ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಅಭಿನಯಿಸಿದ ಪುಷ್ಪ-2 ಸಿನಿಮಾ ಡಿಸೆಂಬರ್ 5 ರಂದು ತೆರೆಗೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ಹಲವು ಕಡೆ ಚಿತ್ರದ ಪ್ರಮೋಶನ್ಗೆ ತೆರಳಿದ್ದ ಪುಷ್ಪ-2 ಸಿನಿಮಾ ಟೀಂ ಕರುನಾಡಿಗೆ ಎಂಟ್ರಿ ಕೊಟ್ಟಿಲ್ಲ. ಕರ್ನಾಟಕದಲ್ಲಿ ನಡೆಯಬೇಕಿದ್ದ ಪ್ರೀ- ರಿಲೀಸ್ ಇವೆಂಟ್ ಕ್ಯಾನ್ಸಲ್ ಆಗಿದೆ. ಎಲ್ಲಾ ರಾಜ್ಯಗಳಲ್ಲೂ ಪುಷ್ಪ 2 ಸಿನಿಮಾ ಡಿಸ್ಟ್ರಿಬ್ಯೂಟ್ ಮಾಡಿದ್ದಾರೆ.
ಇಷ್ಟಕ್ಕೂ ಕರ್ನಾಟಕಕ್ಕೆ ಪುಷ್ಪ-2 ಸಿನಿಮಾ ವಿತರಣಾ ಹಕ್ಕುಗಳನ್ನು ತಂದಿದ್ಯಾರು..?, ಯಾರ್ಯಾರು ಎಲ್ಲೆಲ್ಲಿ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ, ವಿತರಣಾ ಹಕ್ಕುಗಳನ್ನು ತಂದಿದ್ದು ಎಷ್ಟು ಕೋಟಿಗೆ..? ಲಾಭ ಪಡೆದದ್ದು ಎಷ್ಟು ಕೋಟಿ ಗೊತ್ತಾ..? ಇದರ ಬಗ್ಗೆ ಗ್ಯಾರಂಟಿ ನ್ಯೂಸ್ ಪಿನ್ ಟು ಪಿನ್ ಡಿಟೇಲ್ಸ್ ಬಿಚ್ಚಿಟ್ಟಿದೆ.
ಕರ್ನಾಟಕ ವಿತರಣಾ ಹಕ್ಕುಗಳನ್ನು ಬಳ್ಳಾರಿ ಮೂಲದ ಲಕ್ಷ್ಮೀಪತಿ ರೆಡ್ಡಿ 31 ಕೋಟಿ ಮೊತ್ತಕ್ಕೆ ಖರೀದಿಸಿದ್ದಾರೆ. ರಿಲೀಸ್ಗೂ ಮೊದಲೇ 15 ಕೋಟಿ ಲಾಭದಲ್ಲಿರೋ ಲಕ್ಷ್ಮೀಪತಿ ರೆಡ್ಡಿ, ಬೆಂಗಳೂರು ಮಲ್ಟಿಪ್ಲೆಕ್ಸ್ ಗಳಲ್ಲಿ ಹೊಂಬಾಳೆ ಫಿಲಂಸ್ ಡಿಸ್ಟ್ರಿಬ್ಯೂಷನ್ ಮಾಡಿದೆ. ಬೆಂಗಳೂರು ಸಿಂಗಲ್ ಸ್ಕ್ರೀನ್ಸ್ ನಲ್ಲಿ ಲಕ್ಷ್ಮೀಪತಿ ರೆಡ್ಡಿಯೇ ವಿತರಣೆ ಮಾಡಿದ್ದಾರೆ. ರಾಜ್ಯಾದ್ಯಂತ ಸಿಂಗಲ್ ಸ್ಕ್ರೀನ್ & ಮಲ್ಟಿಪ್ಲೆಕ್ಸ್ ಗಳಲ್ಲಿ ಗೋಕುಲ್ ಫಿಲಂಸ್ ವಿತರಣೆ ಮಾಡಿದೆ.