ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ನಂತರ ದೆಹಲಿಮಟ್ಟದಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾರೆ. ದೆಹಲಿ ಮಟ್ಟದಲ್ಲಿ ಬಿಜೆಪಿ ನಾಯಕರನ್ನ ಭೇಟಿ ಮಾಡುತ್ತಿರುವ ನಿಖಿಲ್ ನಡೆ ತೀವ್ರ ಕುತೂಹಲ ಮೂಡಿಸಿದೆ. ಇನ್ನೂ ದೆಹಲಿಯಲ್ಲಿ ಬಿಜೆಪಿ ನಾಯಕ ಬಿಎಲ್ ಸಂತೋಷ್ ಅವರನ್ನ ಭೇಟಿ ಮಾಡಿರುವ ನಿಖಿಲ್ ಕುಮಾರಸ್ವಾಮಿ ಚನ್ನಪಟ್ಟಣ ಸೋಲಿನ ಬಗ್ಗೆ ಮಾತನಾಡಿದ್ದಾರೆ.
ಚನ್ನಪಟ್ಟಣದಲ್ಲಿ ನನ್ನ ಸೋಲಿಗೆ ʻಅವರೇʼ ಕಾರಣ ಎಂದು ಬಿ.ಎಲ್.ಸಂತೋಷ್ಗೆ ಕಂಪ್ಲೆಂಟ್ ಮಾಡಿದ್ದಾರೆ ನಿಖಿಲ್ ಕುಮಾರಸ್ವಾಮಿ. ಬಿಜೆಪಿ ನಾಯಕರ ಬಣ ಬಡಿದಾಟವೇ ನನ್ನ ಸೋಲಿಗೆ ಕಾರಣ. ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಸರಿಯಾಗಿ ಹೋರಾಟ ಮಾಡಿಲ್ಲ. ಬಿಜೆಪಿಯ ಮೂಲ ಮತಗಳನ್ನು ಒಗ್ಗೂಡಿಸಲು ಆದ್ಯತೆ ನೀಡಲಿಲ್ಲ. ನನ್ನ ಪರ ಪ್ರಚಾರಕ್ಕೆ ಬಿಜೆಪಿಯಿಂದ ಸರಿಯಾದ ಬೆಂಬಲ ಸಿಗಲಿಲ್ಲ ಎಂದು ಬಿ.ಎಲ್.ಸಂತೋಷ್ ಮುಂದೆ ಚನ್ನಪಟ್ಟಣ ಅಭಿಮನ್ಯು ನಿಖಿಲ್ ದೂರಿದ್ದಾರೆ.
ಚನ್ನಪಟ್ಟಣದಲ್ಲಿ ನಿಖಿಲ್ ಸೋಲಿನ ವರದಿಯನ್ನ B.L.ಸಂತೋಷ್ ಪಡೆದಿದ್ದಾರೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಯಾಘಿರುವ ಬಿ.ಎಲ್.ಸಂತೋಷ್ ಅವರನ್ನ ದೆಹಲಿಯಲ್ಲಿ ಭೇಟಿ ಮಾಡಿ ನಿಖಿಲ್ ಚರ್ಚಿಸಿದ್ದಾರೆ. ತಮ್ಮ ಸೋಲಿನ ಬಗ್ಗೆ ಸುರ್ದೀರ್ಘ ಚರ್ಚೆ ನಡೆಸಿದ್ದಾರೆ ಇಬ್ಬರು ನಾಯಕರು. ಸೋಲಿಗೆ ಬಿಜೆಪಿ ನಾಯಕರ ಒಳಒಪ್ಪಂದ ಕಾರಣವಾಯ್ತಾ ಅನ್ನೋ ಚರ್ಚೆ ನಡೆದಿದೆ.