ʻ ಪುಷ್ಪ 2 ದಿ ರೂಲ್ ʼ ಚಿತ್ರ ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬ್ಲಾಕ್ ಬಸ್ಟರ್ ಆಗಿ ಕಲೆಕ್ಷನ್ ಮಾಡುತ್ತಿದೆ . ಡಿಸೆಂಬರ್ 05 ರಂದು ಬಿಡುಗಡೆಯಾದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಕೇವಲ ಮೂರು ದಿನದಲ್ಲಿ 621 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇದೀಗ ಸಿನಿ ಪ್ರೀಯರಿಗೆ ಖುಷಿ ಸುದ್ದಿ ಸಿಕ್ಕಿದ್ದು, ಟಿಕೆಟ್ ದರ ಕಡಿಮೆಯಾಗಿದೆ.
ಇದರಿಂದ ಸಿನಿಮಾ ಪ್ರೇಮಿಗಳು ಥಿಯೇಟರ್ಗೆ ಬರುತ್ತಾರೆ ಎಂದು ಹೇಳಲಾಗುತ್ತಿದೆ. ಪ್ರೀಮಿಯರ್ ಶೋಗೆ ಮಾತ್ರ ಟಿಕೆಟ್ ದರವನ್ನು ಹೆಚ್ಚಿಸಲಾಗಿತ್ತು. ಶೀಘ್ರದಲ್ಲೇ ಕಮ್ಮಿ ಬೆಲೆಗೆ ಟಿಕೆಟ್ ದರ ಲಭ್ಯವಾಗಲಿದೆ ಎಂದು ನಿರ್ಮಾಪಕರು ಹೇಳಿದ್ದಾರೆ. ಎರಡು ತೆಲುಗು ರಾಜ್ಯ ಸರ್ಕಾರಗಳು ಪುಷ್ಪ 2 ಟಿಕೆಟ್ ದರ ಹೆಚ್ಚಿಸಲು ಒಪ್ಪಿಕೊಂಡಿದ್ದವು. ಇದರಿಂದ ಡಿಸೆಂಬರ್ 4ರ ವಿಶೇಷ ಪ್ರೀಮಿಯರ್ ಶೋಗೆ ಹೆಚ್ಚುವರಿಯಾಗಿ 800 ರೂಪಾಯಿ ನಿಗದಿಯಾಗಿತ್ತು. ತದನಂತರದಲ್ಲಿ ಟಿಕೆಟ್ ದರ ಸಾವಿರ ರೂಪಾಯಿ ದಾಟಿತ್ತು. ಭಾನುವಾರ ಮಲ್ಟಿಪ್ಲೆಕ್ಸ್ನಲ್ಲಿ ‘ಪುಷ್ಪ 2’ ನೋಡಲು 500 ರೂಪಾಯಿ ಹಾಗೂ ಸಿಂಗಲ್ ಸ್ಕ್ರೀನ್ನಲ್ಲಿ 300 ರೂಪಾಯಿಗಿಂತ ಹೆಚ್ಚಿತ್ತು. ಆದರೆ ಈ ವಾರ ಟಿಕೆಟ್ ದರ ಇಳಿಕೆಯಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಡಿಸೆಂಬರ್ 09 ರಿಂದ 16 ರವರೆಗೆ ಸಿಂಗಲ್ ಸ್ಕ್ರೀನ್ ನಲ್ಲಿ ರೂ.105 ಮತ್ತು ಮಲ್ಟಿಪ್ಲೆಕ್ಸ್ ನಲ್ಲಿ ರೂ.150 ಹೆಚ್ಚಳ ಮಾಡಲು ಆಂಧ್ರ, ತೆಲಂಗಾಣ ಸರ್ಕಾರಗಳು ಅನುಮತಿ ನೀಡಿದೆ. ಬೆಂಗಳೂರಲ್ಲಿ ಬಾಲ್ಕನಿಗೆ 200 ರೂಪಾಯಿಂದ ಇದ್ದರೆ, ಮಿಡಲ್ ಕ್ಲಾಸ್ ಟಿಕೆಟ್ 150 ರೂಪಾಯಿಂದ ಟಿಕೆಟ್ ಸಿಗ್ತಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ 210 ರೂಪಾಯಿಯಿಂದ ಟಿಕೆಟ್ ಲಭ್ಯವಿದೆ.