ಈ ಫೆಂಗಲ್ ಚಂಡಮಾರುತಕ್ಕೆ ಬೆಂಗಳೂರು ಚಳಿ ಮಳೆಗೆ ತತ್ತರಿಸಿ ಹೋಗಿದೆ. ಬೆಂಗಳೂರಿಗರು ಕಾಫಿ ಟೀ ಕುಡಿಯುವ ಅಭ್ಯಾಸವು ಹೆಚ್ಚಾಗಿದೆ, ಆದರೆ ಈ ಬೆನ್ನಲ್ಲೇ ಆರೋಗ್ಯ ಇಲಾಖೆ ಶಾಕಿಂಗ್ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಸಿಟಿಯಲ್ಲಿರುವ ಬಹುತೇಕ ಮಂದಿ ಹೋಟೆಲ್, ಟೀ ಸ್ಟಾಲ್, ಆಫೀಸ್ ಸೆರಿದಂತೆ ಹಲವು ಕಡೆ ಪೇಪರ್ ಕಪ್ನಲ್ಲಿ ಟೀ, ಕಾಫಿ ಕುಡಿಯುತ್ತಾರೆ. ನೀವು ಏನಾದರೂ ಕಾಫಿ, ಟೀ ಕುಡಿಯುತ್ತಿದ್ದರೆ ಇಂದೇ ಬಿಟ್ಟುಬಿಡಿ. ಯಾಕೆಂದ್ರೆ ಆ ಪೇಪರ್ ಗ್ಲಾಸ್ ನಿಮ್ಮ ಪ್ರಾಣ ತೆಗೆದರೂ ಆಶ್ಚರ್ಯ ಇಲ್ಲ.
ಆಹಾರ ಇಲಾಖೆ ನಡೆಸಿದ ಟೆಸ್ಟ್ ಒಂದರಲ್ಲಿ ಇದು ದೃಢವಾಗಿದೆ. ಪರೀಕ್ಷೆ ವೇಳೆ ಕ್ಯಾನ್ಸರ್ ಬರುವ ಅಂಶ ಪತ್ತೆಯಾಗಿದೆ. ಪೇಪರ್ ಕಪ್ನಲ್ಲಿ ಶೆಕಡಾ 20ರಷ್ಟು ಪ್ಲಾಸ್ಟಿಕ್ ಬಳಕೆ ಮಾಡಲಾಗ್ತಿದೆ. ಇದರಿಂದ ಜನರಲ್ಲಿ ಕ್ಯಾನ್ಸರ್ ಹರಡುವ ಭೀತಿ ಇದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಕ್ಸ್ ಇಲ್ಲದ ಕಪ್ ಬಳಸಲು ಸೂಚನೆ ನೀಡಿದೆ. ಯಾವುದೇ ಕಡೆ ಪ್ಲಾಸ್ಟಿಕ್ ಮಿಕ್ಸ್ ಇರೋ ಕಪ್ನಲ್ಲಿ ಟೀ, ಕಾಫಿ ಕೊಟ್ಟರೆ ಕುಡಿಯದೇ ಇರೋದು ಒಳ್ಳೆಯದು. ಇನ್ನು ಆರೋಗ್ಯ ಇಲಾಖೆ ಪ್ಲಾಸ್ಟಿಕ್ ಮಿಶ್ರಿತ ಪೇಪರ್ ಕಪ್ ಬ್ಯಾನ್ ಮಾಡಲು ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.