ಟಾಲಿವುಡ್ ಸ್ಟಾರ್ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ಧೂಳಿಪಾಲ್ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಗುರು ಹಿರಿಯರ ಸಮ್ಮುಖದಲ್ಲಿ ನಟಿ ಶೋಭಿತಾ ಧೂಳಿಪಾಲ್ ಜೊತೆಗೆ ನಟ ನಾಗ ಚೈತನ್ಯ ಮದುವೆಯಾಗಿದ್ದಾರೆ. ಹೈದ್ರಾಬಾದ್ನಲ್ಲಿ ನಾಗಚೈತನ್ಯ, ಶೋಭಿತಾ ವಿವಾಹ ಮಹೋತ್ಸವ ಅದ್ಧೂರಿಯಾಗಿ ನಡೆದಿದೆ.
ಇನ್ನೂ, ನಟ ನಾಗ ಚೈತನ್ಯ ಹಾಗೂ ಶೋಭಿತಾ ಧೂಳಿಪಾಲ್ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇದೇ ಫೋಟೋಸ್ ನೋಡಿದ ಅಭಿಮಾನಿಗಳು ನೂತನ ದಂಪತಿಗೆ ಶುಭ ಹಾರೈಸಿದ್ದಾರೆ. ವೈರಲ್ ಆಗಿರೋ ಫೋಟೋದಲ್ಲಿ ಶೋಭಿತಾ ಧೂಳಿಪಾಲ್ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಗೋಲ್ಡ್ ಕಲರ್ ಸೀರೆಯಲ್ಲಿ ನಟಿ, ನಾಗಚೈತನ್ಯ ಎರಡನೇ ಪತ್ನಿ ಶೋಭಿತಾ ಧೂಳಿಪಾಲ್ ಮಿರ ಮಿರ ಮಿಂಚಿದ್ದಾರೆ.
ಶೋಭಿತಾ ಧೂಳಿಪಾಲ ಮತ್ತು ನಾಗ ಚೈತನ್ಯ ಕೆಲ ವರ್ಷಗಳ ಡೇಟಿಂಗ್ ಬಳಿಕ ಇದೀಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಸತಿ-ಪತಿಯಾಗಿ ಬಾಳು ಶುರು ಮಾಡಿದ್ದಾರೆ. ನಾಗ ಚೈತನ್ಯಗೆ ಇದು 2ನೇ ಮದುವೆ ಆಗಿದೆ. 2017ರಲ್ಲಿ ನಾಗ ಚೈತನ್ಯ, ಸಮಂತಾಳನ್ನು ಪ್ರೀತಿಸಿ ಮದುವೆ ಆಗಿದ್ರು. 2021ರಲ್ಲಿ ಸಮಂತಾಗೆ ಡಿವೋರ್ಸ್ ನೀಡಿದ್ರು.
2017ರಲ್ಲಿ ನಾಗ ಚೈತನ್ಯ ಜೊತೆ ಹಸೆಮಣೆ ಏರಿದ್ದರು ಸಮಂತಾ. ಇದೆಲ್ಲದರ ನಡುವೆ ಸಮಂತಾ ಧರಿಸಿದ ಜ್ಯುವೆಲ್ಲರಿಯನ್ನೇ ಹೋಲುವಂತ ಗೋಲ್ಡ್ ನೆಕ್ ಪೀಸ್ ಅನ್ನು ಶೋಭಿತಾ ಕೂಡ ಧರಿಸಿದ್ದಾರೆ. ಮ್ಯಾಂಗೋ ಡಿಸೈನ್ ಇರುವ ಹಾರ ಇಬ್ಬರು ಕೂಡ ಹಾಕಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.
ಸಮಂತಾ ತಮ್ಮ ಮದುವೆಯಲ್ಲಿ ವೈಟ್ ಮಿಕ್ಸ್ ಗೋಲ್ಡ್ ಸಾರಿ ಹಾಗೂ ಮೆರೂನ್ ಬ್ಲೌಸ್ ಧರಿಸಿದ್ರು. ಇದಕ್ಕೆ ಮ್ಯಾಚ್ ಆಗುವಂತೆ ಮ್ಯಾಂಗೋ ಡಿಸೈನ್ ಹಾರವನ್ನು ಧರಿಸಿದ್ರು. ಇದೀಗ ಶೋಭಿತಾ ಮದುವೆಯಲ್ಲಿ ಗೋಲ್ಡ್ ಕಲರ್ ಸೀರೆ ಧರಿಸಿದ್ರು. ಇದಕ್ಕೆ ಮ್ಯಾಚ್ ಆಗುವಂತೆ ಹಲವು ಜ್ಯುವೆಲ್ಲರಿ ಧರಿಸಿದ್ರು ಅದರಲ್ಲಿ ಒಂದು ಮ್ಯಾಂಗೋ ಡಿಸೈನ್ ಚೈನ್ ಎಲ್ಲರ ಗಮನ ಸೆಳೆದಿದೆ.
ನೆಟ್ಟಿಗರು ಎರಡು ಫೋಟೋಗಳನ್ನು ಮ್ಯಾಚ್ ಮಾಡಿ ಸೇಮ್ ಸೇಮ್ ಎಂದು ಪೋಸ್ಟ್ ಮಾಡ್ತಿದ್ದಾರೆ. ಎರಡು ಹಾರಗಳ ನಡುವೆ ಸಾಮ್ಯತೆ ಇದೆ ಅಷ್ಟೇ. ಒಂದೇ ಜ್ಯುವೆಲ್ಲರಿ ಅಲ್ಲ ಎಂದು ಕೆಲವರು ಕಾಮೆಂಟ್ ಮಾಡ್ತಿದ್ದಾರೆ. ಶೋಭಿತಾ ಮದುವೆಯಲ್ಲಿ ಏನೇ ಧರಿಸಿದ್ದರೂ ಕೂಡ ಅದನ್ನು ಸಮಂತಾ ಅವರಿಗೆ ಹೋಲಿಕೆ ಮಾಡಿ ವೈರಲ್ ಮಾಡ್ತಿದ್ದಾರೆ. ಸಣ್ಣ ಪುಟ್ಟ ವಿಚಾರ ಕೂಡ ಇದೀಗ ಸದ್ದು ಮಾಡ್ತಿದೆ.