ರಾಜ್ಯ ಬಿಜೆಪಿ ಉಸ್ತುವಾರಿ ವಿರುದ್ಧ ರಾಜ್ಯದ ಸಂಸದರು ಗರಂ ಆಗಿದ್ದಾರೆ. ಬಣ ಬಡಿದಾಟ ಹೆಚ್ಚಾದ್ರು ಕ್ರಮಕ್ಕೆ ಮುಂದಾಗದ ರಾಜ್ಯ ಉಸ್ತುವಾರಿ ರಾಧಾ ಮೋಹನ್ದಾಸ ವಿರುದ್ದ ಸಂಸದರು ಸಿಟ್ಟಾಗಿದ್ದಾರೆ. ಯತ್ನಾಳ್-ವಿಜಯೇಂದ್ರ ಬಣ ಬಡಿದಾಟದಿಂದ ಪಕ್ಷಕ್ಕೆ ಡ್ಯಾಮೇಜ್ ಆಗುತ್ತಿದೆ. ಬಣ ಬಡಿದಾಟಕ್ಕೆ ತಕ್ಷಣವೇ ಬ್ರೇಕ್ ಹಾಕುವಂತೆ ಸಂಸದರು ಒತ್ತಾಯಿಸಿದ್ದಾರೆ. ದೆಹಲಿಯಲ್ಲಿ ರಾಜ್ಯ ಉಸ್ತುವಾರಿ ಜೊತೆ ಸಂಸದರ ಚರ್ಚೆ ವೇಳೆ ಆಗ್ರಹಿಸಿದ್ದಾರೆ.
ಯತ್ನಾಳ್ ಬೀದಿ ರಂಪಾಟ, ಪ್ರತ್ಯೇಕ ಹೋರಾಟಕ್ಕೆ ಬ್ರೇಕ್ ಹಾಕಿ, ರಾಜ್ಯಕ್ಕೆ ಭೇಟಿ ನೀಡಿ ಶಾಸಕರು, ಪಕ್ಷದ ನಾಯಕರ ಅಳಲು ಆಲಿಸಿ, ರಾಜ್ಯ ಉಸ್ತುವಾರಿಗೆ ಸಂಸದ ಸೋಮಣ್ಣ, ಬೊಮ್ಮಾಯಿ, ಡಾ. ಸುಧಾಕರ್ ಒತ್ತಾಯಿಸಿದ್ದಾರೆ.
ಬಣ ಬಡಿದಾಟಕ್ಕೆ ಬಿಜೆಪಿ ಹೈಕಮಾಂಡ್ ಸಂಧಾನ ಸೂತ್ರ ಯಶಸ್ವಿಯಾಗಿದೆ ಎನ್ನಬಹುದು. ನೋಟಿಸ್ ನಂತರ ಹೈಕಮಾಂಡ್ ನಿಂದ ಯತ್ನಾಳ್ ಮನವೊಲಿಕೆ ನಡೆದಿದೆ. ರಾಜಾಧ್ಯಕ್ಷರ ಜೊತೆಗೂಡಿ ಪಕ್ಷ ಸಂಘಟನೆ-ಹೋರಾಟ ಮಾಡಿ. ಹೋರಾಟ ಓಕೆ. ಬಹಿರಂಗ ರಂಪಾಟ ಯಾಕೆ ಎಂದು ಯತ್ನಾಳ್ ಗೆ ಸಲಹೆ ನೀಡಿದ್ದಾರೆ.
ಶಿಸ್ತು ಸಮಿತಿ ಅಧ್ಯಕ್ಷ ಓ ಪಾಟಕ್ ರಿಂದ ಯತ್ನಾಳ್ ಸಂಧಾನವಾಗಿದೆ. ಕೇಂದ್ರ ಹೈಕಮಾಂಡ್ ಎಚ್ಚರಿಕೆ ನಂತರ ಸಂಧಾನಕ್ಕೆ ಯತ್ನಾಳ್ ಓಕೆ ಅಂದಿದ್ದರು. ಬಿಎಸ್ ಯಡಿಯೂರಪ್ಪಗೂ ಸಂಧಾನದ ಸಲಹೆ ನೀಡಿತ್ತು ಶಿಸ್ತು ಸಮಿತಿ. ಕೇಂದ್ರ ಶಿಸ್ತು ಸಮಿತಿ ಸಲಹೆ ನಂತರ ಬಿಎಸ್ ಯಡಿಯೂರಪ್ಪ ಸಾಪ್ಟ್ ಕಾರ್ನರ್ ಆಗಿದ್ದಾರೆ.
ಯತ್ನಾಳ್ ವಿಚಾರದಲ್ಲಿ ಸಾಫ್ಟ್ ಕಾರ್ನರ್ ಆಗಿದ್ದಾರೆ ಬಿ ಎಸ್ ಯಡಿಯೂರಪ್ಪ ನವರು. ಯತ್ನಾಳ್ ನಮ್ಮವರೇ ಎಂದು ಬಿಎಸ್ ವೈ ಹೇಳಿಕೆಗೆ ಯತ್ನಾಳ್ ಶಾಘ್ಲನೆ ವ್ಯಕ್ತಪಡಿಸಿದ್ದಾರೆ. ಬಿಎಸ್ ವೈ ಹೇಳಿಕೆಯನ್ನ ಬಸವನಗೌಡ ಪಾಟೀಲ ಯತ್ನಾಳ್ ಅವರು ಸ್ವಾಗತಿಸಿದ್ದಾರೆ.