ಕಲಬುರಗಿ ನಗರದಲ್ಲಿ ಮಹಿಳಾ ಕ್ರಿಕೆಟರ್ ಶ್ರೇಯಾಂಕಾ ಪಾಟೀಲ್ ಮತದಾನ ಜಾಗೃತಿ ಮೂಡಿಸಿದರು. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅವರು ಯುವ ಮತದಾರರಲ್ಲಿ ಮತದಾನ ಮಾಡುವಂತೆ ಕ್ಯಾಂಡಲ್ ಮೆರವಣಿಗೆಯಲ್ಲಿ ಭಾಗವಹಿಸಿದರು. ಯುವ ಮತದಾರರು ತಮ್ಮ ಹಕ್ಕು ಚಲಾಯಿಸುವಂತೆ ಉತ್ತೇಜಿಸಲು ಕಲಬುರಗಿಯಲ್ಲಿ SVEEP ಅಂಗವಾಗಿ ನಡೆಸಿದ ಕ್ಯಾಂಡಲ್ ಲೈಟ್ ಮಾರ್ಚ್ನಲ್ಲಿ ಕಲಬುರಗಿ ಮೂಲದವರೇ ಆದ ಶ್ರೇಯಾಂಕಾ ಪಾಟೀಲ್ ಭಾಗವಹಿಸಿ ಜಾಗೃತಿ ಮೂಡಿಸಿದರು. ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಚಾಂಪಿಯನ್ ಆದ ಬಳಿಕ ಶ್ರೇಯಾಂಕಾ ಪಾಟೀಲ್ ಮೊದಲ ಬಾರಿಗೆ ಕಲಬುರಗಿ ಜಿಲ್ಲೆಗೆ ಭೇಟಿ ನೀಡಿ ಶ್ರೇಯಾಂಕಾ, ಕಲಬುರಗಿ ಜಿಲ್ಲಾಧಿಕಾರಿಗಳ ಕಚೇರಿಗೂ ಭೇಟಿ ನೀಡಿದ್ದರು. ಈ ವೇಳೆ ಶ್ರೇಯಾಂಕಾ ಪಾಟೀಲ್ ರನ್ನ ಕಲಬುರಗಿ ಜಿಲ್ಲಾಡಳಿತ ವತಿಯಿಂದ ಸನ್ಮಾನಿಸಲಾಯಿತು.