‘ಬಿಗ್ ಬಾಸ್ ಕನ್ನಡ 11’ ವೈಲ್ಡ್ ಕಾರ್ಡ್ ಮೂಲಕ ಪ್ರವೇಶಿಸಿ ಜನಪ್ರಿಯತೆ ಪಡೆದ ಶೋಭಾ ಶೆಟ್ಟಿ, ಕೇವಲ ಎರಡು ವಾರಗಳಲ್ಲಿ ಅನಾರೋಗ್ಯದ ಕಾರಣದಿಂದ ಮನೆಯಿಂದ ಹೊರಬಂದಿದ್ದಾರೆ. ತೆಲುಗು ಬಿಗ್ ಬಾಸ್ ಸೀಸನ್ 7ರಲ್ಲಿ ತೀವ್ರ ಸದ್ದು ಮಾಡಿದ್ದ ಶೋಭಾ, ಕನ್ನಡದ ಮನೆಯಲ್ಲಿ ಹೆಚ್ಚು ಕಾಲ ಉಳಿಯಲು ಸಾಧ್ಯವಾಗದೇ ಹತಾಶೆಯೊಂದಿಗೆ ಮನೆಬಿಟ್ಟು ಹೊರಗೆ ನಡೆದಿದ್ದಾರೆ. ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ‘ಫೈರ್ ಲೇಡಿ’ ಎಂದು ಬಿಗ್ ಬಾಸ್ ಮನೆಯಲ್ಲಿ ಹೆಸರು ಗಳಿಸಿದ್ದ ಶೋಭಾ ಶೆಟ್ಟಿ, ವೀಕೆಂಡ್ ಶೋ ವೇಳೆ ಕಿಚ್ಚ ಸುದೀಪ್ ಮುಂದೆ ಭಾವೋದ್ದೀಪಕವಾಗಿ ಮಾತನಾಡಿದರು. “ಆರೋಗ್ಯವೇ ನನ್ನ ಮೊದಲ ಆದ್ಯತೆ ಇದಕ್ಕೆ ಸಂಬಂಧಿಸಿದಂತೆ ಆಟವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ,ಎಂದು ಹೇಳಿದ್ದಾರೆ. ಈ ನಿರ್ಧಾರದಿಂದ ಶಿಶಿರ್ ಮತ್ತು ಐಶ್ವರ್ಯಾ ಎಂಬ ಸ್ಪರ್ಧಿಗಳಿಗೆ ಮತ್ತೆ ಆಟದಲ್ಲಿ ತಮ್ಮ ಸ್ಥಾನವನ್ನು ಸಮರ್ಥಿಸಿಕೊಳ್ಳಲು ಅವಕಾಶ ಸಿಕ್ಕಾಂತಾಯಿತು..
ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶೋಭಾ ಶೆಟ್ಟಿ.ಆಸ್ಪತ್ರೆಯ ಬೆಡ್ನಿಂದಲೇ ಅಭಿಮಾನಿಗಳಿಗೆ ವಿಡಿಯೋ ಸಂದೇಶ ಕಳುಹಿಸಿದ್ದಾರೆ ವಿವರಿಸಿದ್ದಾರೆ: “ನಾನು ಗುಣಮುಖವಾಗುತ್ತಿದ್ದೇನೆ. ನಿಮ್ಮ ಪ್ರೀತಿಗೆ ಮತ್ತು ಬೆಂಬಲಕ್ಕೆ ನಾನು ಆಭಾರಿ. ಶೀಘ್ರದಲ್ಲೇ ಮತ್ತೆ ನಿಮ್ಮ ಮುಂದೆ ಹಾಜರಾಗುತ್ತೇನೆ,” ಎಂದು ಹೇಳಿದರು. ಶೋಭಾ ಅವರ ಈ ಸಂದೇಶ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.