ಸಿರಿಯಾದಲ್ಲಿ ಇರೋದು ಎರಡೂವರೆ ಕೋಟಿ ಜನ ಸಂಖ್ಯೆ ಅಷ್ಟೇ. ಆ ಎರಡೂವರೆ ಕೋಟಿಯಲ್ಲಿ ಯುದ್ಧ ನಡೀತಿರೋದು ಮುಸ್ಲಿಮರ ವಿರುದ್ಧವೇ. ಅಲ್ಲಿ ಬೇರೆ ಯಾವುದೋ ಧರ್ಮದವರಿದ್ದಾರೆ ಅಂದ್ಕೋಬೇಡಿ. ಅಧಿಕಾರದಲ್ಲಿರೋದು ಕೂಡಾ ಮುಸ್ಲಿಮರೇ.
ಈ ಎರಡೂವರೆ ಕೋಟಿ ಜನಸಂಖ್ಯೆ ಇರೋ ಪುಟ್ಟ ದೇಶದಲ್ಲಿ ಮುಸ್ಲಿಮರು, ಆದರೆ ಮುಸ್ಲಿಮರ ವಿರುದ್ಧನೇ ತಿರುಗಬಿದ್ದಿರೋದು ಯಾಕೆ. ಅಲ್ಲೊಂದು ಇಂಟ್ರೆಸ್ಟಿಂಗ್ ನಂಬರ್ಸ್ ಇದಾವೆ. ಸಿರಿಯಾದಲ್ಲಿ ಶಿಯಾ ಮುಸ್ಲಿಮರೂ ಇದ್ದಾರೆ. ಸುನ್ನಿಗಳೂ ಇದ್ದಾರೆ. ಸುನ್ನಿ ಮುಸ್ಲಿಮರ ಪ್ರಮಾಣ 74% ಇದ್ರೆ, ಸುನ್ನಿ ಮುಸ್ಲಿಮರ ಜನಸಂಖ್ಯೆ 3%ಗಿಂತ ಕಮ್ಮಿ ಇದೆ. 3%ಗಿಂತ ಕಮ್ಮಿ ಇರೋ ಶಿಯಾ ಮಸ್ಲಿಮ್ ಅಸ್ಸಾದ್ನನ್ನ 74 ಪರ್ಸೆಂಟ್ ಇರೋ ಸುನ್ನಿಗಳು ಒಪ್ಕೊಳ್ಳೋಕೆ ತಯಾರಿಲ್ಲ. ಮುಸ್ಲಿಮರೆಲ್ಲ ಒಂದೇ ಅನ್ನೋದು ಮುಸ್ಲಿಮರೇ ಬಹುಸಂಖ್ಯೆಯಲ್ಲಿರೋ ದೇಶದಲ್ಲಿ ಫಾಲೋ ಆಗಲ್ಲ.
ಈ ಸಿರಿಯಾನ ರೂಲ್ ಮಾಡ್ತಿದ್ನಲ್ಲ, ಅದೇ ಈಗ ದೇಶ ಭ್ರಷ್ಟನಾಗಿರೋ ಬಶರ್ ಅಲ್ ಅಸ್ಸಾದ್, ಈತ ಅಲವೈಟ್ ಕಮ್ಯುನಿಟಿಗೆ ಸೇರಿದ್ದವನು. ಈ ಅಲವೈಟ್ ಕಮ್ಯುನಿಟಿಯವರೂ ಮುಸ್ಲಿಮರೇ. ಆದರೆ ಈ ಅಲವೈಟ್ ಕಮ್ಯುನಿಟಿ, ಷಿಯಾ ಮುಸ್ಲಿಮ್ಸ್ ಜೊತೆ ಮಿಂಗಲ್ ಆಗಿ ಹೋಗಿದೆ. ಇವರ ಸಂಖ್ಯೆನೂ ಸೇರಿಸಿದ್ರೆ ಒಟ್ಟಾರೆ ಷಿಯಾ ಮುಸ್ಲಿಮರ ಪ್ರಮಾಣ 13 ಪರ್ಸೆಂಟ್ ಆಗುತ್ತೆ. ಸಿರಿಯಾದಲ್ಲಿ ಮುಕ್ಕಾಲು ಪಾಲು ಜನಸಂಖ್ಯೆ ಇರೋ ಸುನ್ನಿಗಳ ಕೈಯಲ್ಲಿ ಅಧಿಕಾರ ಇರಲಿಲ್ಲ, ಅಷ್ಟೇ. ಅಧಿಕಾರ ಇದ್ದಿದ್ದು, ಅಲವೈಟ್ ಕಮ್ಯುನಿಟಿಗೆ ಸೇರಿದ ಅಸ್ಸಾದ್ ಕೈಯ್ಯಲ್ಲಿ. ಈ ಅಸ್ಸಾದ್ ಹಾಗೂ ಅವನ ತಂದೆ ಇಬ್ರೂ ಇದೇ ಸಿರಿಯಾವನ್ನ 50 ವರ್ಷಗಳಿಂದ ರೂಲ್ ಮಾಡ್ತಾ ಇದ್ರು.
ಈಗ ಸಿರಿಯಾವ ವಶಪಡಿಸಿಕೊಂಡು, ಅಧ್ಯಕ್ಷ ಅಸ್ಸಾದ್ನ ನ್ನೇ ಒದ್ದೋಡಿಸಿರೋದು ಯಾತ್ ತಹ್ರಿರ್ ಅಲ್ ಶಾಮ್ ಅಂದ್ರೆ ಎಚ್ಟಿಎಸ್ ಸಂಘಟನೆ. ಹಂಗಂತ ಸಿರಿಯಾದಲ್ಲಿರೋದು ಇವ್ರಷ್ಟೇ ಅಲ್ಲ, ಅಲ್ಲಿ ಕುರ್ದಿಷ್ ಅನ್ನೋ ಇನ್ನೂ ಒಂದು ಜನಾಂಗ ಇದೆ. ಅವರು ಮುಸ್ಲಿಮರಿಗೆ ಸೇರಿದವರೇ. ಅವರು ಎಸ್ಡಿಎಫ್ ಅನ್ನೋ ಆರ್ಮಿ ಕಟ್ಟಿಕೊಂಡು ಹೋರಾಡ್ತಾ ಇದ್ದಾರೆ. ಈ ಕುರ್ದಿಷ್ ಅನ್ನೋವ್ರು ಅಸ್ಸಾದ್ನನ್ನ ವಿರೋಧ ಮಾಡಿದ್ರೆ, ಈ ಕುರ್ದಿಷ್ ಮತ್ತು ಅಸಾದ್ ಇಬ್ರನ್ನೂ ಸಾಯಿಸಬೇಕು ಅಂಥಾ ಫೈಟ್ ಮಾಡ್ತಿರೋ ಇನ್ನೊಂದು ಆರ್ಮಿ ಇದೆ. ಅದು ಸಿರಿಯನ್ ನ್ಯಾಷನಲ್ ಆರ್ಮಿ.
ಇನ್ನು ನಿಮಗೆ ಆಶ್ಚರ್ಯ ಆಗಬಹುದು. ಅಲ್ಲಿ ತುಂಬಾ ತೊಂದ್ರೆ ಅನುಭವಿಸ್ತಿರೋದು ಯಾರಂದ್ರೆ, ಅಲ್ಲಿನ ಪುಟ್ಟ ಪುಟ್ಟ ಮಕ್ಕಳು ಮತ್ತು ಹೆಣ್ಣು ಮಕ್ಕಳು. ಅವರ ಕಡೆಯವ್ರನ್ನ ಇವ್ರು, ಇವ್ರ ಕಡೆಯವ್ರನ್ನ ಅವರು ಹೊತ್ಕೊಂಡು ಬರೋದು ಅಲ್ಲಿ ಕಾಮನ್ ವಿಷ್ಯ. ಚಿಕ್ಕ ಚಿಕ್ಕ ಮಕ್ಕಳಾದ್ರೆ, ಅದರಲ್ಲೂ ಗಂಡು ಮಕ್ಕಳಾಗಿದ್ರೆ ಕರ್ಕೊಂಡ್ ಹೋಗಿ ಕೈಗೆ ಗನ್ನು, ಬುಲೆಟ್ಟು ಕೊಟ್ಟು ಟ್ರೈನಿಂಗ್ ಕೊಡ್ತಾರೆ. ಟೆರರಿಸ್ಟ್ ಮಾಡ್ತಾರೆ. ಹೆಣ್ಣು ಮಕ್ಕಳಾದ್ರೆ ಈ ಟೆರರಿಸ್ಟುಗಳು ಸುಸ್ತಾಗಿ ಬಂದಾಗ, ಆಸೆ ಪಟ್ಟಾಗ ಹೋಗಿ ಸುಖ ಕೊಡ್ಬೇಕು. ಅಷ್ಟೇ. ದೂಸ್ರಾ ಮಾತಾಡಂಗಿಲ್ಲ. ಇದನ್ನ ಈಗ ದೇಶಭಷ್ಟನಾಗಿ, ರಷ್ಯಾಗೆ ಓಡಿಹೋಗಿರೋ ಅಸ್ಸಾದ್ ಮಟ್ಟ ಹಾಕಿದ್ದಿದ್ರೆ, ಏನೂ ಪ್ರಾಬ್ಲಂ ಆಗ್ತಾ ಇರಲಿಲ್ಲ. ಆದರೆ ಈ ಅಸಾದ್ ಇದ್ದಾನಲ್ಲ, ಅವನು ಸಿಕ್ಕಾಪಟ್ಟೆ ಬುದ್ದಿವಂತ. ಆದರೆ ಆ ಬುದ್ದಿವಂತಿಕೆಯನ್ನೆಲ್ಲ ಕೆಮಿಕಲ್ ಬಾಂಬ್ ಅಟ್ಯಾಕ್ ಮಾಡೋಕೆ ಬಳಸಿದ್ನೇ ಹೊರತು, ದೇಶದ ಅಭಿವೃದ್ಧಿಗೆ ಬಳಸಿದವನಲ್ಲ.
ಈಗ ಇದೇ ಸಿರಿಯಾದಲ್ಲಿ ಈ ಅಸಾದ್ ವಿರುದ್ಧ ಜನ ದಂಗೆ ಎದ್ದಿದ್ದಾರಲ್ಲ, ಅವರು ದಂಗೆ ಎದ್ದಿರೋ ಕಾರಣ ಇಷ್ಟೇ, ಇದೇ ಅಸಾದ್ ಯೂಸ್ ಮಾಡಿದ್ದ ಕೆಮಿಕಲ್ ಬಾಂಬ್ಗಳಲ್ಲಿ ತಮ್ಮ ತಮ್ಮ ಮಕ್ಕಳನ್ನ ಕಳೆದುಕೊಂಡಿದ್ದೋರ ಆಕ್ರೋಶ, ಅಷ್ಟೇ. ಯಾಕಂದ್ರೆ ಈ ಅಸ್ಸಾದ್ ಇದ್ದಾನಲ್ಲ, ತನ್ನದೇ ದೇಶದಲ್ಲಿ 100ಕ್ಕೂ ಹೆಚ್ಚು ಕೆಮಿಕಲ್ ಅಟ್ಯಾಕ್ ಮಾಡಿಸಿದ್ದಾನೆ. ಯಾಕಂದ್ರೆ ಅಸ್ಸಾದ್ನದ್ದು ಪಕ್ಕಾ ಕ್ರಿಮಿನಲ್ ಬ್ರೈನು.
ಕೆಲವೇ ಕೆಲವು ವರ್ಷಗಳ ಹಿಂದೆ ಇದೇ ಸಿರಿಯಾದಲ್ಲಿ ವಿಷಗಾಳಿ, ಕೆಮಿಕಲ್ ಅಟ್ಯಾಕ್ಗೆ ಸತ್ತ ಮಕ್ಕಳ ಆಕ್ರಂದನ ಇಡೀ ದೇಶ ಬೆಚ್ಚಿ ಬಿದ್ದು ನೋಡಿದ್ದನ್ನ ನೆನಪಿಸ್ಕೊಳ್ಳಿ. ಇಂತಹ ಅಸ್ಸಾದ್ ಅತ್ತ ತನ್ನ ವಿರುದ್ಧ ಯುದ್ಧ ಮಾಡ್ತಿರೋ ಗುಂಪುಗಳಲ್ಲಿ ಒಳಗೊಳಗೇ ಸಪೋರ್ಟ್ ಮಾಡಿ, ಈಗ ಯಾರೂ ಈತನ ಸಪೋರ್ಟಿಗೆ ಬಾರದಂತಾಗಿ ಹೋಗಿದೆ. ಇಷ್ಟೆಲ್ಲ ಇರೋ ಸಿರಿಯಾದಲ್ಲಿ ಎಕಾನಮಿ ಇದ್ಯಲ್ಲ, ಅಲ್ಲಿ ಪೆಟ್ರೋಲ್ ಬಾವಿಗಳಿವೆ. ಆದರೆ ಈಗ ಅವುಗಳ ಜೊತೆ ಬಿಸಿನೆಸ್ ಮಾಡೋರು ಇಲ್ಲದೇ ಡ್ರಗ್ಸ್ ಬಿಸಿನೆಸ್ ಜೋರಾಗಿದೆ.
ಇನ್ನು ಇಲ್ಲಿರೋ ಆ ಸಂಘಟನೆಗಳಿಗೆ ಅಮೆರಿಕ, ಟರ್ಕಿ, ಇಸ್ರೇಲ್ ಸಪೋರ್ಟ್ ಕೊಡ್ತವೆ. ಅಮೆರಿಕ, ಇಸ್ರೇಲ್ ಸಪೋರ್ಟ್ ಕೊಡೋದಕ್ಕೆ ಕಾರಣ ಇದೆ. ಈ ಅಸ್ಸಾದ್ ಆತ ಇಸ್ರೇಲಿನಲ್ಲಿ ಯೆಹೂದಿಗಳ ವಿರುದ್ಧ ಪ್ಯಾಲೆಸ್ತೀನ್ ಹೋರಾಟಕ್ಕೆ ಸಪೋರ್ಟ್ ಮಾಡ್ತಾನೆ. ಅದಕ್ಕೆ ಇಸ್ರೇಲ್, ಅಮೆರಿಕ.. ಎರಡೂ ದೇಶಗಳು ಸಿರಿಯಾ ವಿರುದ್ಧ ಯುದ್ಧ ಮಾಡ್ತಿವೆ.
ಇನ್ನು ಈಗ ಓಡಿ ಹೋಗಿರೋ ಅಧ್ಯಕ್ಷ ಅಸ್ಸಾದ್ಗೆ ಇರಾನ್, ರಷ್ಯಾ , ಲೆಬನಾನ ಹಿಜ್ಬುಲ್ಲಾ ಉಗ್ರರು ಸಪೋರ್ಟ್ ಕೊಡ್ತಾರೆ. ಸಿರಿಯಾದಲ್ಲಿರೋದು 87% ಮುಸ್ಲಿಮರು. ಅವರು ಅವರವರ ಮಧ್ಯೆನೇ ಹೊಡೆದಾಡ್ತಾರೆ. ಯುದ್ಧ ಮಾಡ್ತಾರೆ. ಬಾಂಬ್ ಹಾಕ್ತಾರೆ. ಮಕ್ಕಳನ್ನ ಕಿಡ್ನಾಪ್ ಮಾಡ್ತಾರೆ. ಬೇರೆ ಗುಂಪಿನವರ ಹೆಣ್ಣು ಮಕ್ಕಳನ್ನ ಸೆಕ್ಸ್ ಸ್ಲೇವ್ಸ್ ತರಾ ನೋಡ್ತಾರೆ. ಈಗ ಅಲ್ಲಿನ ಅಧ್ಯಕ್ಷ ಓಡಿ ಹೋಗಿದ್ದಾನೆ. ಸದ್ಯಕ್ಕೆ ರಷ್ಯಾದಲ್ಲಿ ಆಶ್ರಯ ಪಡ್ಕೊಂಡಿದ್ದಾನೆ. ಆದರೆ ತಹ್ರೀರ್ ಅಲ್-ಶಾಮ್ ಗ್ರೂಪ್ ನ ಲೀಡರ್, ಮೋಸ್ಟ್ ವಾಂಟೆಡ್ ಉಗ್ರಗಾಮಿ ಮೊಹಮ್ಮದ್ ಅಲ್-ಜೋಲಾನಿ ಈಗ ಸಿರಿಯಾನ ಆಕ್ರಮಣ ಮಾಡ್ಕೊಂಡಿದ್ದಾನೆ.