ಬೆಂಗಳೂರು: ಬೆಂಗಳೂರು ಬೆಡಗಿ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಬಂದಿದ್ದಾರೆ. ಆದರೆ,ಇವರ ಈ ಸಲದ ಆಗಮನ ಸ್ಪೆಷಲ್ ಆಗಿಯೇ ಇದೆ. ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ತಮ್ಮ ಸಂಗೀತ ಕಾರ್ಯಕ್ರಮ ಕೊಡಲು ಬೆಂಗಳೂರಿಗೆ ಬಂದಿದ್ದಾರೆ. ಹಾಗಾಗಿಯೇ ದೀಪಿಕಾ ಪಡುಕೋಣೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅಷ್ಟೇ ವಿಶೇಷ ಅನಿಸೋ ಹಾಗೆ ಗಾಯಕ ದಿಲ್ಜಿತ್ ದೊಸಾಂಜ್ ವೇದಿಕೆ ಮೇಲೆ ಬೆಂಗಳೂರು ಹುಡುಗಿ ದೀಪಿಕಾ ಪಡುಕೋಣೆಯನ್ನ ಬೆಂಗಳೂರಿಗೆ ಮತ್ತೆ ಪರಿಚಯ ಮಾಡಿಸಿದ್ದಾರೆ. ಆದರೆ, ಇದನ್ನ ನೋಡಿದ ದೀಪಿಕಾ ಪಡುಕೋಣೆ ಆಶ್ಚರ್ಯ ಕೂಡ ಪಟ್ಟಿದ್ದಾರೆ.
ವಿಶೇಷ ಅಂದರೆ ಈ ವೇದಿಕೆಯಲ್ಲಿ ನಟಿ ದೀಪಾಕ ಪಡುಕೋಣೆ ದಿಲ್ಜಿತ್ ದೋಸಾಂಜ್ಗೆ ಕನ್ನಡ ಕಲಿಸಿದ್ದಾರೆ. ಈ ವಿಡಿಯೋ ಸದ್ದು ಮಾಡುತ್ತಿದೆ. ದಿಲ್ಜಿತ್ ದೋಸಾಂಜ್ ಭಾರತದ ಪ್ರಮುಖ ನಗರಗಳಲ್ಲಿ ಮ್ಯೂಸಿಕ್ ಕಾನ್ಸರ್ಟ್ ಆಯೋಜಿಸುತ್ತಿದ್ದಾರೆ. ಹೀಗಾಗಿ ದಿಲ್ಜಿಜ್ ಬೆಂಗಳೂರಿಗೂ ಆಗಮಿಸಿದ್ದರು. ತಮ್ಮ ದಿಲ್ ಲ್ಯೂಮಿನಾಟಿ ಮ್ಯೂಸಿಕ್ ಕಾರ್ನ್ಸರ್ಟ್ ಅದ್ಧೂರಿಯಾಗಿ ಬೆಂಗಳೂರಿನಲ್ಲಿ ಆಯೋಜನೆಗೊಂಡಿದೆ. ಸಂಜೆ 7.30 ರಿಂದ ರಾತ್ರಿ11 ಗಂಟೆ ವರೆಗೆ ಈ ಕಾರ್ಯಕ್ರಮ ನಡೆದಿತ್ತು. ಹಲವು ಹಾಡುಗಳ ಮೂಲಕ ದಿಲ್ಜಿತ್ ಅಭಿಮಾನಿಗಳನ್ನು ರಂಜಿಸಿದ್ದರು. ಈ ಕಾರ್ಯಕ್ರಮಕ್ಕೆ ಹಾಜರಾದ ಅಭಿಮಾನಿಗಳಿಗೆ ಅಚ್ಚರಿ ಕಾದಿತ್ತು. ಕಾರಣ ಇದೇ ವೇದಿಕೆಯಲ್ಲಿ ನಟಿ ದೀಪಾಕಾ ಪಡುಕೋಣೆ ಕೂಡ ಕಾಣಸಿಕೊಂಡಿದ್ದರು. ದಿಲ್ಜಿತ್ ಹಾಡಿಗೆ ದೀಪಿಕಾ ಕೂಡ ಹೆಜ್ಜೆ ಹಾಕಿದ್ದಾರೆ. ಅಭಿಮಾನಿಗಳ ಕೈಬೀಸಿದ್ದಾರೆ. ಇತ್ತ ಅಭಿಮಾನಿಗಳು ಕೂಡ ದೀಪಿಕಾ ಹಾಗೂ ದಿಲ್ಜಿತ್ ಜೊತೆ ತಾಳಕ್ಕೆ ತಕ್ಕಂತೆ ಕುಣಿದಿದ್ದಾರೆ.
ತಾಯಿಯಾದ ಬಳಿಕ ದೀಪಿಕಾ ಪಡುಕೋಣೆ ಸಾರ್ವಜನಿಕವಾಗಿ ಕಾಣಿಸಿಕೊಂಡ ಮೊದಲ ಕಾರ್ಯಕ್ರಮ ಇದಾಗಿದೆ. ದೀಪಿಕಾ ಪಡುಕೋಣೆ ಅದ್ಧೂರಿಯಾಗಿ ದಿಲ್ಜಿಜ್ ದೋಸಾಂಜ್ ಹಾಡುತ್ತಿದ್ದ ವೇದಿಕೆಗೆ ಆಗಮಿಸಿದ್ದಾರೆ. ದೀಪಿಕಾ ಸರ್ಪ್ರೈಸ್ ಎಂಟ್ರಿಕೊಡುತ್ತಿದ್ದಂತೆ ಅಭಿಮಾನಿಗಳು ಶಿಳ್ಶೆ, ಚಪ್ಪಾಳೆ ಮೂಲಕ ಸ್ವಾಗತಿಸಿದ್ದಾರೆ. ವಿಶೇಷ ಅಂದರೆ ಇದೇ ವೇದಿಕೆಯಲ್ಲಿ ದೀಪಾಕಾ ಪಡುಕೋಣೆ ದಿಲ್ಜಿಜ್ ದೋಸಾಂಜ್ಗೆ ಕನ್ನಡ ಕಲಿಸಿದ್ದಾರೆ.
ದೀಪಿಕಾ ಪಡುಕೋಣೆ ಕನ್ನಡ ಮಾತ್ ಆಡೋದು ಕಡಿಮೇನೆ ಬಿಡಿ. ಆದರೆ, ದಿಲ್ಜಿತ್ ದೊಸಾಂಜ್ಗೆ ಕನ್ನಡ ಕಲಿಸೋ ಕೆಲಸ ಮಾಡಿದ್ದಾರೆ. ನಾನು ನಿನಗೆ ಪ್ರೀತಿಸ್ತಿನಿ ಅನ್ನೋದನ್ನ ಇಲ್ಲಿ ಹೇಳುತ್ತಾರೆ. ಹಾಗೇನೆ ನಾನು ಕನ್ನಡವನ್ನ ಸ್ಕೂಲ್ ಅಲ್ಲಿ ಓದಿದ್ದೇನೆ ಅಂತಲೂ ಹೇಳ್ತಾರೆ.
ಹೀಗೆ ದೀಪಿಕಾ ಪಡುಕೋಣೆ ಕನ್ನಡ ಪ್ರೀತಿ ಇಲ್ಲಿ ವಿಶೇಷವಾಗಿಯೇ ಕಾಣಿಸುತ್ತಿದೆ. ಆದರೆ, ದೀಪಿಕಾ ಪಡುಕೋಣೆ ಇಲ್ಲಿಂದಲೇ ಮುಂಬೈಗೆ ಹೋಗಿರೋದು. ಕನ್ನಡದ ಐಶ್ವರ್ಯ ಚಿತ್ರದಲ್ಲಿ ಮೊದಲು ಬಣ್ಣ ಹಚ್ಚಿದ್ದರು. ರಿಯಲ್ ಸ್ಟಾರ್ ಉಪೇಂದ್ರ ಈ ಚಿತ್ರದಲ್ಲಿ ಅಭಿನಯಿಸಿದ್ದರು.
ದೀಪಿಕಾ ಪಡುಕೋಣೆ ಈಗ ಕನ್ನಡದ ಬಗ್ಗೆ ಮಾತ್ ಆಡುತ್ತಿದ್ದಾರೆ. ಆದರೆ, ಈ ಹಿಂದೆ ಇದೇ ವಿಚಾರಕ್ಕೆ ಟ್ರೋಲ್ ಕೂಡ ಆಗಿದ್ದರು. ಸ್ಯಾಂಡಲ್ವುಡ್ ಬಗ್ಗೆ ಏನು ಹೇಳ್ತೀರಾ ಅಂತ ಪತ್ರಕರ್ತರು ಪ್ರಶ್ನೆ ಕೇಳಿದ್ದರು. ಆದರೆ, ಯಾವುದು ಸ್ಯಾಂಡಲ್ವುಡ್ ಅಂತಲೇ ದೀಪಿಕಾ ಪಡುಕೋಣೆ ಕೇಳಿದ್ದರು. ಹಾಗೆ ಟ್ರೋಲ್ ಕೂಡ ಆಗಿದ್ದರು.
ಆದರೆ, ಇದೀಗ ಕನ್ನಡ ಭಾಷೆಯ ಮೇಲೆ ಪ್ರೀತಿ ಜಾಸ್ತಿ ಬಂದಂತೆ ಇದೆ. ಪಂಜಾಬಿ ಗಾಯಕ ದಿಲ್ಜಿತ್ ದೊಸಾಂಜ್ ಅವರಿಗೆ ಕನ್ನಡ ಕಲಿಸೋ ಕೆಲಸ ಮಾಡಿದ್ದಾರೆ. ಕನ್ನಡದ ಪ್ರೇಮವನ್ನು ಇಲ್ಲಿ ಮೆರೆದಿದ್ದಾರೆ ಅಂತಲೂ ಹೇಳಬಹುದು.