ದೊಡ್ಮನೆ ಆಟ ದಿನದಿಂದ ದಿನಕ್ಕೆ ಹಲವು ತಿರುವುಗಳನ್ನು ಪಡೆದು 70ನೇ ದಿನದತ್ತ ಮುನ್ನುಗ್ಗುತ್ತಿದೆ. ಇದೇ ಹೊತ್ತಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗಲು 8 ಮಂದಿ ನಾಮಿನೇಟ್ ಆಗಿದ್ದರು. ನಿನ್ನೆಯ ಸಂಚಿಕೆಯಲ್ಲಿ ಈ ವಾರ ಬಿಗ್ಬಾಸ್ ಮನೆಯಿಂದ ಆಚೆ ಹೋಗುವ ಸ್ಪರ್ಧಿಗಳು ಯಾರೆಲ್ಲಾ ಅಂತ ಹೇಳಿದ್ದರು.
ಉಗ್ರಂ ಮಂಜು, ಗೌತಮಿ ಜಾಧವ್, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್, ಐಶ್ವರ್ಯಾ ಹಾಗೂ ರಜತ್ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಕೂಡ ಆಚೆ ಬಂದಿದ್ದರು ಆದರೆ ಈ ವಾರ ಯಾರು ಮನೆಯಿಂದ ಆಚೆ ಹೋಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಆದರೆ ನಿನ್ನೆಯ ಸಂಚಿಕೆಯಲ್ಲಿ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಪೂರ್ಣಗೊಂಡಿತ್ತು. ಕಾರ್ಯಕ್ರಮದ ಕೊನೆಯಲ್ಲಿ ನಾಮಿನೇಟ್ ಆದ ಸ್ಪರ್ಧಿಗಳ ಹೆಸರನ್ನು ಕೂಡ ಬಿಗ್ಬಾಸ್ ಘೋಷಣೆ ಮಾಡುತ್ತಿದ್ದರು. ಆದರೆ ನಿನ್ನೆ ಕಾರ್ಯಕ್ರಮದ ಕೊನೆಯಲ್ಲಿ ಮಾಡಿಲ್ಲ. ಇದರ ಜೊತೆಗೆ ವೋಟಿಂಗ್ ಲೈನ್ಸ್ ಓಪನ್ ಆಗಿಲ್ಲ. ಹೀಗಾಗಿ ಈ ವಾರ ಎಲಿಮಿನೇಷನ್ ಇರೋದಿಲ್ಲ ಎಂದು ಖಚಿತವಾಗಿದೆ. ವೀಕ್ಷಕರಲ್ಲಿ ಅನುಮಾನ ಕೂಡ ಮೂಡಿದೆ.
ಹೀಗಾಗಿ 8 ಮಂದಿ ನಾಮಿನೇಷನ್ ಟೆನ್ಷನ್ನಲ್ಲೇ ಇದ್ದಾರೆ. ಯಾರು ಮನೆಗೆ ಹೋಗಬಹುದು ಎಂದು ಲೆಕ್ಕಾಚಾರ ಹಾಕುತ್ತಿದ್ದಾರೆ. ಹಾಗಾದ್ರೇ ಭಾನುವಾರದ ಸಂಚಿಕೆಯಲ್ಲಿ ಬಿಗ್ಬಾಸ್ ಟ್ವಿಸ್ಟ್ ಕೊಡ್ತಾರಾ? ಎಂದು ಇಂದಿನ ಸಂಚಿಕೆಯಲ್ಲಿ ಕಾದುನೋಡಬೇಕಿದೆ.