ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-3ಎ ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಸರ್ಜಾಪುರದಿಂದ ಹೆಬ್ಬಾಳದವರೆಗೆ ಮೆಟ್ರೋ ಕಾಮಗಾರಿಗೆ ಸಚಿವ ಸಂಪುಟ ಸಭೆ ಅಸ್ತು ಎಂದಿದೆ.
ನಮ್ಮ ಮೆಟ್ರೋ ರೈಲು ಯೋಜನೆಯ ಹಂತ-3ಎ ನ ಯೋಜನೆಯು ಸರ್ಜಾಪುರದಿಂದ ಹೆಬ್ಬಾಳದವರೆಗೆ ಒಟ್ಟು 36.59ಕಿ.ಮೀ ಹೊಂದಿದೆ. ಒಟ್ಟು 17 ಮೆಟ್ರೋ ನಿಲ್ದಾಣಗಳ 22.14 ಕಿ.ಮೀ ಗಳ ಎತ್ತರಿಸಿದ ಮಾರ್ಗ ಮತ್ತು 11 ನಿಲ್ದಾಣಗಳ 14.45 ಕಿ.ಮೀ ಗಳ ಸುರಂಗ ಮಾರ್ಗಗಳ ಕಾಮಗಾರಿ ಇದೆ. ಒಟ್ಟಾರೆ ಈ ಯೋಜನೆಗೆ 28,405 ಕೋಟಿ ರೂಪಾಯಿಗಳ ಅಂದಾಜು ಮೊತ್ತದಲ್ಲಿ ಅನುಷ್ಠಾನಗೊಳಿಸಲು ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರಕಿದೆ.