ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿರುವ ಪುಷ್ಪ-2 ವಿಶ್ವದಲ್ಲೇ ಹಲ್ಚಲ್ ಸೃಷ್ಟಿಸುವ ಸೂಚನೆ ನೀಡಿದೆ. ಇಂದು ಪುಷ್ಪ-2 ರಿಲೀಸ್ ಆಗಿದ್ದು, ಅಭಿಮಾನಿಗಳು ಫಸ್ಟ್ ಡೇ ಫಸ್ಟ್ ಶೋ ಅನ್ನ ನೋಡಿ ಥ್ರಿಲ್ ಆಗಿದ್ದಾರೆ. ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸಿದ ಬೆನ್ನಲ್ಲೇ ಎಲ್ಲೆಲ್ಲೂ Pushpa 2 The Rule ಚಿತ್ರದ ಬಗ್ಗೆಯೇ ಮಾತನಾಡಲು ಶುರುಮಾಡಿದ್ದಾರೆ. ಪುಷ್ಪ 2 ಚಿತ್ರ ದೇಶಾದ್ಯಂತ ಟ್ರೆಂಡ್ ಆಗ್ತಿದೆ.
ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ತೆರೆಕಂಡು ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ಸೂಪರ್ ಹಿಟ್ ಎನ್ನುವ ಮಾತುಗಳು ಕೇಳಿ ಬರ್ತಿದೆ. ಸುಮಾರು 3ವರ್ಷಗಳಿಂದ ಪುಷ್ಪ ಬ್ಲಾಕ್ ಬಸ್ಟರ್ ಹಿಟ್ ನ ಸೀಕ್ವೆಲ್ ಗಾಗಿ ದೇಶಾದ್ಯಂತ ಸಿನಿ ಪ್ರೇಮಿಗಳು ಕಾತುರದಿಂದ ಕಾಯುತ್ತಿದ್ರು. ಇದಕ್ಕೆಲ್ಲಾ ಕಾರಣ ಪುಷ್ಪರಾಜ್ ಪಾತ್ರ ಸೃಷ್ಟಿಸಿದ್ದ ಪ್ರಭಾವ ಎನ್ನಬಹುದು. ಪುಷ್ಪ 2 ಸಿನಿಮಾ ಇದೀಗ ತೆರೆಗೆ ಬಂದಿದ್ದು, ಪುಷ್ಪರಾಜ್ ಪಾತ್ರದಲ್ಲಿ ಮ್ಯಾನರಿಸಂ ಮತ್ತು ಡೈಲಾಗ್ಗಳು ಮಾಸ್ ಕ್ಲಾಸ್ ಮತ್ತು ಯೂತ್ ಎಲ್ಲರಿಗೂ ಇಷ್ಟವಾಗಿದೆ.
ಇನ್ನು ಪುಷ್ಪ 2 ಸಿನಿಮಾದಲ್ಲಿ ಪುಷ್ಪ 2ಗೆ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. ಕನ್ನಡ ಚಿತ್ರದ ಮೂಲಕ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ರಶ್ಮಿಕಾ ಇದೀಗ ಟಾಲಿವುಡ್ ನ ಟಾಪ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ. ಪುಷ್ಪ ಸಿನಿಮಾದಲ್ಲಿ ಪುಷ್ಪರಾಜ್ ಪತ್ನಿ ಶ್ರೀವಲ್ಲಿ ಆಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಕೊಟ್ಟ ಪಾತ್ರವನ್ನ ರಶ್ಮಿಕಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಜೊತೆಗೆ ಹಾಡುಗಳಲ್ಲು ಸಹ ಮೈ ಚಳಿ ಬಿಟ್ಟು ಕುಣಿದಿದ್ದಾರೆ. ಅಲ್ಲು ಅರ್ಜುನ್ಗೆ ಮ್ಯಾಚ್ ಮಾಡುವಂತೆ ಡ್ಯಾನ್ಸ್ ಮಾಡಿದ್ದಾರೆ.
ಪುಷ್ಪ 2 ಚಿತ್ರದಲ್ಲಿ ಕನ್ನಡದ ನಟ ತಾರಕ್ ಪೊನ್ನಪ್ಪ ಕೂಡ ಕಾಣಿಸಿಕೊಂಡಿದ್ದಾರೆ. ವಿಲನ್ ಪಾತ್ರದಲ್ಲಿ ಎಲ್ಲರ ಗಮನಸೆಳೆದಿದ್ದಾರೆ. ತನ್ನ ಪಾತ್ರಕ್ಕಾಗಿ ತಾರಕ್ ಪೊನ್ನಪ್ಪ ಅರ್ಧ ತಲೆ ಬೋಳಿಸಿಕೊಂಡಿದ್ರು. ಚಪ್ಪಲಿಯನ್ನು ಕತ್ತಿಗೆ ಹಾಕಿಕೊಂಡಿದ್ರು. ‘ಪುಷ್ಪ 2’ ಚಿತ್ರದ ದ್ವಿತೀಯಾರ್ಧದಲ್ಲಿ ಎಂಟ್ರಿ ಕೊಟ್ಟು ಅಬ್ಬರಿಸಿದ್ದಾರೆ. ಪರ ಭಾಷೆಯಲ್ಲೂ ತಾರಕ್ ಗೆ ಬೇಡಿಕೆ ಹೆಚ್ಚಿದೆ.
ಸ್ಯಾಂಡಲ್ ವುಡ್ ನಟ ಧನಂಜಯ್ ಈಗ ಬಹುಭಾಷಾ ನಟ. ಸ್ಯಾಂಡಲ್ ವುಡ್ ನಲ್ಲಿ ಡಾಲಿ ಆಗಿ ಮಿಂಚಿದ ಅವರು ಪುಷ್ಪ 1 ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಜಾಲಿ ಆಗಿ ಕಾಣಿಸಿಕೊಂಡಿದ್ದರು. ‘ಪುಷ್ಪ’2 ಸಿನಿಮಾದಲ್ಲಿ ಸೆಕೆಂಡ್ ಹಾಫ್ ನಲ್ಲಿ ಜಾಲಿ ರೆಡ್ಡಿ ಎಂಟ್ರಿ ಆಗುತ್ತೆ. ವಿಲನ್ ಪಾತ್ರದಲ್ಲಿ ಧನಂಜಯ್ ಅಬ್ಬರಿಸಿದ್ದರು. ಡಾಲಿ ಕ್ಲೈಮ್ಯಾಕ್ಸ್ಗೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಇನ್ನು ಪಾರ್ಟ್ 3ರಲ್ಲಿ ಡಾಲಿದೇ ಹವಾ ಪಕ್ಕಾ ಎನ್ನಲಾಗ್ತಿದೆ.
ಭರಾಟೆ ಬ್ಯೂಟಿ, ಕನ್ನಡತಿ, ಡಾ. ಶ್ರೀಲೀಲಾ ಒಂದೇ ಒಂದು ಹಾಡಿಗೆ ಎಂಟ್ರಿ ಕೊಟ್ರೂ, ಮಸ್ತ್ ಆಗಿ ಕುಣಿದಿದ್ದಾರೆ. ಅಭಿಮಾನಿಗಳು ಥಿಯೇಟರ್ ನಲ್ಲೇ ಹುಚ್ಚೆದ್ದು ಕುಣಿಯುವಂತೆ ಮಾಡಿದ್ದಾರೆ. ಸ್ಪೆಷಲ್ ಸಾಂಗಿಗೆ ಶ್ರೀಲೀಲಾ ಡ್ಯಾನ್ಸ್ ಸೂಪರೋ ಸೂಪರ್ ಎಂದು ಜನ ಶಿಳ್ಳೆ ಹೊಡೆದಿದ್ದಾರೆ.
ಪುಷ್ಪ 2 ಚಿತ್ರದಲ್ಲಿನ ಫೈಟ್ ಮತ್ತು ಸೆಂಟಿಮೆಂಟ್ ದೃಶ್ಯಗಳು ಸಿನಿಮಾದ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕ್ಯಾಮೆರಾ ವರ್ಕ್, ಡೈರೆಕ್ಷನ್ ನೆಕ್ಸ್ಟ್ ಲೆವೆಲ್ಗೆ ಕೊಂಡೊಯ್ದಿದೆ ಎಂದು ಫ್ಯಾನ್ಸ್ ಮಾತಾಡಿಕೊಳ್ತಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮತ್ತು ದೇವಿ ಶ್ರೀ ಪ್ರಸಾದ್ ಸಂಗೀತ ಸಂಯೋಜಿಸಿದ್ದಾರೆ. ಸುನಿಲ್, ಫಹಾದ್ ಫಾಜಿಲ್, ರಾವ್ ರಮೇಶ್ ಮೊದಲಾದ ತಾರಾಬಳಗ ಇದೆ. ಸುಮಾರು 400 ರಿಂದ 500 ಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಮಾಡಲಾಗಿದೆ.