ಬಿಗ್ ಬಾಸ್ ಸೀಸನ್ 11 ಕುತೂಹಲಕಾರಿಯ ತಿರುವುಗಳನ್ನು ತೋರಿಸುತ್ತಾ, ಪ್ರತಿ ವಾರ ಹೊಸ ಡ್ರಾಮಾ ಮತ್ತು ಚರ್ಚೆಗಳಿಗೆ ವೇದಿಕೆಯಾಗುತ್ತಿದೆ. ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ ಎಪಿಸೋಡ್ ನಲ್ಲಿ ವಾರದ ಅವಲೋಕನ ಮಾಡುವ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಒಂದು ಕುತೂಹಲಕಾರಿ ಟಾಸ್ಕ್ ನೀಡಿದರು. “ಯಾರು ಬಿಗ್ ಬಾಸ್ ಮನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ?” ಎಂದು ಪ್ರಶ್ನೆ ಮಾಡಿ, ಇಳಿಕೆ ಕ್ರಮದಲ್ಲಿ ಅತಿ ಹೆಚ್ಚು ಕೊಡುಗೆ ನೀಡಿದವರಿಂದ ಕಡಿಮೆ ಕೊಡುಗೆ ನೀಡಿದವರವರೆಗೆ) ಸ್ಪರ್ಧಿಗಳು ಫೋಟೋಗಳನ್ನು ಜೋಡಿಸುವಂತೆ ಹೇಳಿದರು ಇತ್ತೀಚಿನ ಪ್ರೋಮೋನಲ್ಲಿ ರಜತ್ ಹನುಮಂತನ ಬಗ್ಗೆ “ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ” ಎಂದು ವ್ಯಂಗ್ಯವಾಡಿದ್ದು ಮನೆಯಲ್ಲಿ ಪ್ರಚೋದನೆ ಮೂಡಿಸಿದೆ.
ಸೂಪರ್ ಸಂಡೇ ವಿತ್ ಬಾದ್ಷಾ ಸುದೀಪ್ ಕಿಚ್ಚ ಸುದೀಪ್ ಅವರು ವಾರದ ಅವಲೋಕನ ಮಾಡುವ ಸಂದರ್ಭದಲ್ಲಿ ಸ್ಪರ್ಧಿಗಳಿಗೆ ಒಂದು ಕುತೂಹಲಕಾರಿ ಟಾಸ್ಕ್ ನೀಡಿದರು. “ಯಾರು ಬಿಗ್ ಬಾಸ್ ಮನೆಗೆ ಹೆಚ್ಚು ಕೊಡುಗೆ ನೀಡಿದ್ದಾರೆ?” ಎಂದು ಪ್ರಶ್ನೆ ಮಾಡಿ, ಇಳಿಕೆ ಕ್ರಮದಲ್ಲಿ (ಅತಿ ಹೆಚ್ಚು ಕೊಡುಗೆ ನೀಡಿದವರಿಂದ ಕಡಿಮೆ ಕೊಡುಗೆ ನೀಡಿದವರವರೆಗೆ) ಸ್ಪರ್ಧಿಗಳು ಫೋಟೋಗಳನ್ನು ಜೋಡಿಸುವಂತೆ ಹೇಳಿದರು ಹಾಗು ಮಂಜು ಅವರು “ಗೌತಮಿ ಸೌಂಡ್ ಮಾಡುವಂತದ್ದು ಏನಿಲ್ಲ,” ಎಂದು ಕಮೆಂಟ್ ಮಾಡಿ ಮನೆಯಲ್ಲಿ ಗೋಪ್ಯವಾದ ವಿಷಯ ಹೊರಹಾಕಿದರು. ಮತ್ತೋರ್ವ ಸ್ಪರ್ಧಿಯಾದ ಗೋಲ್ಡ್ ಸುರೇಶ್ ರಜತ್ ಅವರನ್ನು ಟೀಕಿಸಿ, “ನೀವು ಮನೆಗೆ ಕೊಡುಗೆ ಕೊಟ್ಟಿಲ್ಲ” ಎಂದು ಗರಂ ಆದರು ಅದಕ್ಕೆ ಅವರ ಮಾತಿಗೆ ಪ್ರತಿಉತ್ತರ ವಾಗಿ ರಜತ್ “ನಾವು ಒಳ್ಳೆಯವರು ಅಲ್ಲ, ಕೆಟ್ಟೋರೇ, ಆದರೆ ಪ್ರಾಮಾಣಿಕವಲ್ಲದಿದ್ದರೂ, ನಾವು ನಮ್ಮ ಪರಿಸ್ಥಿತಿಯಿಂದಾಗಿ ಹೀಗೆ ನಡೆದುಕೊಳ್ಳುತ್ತೇವೆ,” ಎಂದು ತಿರುಗೇಟು ನೀಡಿದರು.