ವೈಲ್ಡ್ ಕಾರ್ಡ್ ಎಂಟ್ರಿ ಆಗಿದ್ದ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಕ್ವಿಟ್ ಮಾಡಿದ್ದು ಗೊತ್ತೇ ಇದೆ. ಬಿಗ್ ಬಾಸ್ ಮನೆಯಿಂದ ಐಶ್ವರ್ಯ ಸಿಂಧೋಗಿ ಔಟ್ ಆಗುತ್ತಾರೆ ಎಂದು ಹೆಚ್ಚು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗಿದ್ದವು.
ಹೇಳಿಕೊಳ್ಳುವಂತ ಆಟಗಳನ್ನ ಏನೂ ಆಡಿಲ್ಲ ಅನ್ನುವ ಫೀಲ್ ಕೂಡ ಇದೆ. ಮನರಂಜನೆ ವಿಚಾರ ಅಂತ ಬಂದ್ರೂ ಅಷ್ಟೇನೆ ಬಿಡಿ. ಹೆಚ್ಚಾಗಿ ಡ್ಯಾನ್ಸ್ ಮಾಡಿನೂ ಇಲ್ಲ. ನಗಿಸೋ ಸಾಹಸಗಳನ್ನ ಕೂಡ ಮಾಡಿಲ್ಲ ಎಂಬಂತಹ ಮಾತುಗಳು ಕೇಳಿ ಬಂದಿದ್ದವು. ಬಳಿಕ ಮನೆಯಿಂದ ಶೋಭಾ ಶೆಟ್ಟಿ ಅವರು ಔಟ್ ಆದರು. ಮೊದಲು ಶೋಭಾ ಅವರು ಸೇಫ್ ಆದಾಗ ತಾನು ಮುಂದೆ ಆಡುವುದಾಗಿ ಭರವಸೆ ಕೊಟ್ಟಿದ್ದರು ಶೊಭಾ. ಆದರೆ ಕೊನೆಯ ಹಂತದಲ್ಲಿ ನನ್ನನ್ನು ಹೊರಗೆ ಕಳುಹಿಸಿ ಎಂದು ಬಿಕ್ಕಿ ಬಿಕ್ಕಿ ಅತ್ತಿದ್ದರು.
ಅನಾರೋಗ್ಯದ ಹಿನ್ನೆಲೆ ಅವರ ಆಟಕ್ಕೆ ಫುಲ್ ಸ್ಟಾಪ್ ಇಟ್ಟಿದ್ದಾರೆ. ದೊಡ್ಮನೆಯಿಂದ ಎಲಿಮಿನೇಟ್ ಆಗ್ತಿದ್ದಂತೆ ನಟಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯ ಬೆಡ್ ಮೇಲಿಂದಲೇ ಫ್ಯಾನ್ಸ್ಗೆ ನಟಿ ಸಂದೇಶ ಕೊಟ್ಟಿದ್ದಾರೆ. ನಾನು ಶೀಘ್ರದಲ್ಲೇ ಹಿಂತಿರುಗುತ್ತೇನೆ ನಿಮ್ಮ ಪ್ರೀತಿಗಾಗಿ ತುಂಬಾ ಧನ್ಯವಾದಗಳು ಎಂದು ಶೋಭಾ ಶೆಟ್ಟಿ ಫ್ಯಾನ್ಸ್ಗೆ ಸಂದೇಶ ನೀಡಿದ್ದಾರೆ. ಆಸ್ಪತ್ರೆಯ ಬೆಡ್ನಿಂದಲೇ ಅಭಿಮಾನಿಗಳ ಪ್ರೀತಿಗೆ ನಟಿ ಪ್ರತಿಕ್ರಿಯೆ ನೀಡಿದ್ದಾರೆ.