ಅಭಿಷೇಕ್ ಬಚ್ಛ್ ಹಾಗೂ ಐಶ್ವರ್ಯಾ ರೈ ವಿಚ್ಛೇನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ರೂಮರ್ ನಿಜ ಅನ್ನೋದನ್ನ ಸಾಬೀತುಪಡಿಸುವಂತೆ ಕೆಲವೊಂದು ವಿಚಾರಗಳು ಅವರ ಬಾಳಿನಲ್ಲಿ ಆಗುತ್ತಿದೆ. ಇಲ್ಲಿಯವರೆಗೂ ಹೀಗೆ ಕೇಳಿಬರುತ್ತಿರುವ ರೂಮರ್ಗಳು ನಿಜವಲ್ಲ ಎನ್ನುವ ಯಾವುದೇ ಹೇಳಿಕೆ ಇಬ್ಬರಿಂದಲೂ ಬಂದಿಲ್ಲ. ಆದರೂ ಊಹಾಪೋಹಗಳು ನಡಿತಾನೆ ಇದಾವೆ.
ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಗಳು ಒಟ್ಟಿಗೆ ಯಾವುದೇ ಕಾರ್ಯಕ್ರಮಗಳಲ್ಲಿ ಕಾಣಿಸುತ್ತಿಲ್ಲ, ಅವರಿಬ್ಬರ ದಾಂಪತ್ಯದಲ್ಲಿ ಬಿರುಕು ಬಿದ್ದಿದೆ ಎಂಬ ಗಾಳಿಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತಿದ್ದವು. ಇದೆಲ್ಲಾ ನಡೆಯುತ್ತಿದ್ದರೂ ದಂಪತಿ ಎಂದೂ ತಾವಾಗಿಯೇ ಈ ಬಗ್ಗೆ ಎಲ್ಲಿಯೂ ಹೇಳಿಕೆ ಕೊಟ್ಟಿರಲಿಲ್ಲ.
ಈಗ ಈ ದಂಪತಿ ಒಟ್ಟಿಗೆ ಒಂದೇ ಹೈ ಪ್ರೊಫೈಲ್ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಐಶ್ವರ್ಯ ರೈ, ಅಭಿಷೇಕ್ ಬಚ್ಚನ್ ಒಟ್ಟಿಗೆ ಒಂದೇ ಸೆಲ್ಫಿ ಯಲ್ಲಿರುವ ಫೋಟೋ ವೈರಲ್ ಆಗಿದೆ. ಇದರಿಂದ ಅಭಿಮಾನಿಗಳು ಫುಲ್ ದಿಲ್ ಖುಷ್ ಆಗಿದ್ದಾರೆ. ಈ ಸೆಲ್ಫಿಯಲ್ಲಿ ಅವರಿಬ್ಬರ ಜೊತೆ ಐಶ್ವರ್ಯಾ ತಾಯಿ, ಬೃಂದ್ಯಾ ರೈ ಹಾಗೂ ನಿರ್ಮಾಪಕಿ ಅನುರಂಜನ್ ಅವರು ಕೂಡ ಇದ್ದಾರೆ. ಈ ಸೆಲ್ಫಿಯನ್ನು ಸ್ವತಃ ನಿರ್ಮಾಪಕಿ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.