ಮೋಕ್ಷಿತಾ ಹಾಗೂ ಉಗ್ರಂ ಮಂಜು ಗೌತಮಿ ವಾರ್ ಇದುವೆರೆಗೂ ಬಗೆ ಹರಿದೇ ಇಲ್ಲ. ಹಿಂದಿನ ವಾರ ಗೌತಮಿ ಜತೆಗಿನ ಭಿನ್ನಾಪ್ರಾಯಕ್ಕೆ ಕ್ಯಾಪ್ಟನ್ಸಿಯನ್ನೂ ಬಿಟ್ಟುಕೊಟ್ಟಿದ್ದರು. ಮೋಕ್ಷಿತಾ ಈ ಬಗ್ಗೆ ಕಿಚ್ಚ ಸುದೀಪ್ ಜೊತೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಗೌತಮಿ ಹಾಗೂ ಉಗ್ರಂ ಮಂಜು ಬಗ್ಗೆ ನೇರವಾಗಿ ಮಾತನಾಡಿದ್ದಾರೆ ಮೋಕ್ಷಿತಾ.
ಕಳೆದ ವಾರ ದೊಡ್ಮನೆಯಲ್ಲಿ ಮನೆಯಲ್ಲಿ ಹಲವು ಟ್ವಿಸ್ಟ್ಗಳು ನಡೆದಿವೆ ನಿನ್ನೆ ಪಂಚಾಯಿತಿಗೆ ಬಂದ ಸುದೀಪ್ ಸಹ ಕಳೆದ ವಾರ ಮನೆಯಲ್ಲಿ ಆದ ಘಟನೆಗಳನ್ನು ಧಾರಾವಾಹಿ ಎಪಿಸೋಡ್ಗಳನ್ನು ಸೀರಿಯಲ್ಗೆ ಹೋಲಿಕೆ ಮಾಡಿದರು. ವಾರಗಟ್ಟಲೆ ಕೂತು ಬರೆದರೂ ಈ ರೀತಿ ಟ್ವಿಸ್ಟ್ ಮತ್ತು ತಿರುವುಗಳು ತರಲಾಗುವುದಿಲ್ಲ ಅಂಥಹಾ ಅದ್ಭುತ ತಿರುವುಗಳು ಈ ವಾರ ಬಿಗ್ಬಾಸ್ ಮನೆಯಲ್ಲಿ ನಡೆದಿವೆ ಎಂದರು.
ಇನ್ನು ವೀಕ್ಷರೊಬ್ಬರು ಇನ್ನು ಮುಂದೆ ಉಗ್ರಂ ಮಂಜು, ಗೌತಮಿ, ಮೂರು ದೇಹ ಒಂದೇ ಮನಸ್ಸು ಥರ ಇರ್ತಾರಾ ಮೋಕ್ಷಿತಾ? ಎಂದು ಪ್ರಶ್ನೆ ಇಟ್ಟರು. ಅದಕ್ಕೆ ಮೋಕ್ಷಿತಾ ಅವರು ಖಂಡಿತ ಇನ್ನು ಅವರ ಜತೆ ಒಂದಾಗಲ್ಲ ನಾನು. ಅದು ಸಾಧ್ಯವೇ ಇಲ್ಲ. ಈಗ ಆರಾಮವಾಗಿದ್ದೀನಿ ಎಂದಿದ್ದಾರೆ.
ಇನ್ನು ಸುದೀಪ್ ಅವರು ಕ್ಯಾಪ್ಟನ್ಸಿ ವಿಚಾರವಾಗಿಯೂ ಮಾತನಾಡಿದರು, ಅದಕ್ಕೆ ಮೋಕ್ಷಿತಾ ಅವರು ನನಗೆ ಈಗಾಗಲೇ ಬಕೆಟ್ ಎನ್ನುವ ಪಟ್ಟ ಕೊಟ್ಟಿದ್ದರು. ಹೀಗಾಗಿ ನಾನು ಕ್ಯಾಪ್ಟನ್ ಅವರ ಹತ್ತಿರ ಹೋಗಿ ಮಾತನಾಡಬಾರದು, ಅವರ ಸಹಾಯ ಕೇಳಬಾರದು ಅಂತ ಈ ನಿರ್ಧಾರ ತೆಗೆದುಕೊಂಡರ ಎಂದಿದ್ದಾರೆ.
ಇನ್ನು ತ್ರಿವಿಕ್ರಮ್ ವಿಚಾರವಾಗಿಗೂ ಮೋಕ್ಷಿತಾ ಮಾತನಾಡಿದ್ದಾರೆ. ತ್ರಿವಿಕ್ರಮ್ ನೋಡಲು ತುಂಬಾ ಸೈಲೆಂಟ್ ಇರುತ್ತಾರೆ. ಆದರೆ ಅವರು ಮುಂದೆ ನೋಡುವ ರೀತಿ ಹಾಗಿಲ್ಲ, ಅವರ ಸ್ಟ್ರಾಟಜಿ ಕೂಡ ಇದು ಇರಬಹುದು ಎಂದಿದ್ದಾರೆ.
ಒಟ್ಟಿನಲ್ಲಿ ಮೋಕ್ಷಿತಾ, ಮಂಜು ಹಾಗು ಗೌತಮಿ ಜತೆ ಇಂದೆಂದೂ ಮೂರು ದೇಹ ಒಂದು ದೇಹದ ರೀತಿ ಇರೋಕೆ ಆಗುವುದೇ ಇಲ್ಲ ಎಂದು ಹೇಳಿದ್ದಾರೆ.