿನ ದೇಹವನ್ನು ಹೈಡ್ರೀಕರಿಸಲು ಹೆಚ್ಚಾಗಿ ನೀರು ಕುಡಿಯಿರಿ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ ಮತ್ತು ಹೊಟ್ಟೆಯನ್ನು ಶುದ್ಧಗೊಳಿಸುತ್ತದೆ. ಇದರಿಂದಾಗಿ ದೇಹದ ತೂಕವನ್ನು ಸುಲಭವಾಗಿ ಇಳಿಸಿಕೊಳ್ಳಬಹುದು.
ತೂಕ ಇಳಿಕೆ ವ್ಯಾಯಾಮ ಮಾಡುವುದು ಬಹಳ ಮುಖ್ಯ. ಇದು ಹೆಚ್ಚುವರಿ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಜಿಮ್ಗೆ ಹೋಗದೇ, ನೀವು ಮನೆಯಲ್ಲಿಯೇ ಮೆಟ್ಟಿಲುಗಳನ್ನು ಹತ್ತುವುದು, ಸ್ಕ್ವಾಟ್ಗಳು, ಜಂಪಿಂಗ್ ಜಾಕ್ಗಳು, ಪುಷ್-ಅಪ್ಗಳಂತಹ ವಿವಿಧ ವ್ಯಾಯಾಮ ಮತ್ತು ಯೋಗವನ್ನು ಮಾಡಬಹುದು.
ಇದು ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ. ಅಲ್ಲದೇ ನೀವು ಸಣ್ಣ ಆಗಲು ಸೈಕ್ಲಿಂಗ್, ಈಜು ಮತ್ತು ನೃತ್ಯದಂತಹ ಚಟುವಟಿಕೆಗಳನ್ನು ಸಹ ಮಾಡಬಹುದು.