ಕನ್ನಡದ ಬಿಗ್ ರಿಯಾಲಿಟಿ ಶೋ ಸೀಸನ್ 11, 11ನೇ ವಾರಕ್ಕೆ ಕಾಲಿಡಲು ಸಜ್ಜಾಗಿದೆ. ಸದ್ಯ ಬಿಗ್ಬಾಸ್ ಮನೆಯಲ್ಲಿ ಒಟ್ಟು 12 ಸ್ಪರ್ಧಿಗಳು ಉಳಿದುಕೊಂಡಿದ್ದಾರೆ. ಈ 12 ಜನರಲ್ಲಿ ನಾಳೆ ಎಂದರೆ ಭಾನುವಾರದ ಎಪಿಸೋಡ್ನಲ್ಲಿ ಓರ್ವ ಸ್ಪರ್ಧಿ ಆಚೆ ಹೋಗುತ್ತಾರಾ ಅಥವಾ ಸೀಕ್ರೆಟ್ ರೂಮ್ನಲ್ಲಿ ಇರುತ್ತಾರಾ ಅಂತ ಗೊತ್ತಾಗಲಿದೆ.
ಆದರೆ ಇದೇ ಹೊತ್ತಲ್ಲಿ ಬಿಗ್ಬಾಸ್ ವೇದಿಕೆಗೆ ಕಿಚ್ಚ ಸುದೀಪನ ಎಂಟ್ರಿಯಾಗಿದೆ. ವಾರದ ಕತೆ ಕಿಚ್ಚನ ಜೊತೆ ನಡೆಸಿಕೊಡಲು ನಟ ಕಿಚ್ಚ ಸುದೀಪ್ ಅವರು ಖಡಕ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ವೇದಿಕೆಗೆ ಬರುತ್ತಿದ್ದಂತೆ ತ್ರಿವಿಕ್ರಮ್ ಹಾಗೂ ಗೌತಮಿಗೆ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ ಕಿಚ್ಚ ಸುದೀಪ್.
ಕಳೆದ ವಾರ ಶೋಭಾ ಶೆಟ್ಟಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿದ್ದರು. ನನ್ನ ಆರೋಗ್ಯ ಸಮಸ್ಯೆಯಿಂದ ಬಿಗ್ಬಾಸ್ ಮನೆಯಲ್ಲಿ ಇರಲು ಆಗುತ್ತಿಲ್ಲ. ನನ್ನನ್ನೂ ಕಳುಹಿಸಿಕೊಡಿ ಅಂತ ಅಂಗಲಾಚಿ ಬೇಡಿಕೊಂಡಿದ್ದರು. ಅದರಂತೆ ಶೋಭಾ ಶೆಟ್ಟಿ ಅವರನ್ನು ಬಿಗ್ಬಾಸ್ ಮನೆಯಿಂದ ಆಚೆ ಕಳುಹಿಸಿದ್ದರು. ಇನ್ನೂ ಶೋಭಾ ಶೆಟ್ಟಿ ಹೋದ ಮೇಲೆ ತ್ರಿವಿಕ್ರಮ್ ಹಾಗೂ ಗೌತಮಿ ಜಾಧವ್ ಈ ಬಗ್ಗೆ ಇಂಗ್ಲಿಷ್ನಲ್ಲಿ ಮಾತುಕತೆ ನಡೆಸಿದ್ದಾರೆ.
ಇದೇ ವಿಚಾರಕ್ಕೆ ಕಿಚ್ಚ ಸುದೀಪ್ ಇಂದಿನ ಪಂಚಾಯ್ತಿಯಲ್ಲಿ ತ್ರಿವಿಕ್ರಮ್ಗೆ ಪ್ರಶ್ನೆ ಮಾಡಿದ್ದಾರೆ. ಇಬ್ಬರು ಜಡ್ಜಸ್ ಆಫ್ ಬಿಗ್ಬಾಸ್, ಶೋಭಾ ಅವರು ಬಿಗ್ಬಾಸ್ ಮನೆಯಿಂದ ಯಾಕೆ ಹೋದ್ರು ಅಂತ ತ್ರಿವಿಕ್ರಮ್ಗೆ ಕಿಚ್ಚ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಆಗ ತ್ರಿವಿಕ್ರಮ್ ನಾನು ಕನ್ಫ್ಯೂಷನ್ನಲ್ಲಿ ಇದ್ದೇ ಅಣ್ಣ ಅಂತ ಹೇಳಿದ್ದಾರೆ. ಆಗ ಸುದೀಪ್ ಅವರು ನಿಮ್ಮ ಕಣ್ಮುಂದೆನೇ ಅದೇಲ್ಲಾ ಆಗಿದೆ ಏನಕ್ಕೆ ಕನ್ಫ್ಯೂಷನ್ ನಿಮಗೆ ಅಂತ ಹೇಳಿದ್ದಾರೆ. ಹಾಗೇನಾದರೂ ಬಿಗ್ಬಾಸ್ಗೆ ನಾನು ಅಗೌರವ ಮಾಡಿದ್ರೆ ಈ ಮನೆಯಿಂದ ಹೋಗಲು ರೆಡಿ ಅಣ್ಣ ಅಂತ ಹೇಳಿದ್ದಾರೆ. ಆಗ ಕಿಚ್ಚ ಬಿಗ್ಬಾಸ್ ಅಗೌರವ ಕೊಟ್ಟಿದ್ದೀರಿ ನೀವು ಅಂತ ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ದೊಡ್ಮನೆಯಲ್ಲಿ ಈ ವಾರ ನಾಮಿನೇಷನ್ ಇಲ್ವೇ ಇಲ್ಲ. ಕಾರಣ ಏನು ಗೊತ್ತಿಲ್ಲ. ಆದರೆ, ಡಿಸೆಂಬರ್-೬ ರಂದು ಪ್ರಸಾರವಾದ ಸಂಚಿಕೆಯ ಕೊನೆಯಲ್ಲಿ ವೋಟಿಂಗ್ ಲೈನ್ ಕ್ಲೋಸ್ ಅನ್ನೋದನ್ನ ಹೇಳಲಾಗಿದೆ. ಅಲ್ಲಿಗೆ ಈ ವಾರ ಯಾರೂ ಮನೆಯಿಂದ ಹೋಗೋದಿಲ್ಲ ಅನ್ನುವ ಒಟ್ಟು ಚಿತ್ರಣ ವೀಕ್ಷಕರಿಗೆ ಸಿಕ್ಕಿದೆ.
ಇದರೊಟ್ಟಿಗೆ ಮುಂದಿನ ವಾರ ಒಬ್ಬರು ಹೋಗ್ತಾರ? ಇಲ್ಲ ಇಬ್ಬರು ಹೋಗ್ತಾರಾ ಅನ್ನೋ ಪ್ರಶ್ನೆ ಕೂಡ ಇದೆ. ಅದಕ್ಕೂ ಮೊದಲೇ ಈ ವಾರದ ಕಿಚ್ಚನ ಪಂಚಾಯಿತಿ ಹೇಗಿರುತ್ತದೆ ಅನ್ನುವ ಕ್ಯೂರಿಯೋಸಿಟಿ ಹೆಚ್ಚಾಗಿದೆ.
ಈ ವಾರದ ಲೆಕ್ಕದಲ್ಲಿ ರಜತ್ ಕಿಶನ್ ಚೆನ್ನಾಗಿ ಆಡಿದ್ದಾರೆ. ಆಟಕ್ಕಾಗಿ ತಲೆ ಕೂಡ ಬೋಳಿಸಿಕೊಂಡಿದ್ದಾರೆ. ಹಾಗಾಗಿಯೇ ಮನೆ ಮಂದಿ ರಜತ್ ಕಿಶನ್ ಉತ್ತಮ ಅಂತಲೇ ಹೇಳಿ ಮೆಡಲ್ ಕೂಡ ಹಾಕಿದ್ದಾರೆ. ಚೈತ್ರಾ ಕುಂದಾಪುರ ಕಳಪೆ ಆಗಿದ್ದಾರೆ. ಜೈಲೂ ಸೇರಿದ್ದಾರೆ. ಒಟ್ಟಾರೆ, ಈ ವಾರ ಯಾರೂ ಮನೆಯಿಂದ ಹೋಗೋದಿಲ್ಲ. ಆದರೆ ಕಿಚ್ಚನಿಂದ ಸರಿಯಾಗಿಯೇ ಬುದ್ಧಿ ಹೇಳಿಸಿಕೊಳ್ತಾರೆ ಅಂತಲೂ ಹೇಳಬಹುದು.