ದಾವಣಗೆರೆಯಲ್ಲಿ ವಿಜಯೇಂದ್ರ ಟೀಂ V/S ಯತ್ನಾಳ್ ಟೀಂ..! ಇಬ್ಬರೂ ಮುಖಾಮುಖಿಯಾಗಿವ ಸಾಧ್ಯತೆ ಇದೆ. ವಕ್ಫ್ ಹೆಸರಲ್ಲಿ ದಾವಣಗೆರೆಯಲ್ಲಿ ಬೃಹತ್ ಸಮಾವೇಶಕ್ಕೆ ಎರಡೂ ಟೀಂ ಸಜ್ಜಾಗಿದೆ. ಬಿಜೆಪಿ ಬಣಗಳ ಬಲಾಬಲ ಪ್ರದರ್ಶನಕ್ಕೆ ವೇದಿಕೆಯಾಗಲಿದ್ಯಾ ದಾವಣಗೆರೆ ಸಮಾವೇಶ? ಎಂಬುದನ್ನ ನಾವು ಕಾದು ನೋಡಬೇಕಿದೆ.
ಹೈಕಮಾಂಡ್ ಒಪ್ಪಿಗೆಗೆ ಕಾಯುತ್ತಿರುವ ರೇಣುಕಾಚಾರ್ಯ ಹಾಗೂ ಯತ್ನಾಳ್ ಟೀಂ. ಎಂ.ಪಿ.ರೇಣುಕಾಚಾರ್ಯ ಬಣದಿಂದ ದಾವಣಗೆರೆ ಸಮಾವೇಶ ಘೋಷಣೆ ಮಾಡಿದ್ದಾರೆ. ವಿಜಯೇಂದ್ರ ಬಣದ ಘೋಷಣೆ ಬೆನ್ನಲ್ಲೇ ಯತ್ನಾಳ್ ಬಣದಿಂದಲೂ ಸಮಾವೇಶಕ್ಕೆ ಪ್ಲಾನ್ ಮಾಡಲಾಗಿದೆ. ಈಗ ಬಿಜೆಪಿ ಹೈಕಮಾಂಡ್ ಮುಂದಿದೆ ಎರಡೂ ಬಣದ ಸಮಾವೇಶದ ಸಮ್ಮತಿಯ ಪತ್ರ. ಈಗಾಗಲೇ ವಕ್ಫ್ ಹೋರಾಟದ ಪ್ರತ್ಯೇಕ ಪ್ರವಾಸ ಮಾಡಿ ಬಿಜೆಪಿ ಬಣಗಳಿಂದ ಮುಜುಗರ ಉಂಟಾಗಿದೆ.
ಹೈಕಮಾಂಡ್ ನಾಯಕರಿಗೆ ಎರಡು ಬಣದ ಶಕ್ತಿ ಪ್ರದರ್ಶನ ತಲೆನೋವು ತಂದಿದೆ. ಎರಡೂ ಬಣಗಳ ಸಮಾವೇಶಕ್ಕೆ ಒಪ್ಪಿಗೆ ಕೊಡುತ್ತಾ ಬಿಜೆಪಿ ಹೈಕಮಾಂಡ್..? ಎಂಬುದು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯಾಗುತ್ತಿರುವ ವಿಷಯವಾಗಿದೆ. ರಾಜ್ಯ ಬಿಜೆಪಿ ಬಣ ಜಗಳದಿಂದ ಕಂಗಾಲಾಗಿರೋ ಹೈಕಮಾಂಡ್ ನಡೆಯೇನು? ವಿಜಯೇಂದ್ರ-ಯತ್ನಾಳ್ ಬಣಗಳ ಜಿದ್ದಾಜಿದ್ದಿಗೆ ಹೈಕಮಾಂಡ್ ಉತ್ತರ ಏನು? ಎಂಬುದು ಇನ್ನೂ ಸಸ್ಪೆನ್ಸ್ ಆಗಿ ಉಳಿದಿದೆ.