ಬಿಜೆಪಿಯ ಬಣ ಬಡಿದಾಟಕ್ಕೆ ಹೈಕಮಾಂಡ್ ಬ್ರೇಕ್ ಹಾಕಿದೆ. ರಾಜ್ಯದ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ನೇತೃತ್ವದಲ್ಲಿ ನಡೆದ ಕೋರ್ ಕಮಿಟಿ ಸಭೆಯಲ್ಲಿ ಬಿಜೆಪಿ ನಾಯಕರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ದೆಹಲಿ ನಾಯಕರ ಮಾತಿಗೆ ರಾಜ್ಯ ನಾಯಕರು ಗಪ್ ಚುಪ್ ಆಗಿದ್ದಾರೆ. ಧಗ ಧಗ ಹೊತ್ತಿ ಉರಿಯುತ್ತಿದ್ದ ಬಿಜೆಪಿ ಈ ಸಭೆಯ ನಂತರ ತಣ್ಣಗಾಗಿದೆ.
ಧಗಧಗ ಹೊತ್ತಿ ಉರಿಯುತ್ತಿದ್ದ ಬಿಜೆಪಿ ಮನೆ ಈಗ ಕೂಲ್ ಕೂಲ್. ಅವ್ರು ಮಾತಾಡಂಗಿಲ್ಲ.. ನೀವು ಮಾತಾಡಂಗಿಲ್ಲ.. ಶ್.. ಡೋಂಟ್ ಟಾಕ್ ನಿಯಮ ಪಾಲನೆ ಮಾಡಿ ಎಂದ ಉಸ್ತುವಾರಿ. ಏನೇ ಸಮಸ್ಯೆ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸಬೇಕು. ಅದನ್ನ ಬಿಟ್ಟು ಬಹಿರಂಗವಾಗಿ ಹೇಳಿಕೆ ನೀಡಿದ್ರೆ ಬಿ ಕೇರ್ ಫುಲ್. ಅಧಿವೇಶನದ ಸಮಯ ಸರ್ಕಾರದ ವಿರುದ್ಧ ಹೋರಾಟ ಮಾಡಿ. ಸರ್ಕಾರವನ್ನ ಇಕ್ಕಟ್ಟಿಗೆ ಸಿಲುಕಿಸಿ.. ಅವ್ರಿಗೆ ಮುಜುಗರ ಉಂಟು ಮಾಡಿ ಅದನ್ನ ಬಿಟ್ಟು ನೀವೇ ನಮ್ಮ ಪಕ್ಷಕ್ಕೆ ಡ್ಯಾಮೇಜ್ ಮಾಡಬೇಡಿ. ಇದೇ ನಿಮಗೆ ಲಾಸ್ಟ್ ವಾರ್ನಿಂಗ್ ಎಂದಿದ್ದಾರೆ ರಾಧಾಮೋಹನ್ ದಾಸ್.
ಯತ್ನಾಳ್ & ತಂಡದವರ ಬಳಿಯೂ ನಾವು ಮಾತ್ನಾಡಿದ್ದೇವೆ. ಅವರಿಂದ ಯಾವುದೇ ಸಮಸ್ಯೆ ಆಗಲ್ಲ ಎಂಬ ವಿಶ್ವಾಸ ಇದೆ. ನೀವು ಅವರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡಿ. ಕೋರ್ ಕಮಿಟಿ ಸಭೆಯಲ್ಲಿ ಉಸ್ತುವಾರಿ ರಾಧಾಮೋಹನ್ ದಾಸ್ ಸೂಚನೆ ನೀಡಿದ್ದಾರೆ.