ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ತಾಲೂಕಿನ ಮಾರಬಗಟ್ಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳು ಹಾಗೂ ಶಿಕ್ಷಕರಿಗೆ ವಿಮಾನದಲ್ಲಿ ಪ್ರವಾಸಕ್ಕೆ ತೆರಳುವ ಭಾಗ್ಯ ಸಿಕ್ಕಿದೆ.
ಸರ್ಕಾರಿ ಶಾಲೆಯ ಶಿಕ್ಷಕರ ಇಚ್ಛಾಶಕ್ತಿಯ ಫಲವಾಗಿ ದಾನಿಗಳ ನೆರವಿನಿಂದ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ವಿಮಾನಯಾನ ಭಾಗ್ಯ ದೊರೆತಿದೆ. ಸರ್ಕಾರಿ ಶಾಲೆಯ 19 ವಿದ್ಯಾರ್ಥಿಗಳು ಹಾಗೂ ಮೂವರು ಶಿಕ್ಷಕರು ಶಿವಮೊಗ್ಗದಿಂದ ವಿಮಾನದಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.
ಮಕ್ಕಳು ಮತ್ತು ಶಿಕ್ಷಕರು ಎರಡು ದಿನದ ಪ್ರವಾಸದಲ್ಲಿ ಬೆಂಗಳೂರಿನ ವಿಧಾನಸೌಧ, ಹೈಕೋರ್ಟ್, ವಿಶ್ವೇಶ್ವರಯ್ಯ ಮ್ಯೂಸಿಯಂ, ನೆಹರು ತಾರಾಲಯ ಬನ್ನೇರುಘಟ್ಟ ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ.
ಸದ್ಗುರು ಆರ್ಯುವೇದ ಕಂಪನಿ ಮಾಲೀಕ ಡಿಎಸ್ ಪ್ರದೀಪ್ ಶೆಟ್ಟಿ ಮಾರಬಘಟ್ಟದ ಚನ್ನಪ್ಪ ಸರ್ಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಶಾಂತಕುಮಾರ ಸೇರಿದಂತೆ ಮತ್ತಿತರ ದಾನಿಗಳ ಆರ್ಥಿಕ ನೆರವಿನಿಂದ ಶಾಲೆಯ ಶಿಕ್ಷಕ ಯೋಗರಾಜ್ ಪ್ರವಾಸವನ್ನು ಆಯೋಜಿಸಿದ್ದರು. ಸೌಟ್ ಅಂಡ್ ಗೈಡ್ಸ್ ಸೇರಿರುವ ಶಾಲೆಯ 5 ರಿಂದ 7ನೇ ತರಗತಿಯ 19 ವಿದ್ಯಾರ್ಥಿಗಳು, ಮೂವರು ಶಿಕ್ಷಕರು ಹಾಗೂ ಇಸಿಒ ವಿಮಾನದಲ್ಲಿ ಪ್ರಯಾಣಿಸಿದ್ದಾರೆ.