ಹಾಸನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಸಮಾವೇಶದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅಬ್ಬರದ ಭಾಷಣ ಮಾಡಿದ್ದಾರೆ. ಎಂದಿನಂತೆ ಕಾಂಗ್ರೆಸ್ ಶಕ್ತಿ ದೇಶದ ಶಕ್ತಿ ಎಂದು ತಮ್ಮ ಭಾಷಣ ಶುರು ಮಾಡಿದರು. ೨೫ ವರ್ಷದ ನಂತರ ಸಂಸತ್ತಿನಲ್ಲಿ ಲೋಕಸಭಾ ಸಂಸದನ್ನಾಗಿ ಶ್ರೇಯಸ್ ಪಟೇಲ್ ಅವರನ್ನ ಆಯ್ಕೆ ಮಾಡಿದೀರ. ಅದಕ್ಕೆ ನಿಮಗೆಲ್ಲಾ ಅಭಿನಂದನೆಗಳು ಎಂದು ಹಾಸನ ಜನತೆಗೆ ಧನ್ಯವಾದ ತಿಳಿಸಿದರು.
ಸರ್ಕಾರದ ಶಕ್ತಿ ನೂರೆಂಟು, 5 ಗ್ಯಾರಂಟಿ ಪರ್ಮನೆಂಟ್, 2028ಕ್ಕೆ ನಮ್ಮ ಸರ್ಕಾರ ಬರೋದು ಪರ್ಮನೆಂಟ್ ಎಂದು ಹೇಳಿದರು. ಅಶೋಕ್, ವಿಜಯೇಂದ್ರ ತಂತ್ರ ಕುತಂತ್ರ ಹಾಸನದಲ್ಲಿ ನಡೆದಿಲ್ಲ, ಜನಶಕ್ತಿ ಉತ್ತರ ಕೊಟ್ಟಿದೆ. ಸಂಡೂರಿನಲ್ಲೂ ಸಹ ಉತ್ತರ ಕೊಟ್ಟಿದೆ. ಶಿಗ್ಗಾಂವಿಯಲ್ಲಿ ಉತ್ತರ ಕೊಟ್ಟಿದೆ. ಚನ್ನಪಟ್ಟಣದಲ್ಲಿ ಸಹ ನಿಮ್ಮನ್ನ ಜನ ಒಪ್ಪಿಲ್ಲ. ದೇವೇಗೌಡ್ರು ಹೇಳಿದ್ರು ಈ ಸರ್ಕಾರವನ್ನ ಕಿತ್ತು ಎಸೆಯುತ್ತೇನೆ ಅಂತ. ದೇವೇಗೌಡ್ರೆ ಅದು ಹಾಸನದ ಆಲೂಗಡ್ಡೆ ಗಿಡ ಅಲ್ಲ, 128 ಶಾಸಕರ ಜನ ಬೆಂಬಲದ ಸರ್ಕಾರ ಎಂದು ಮಾಜಿ ಪ್ರಧಾನಿ ದೇವೇಗೌಡರ ವಿರುದ್ದ ವಾಗ್ದಾಳಿ ನಡೆಸಿದರು.
ತಿರುಪತಿ ದೇವರಿಗೆ ನಂದಿನಿ ಹಾಲು ಹೋಗ್ತ ಇದೆ. ಇದು ರಾಜ್ಯದ ರೈತರಿಗೆ ಸಿಕ್ಕ ದೊಡ್ಡಶಕ್ತಿ. ನಾವು ವಚನ ಭ್ರಷ್ಟರಲ್ಲ , ದೇಶವನ್ನ ಉಳಿಸಬೇಕೆಂದ್ರೆ ಕಾಂಗ್ರೆಸ್ ಬಲಿಷ್ಠ ಆಗಿರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಅಬ್ಬರದ ಭಾಷಣ ಮಾಡಿದರು.