ಬಿಜೆಪಿ ವಿರುದ್ಧ ನಮ್ಮದು ಸೈದ್ಧಾಂತಿಕ ಹೋರಾಟ ಅಂತ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ಸಂವಿಧಾನವನ್ನ ನಾಶಪಡಿಸಲು ಮುಂದಾಗಿರುವ ಶಕ್ತಿಗಳ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಅಸುರ ಶಕ್ತಿಗಳಿಂದ ನಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನ ರಕ್ಷಿಸಬೇಕಿದೆ ಎಂದು ರಾಹುಲ್ ಗಾಂಶಿ ಹೇಳಿದ್ದಾರೆ. 2004 ಲೋಕಸಭಾ ಚುನಾವಣೆಯನ್ನ ನೆಪಿಸಿಕೊಳ್ಳಿ ಎಂದ ರಾಹುಲ್ ಗಾಂಧಿ, ಬಿಜೆಪಿಯ “ಇಂಡಿಯಾ ಶೈನಿಂಗ್” ಅಬ್ಬರ ಪ್ರಚಾರದ ಮಧ್ಯೆಯೂ ಚುನಾವಣೆ ಫಲಿತಾಂಶ ಏನಾಗಿತ್ತು ಎಂದು ಪ್ರಶ್ನಿಸಿದ್ರು. ಇಂಡಿಯಾ ಮೈತ್ರಿಕೂಟವು ಸೈದ್ಧಾಂತಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ನಿರ್ಧರಿಸಿದೆ ಮತ್ತು ಚುನಾವಣೆಯ ನಂತರ ಪ್ರಧಾನಿ ಅಭ್ಯರ್ಥಿಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.