ಬಿಗ್ ಬಾಸ್ ಮನೆಯಲ್ಲಿ ಹಳೆ ಸ್ಪರ್ಧಿಗಳು ಬಂದಿದ್ದಾರೆ. ಇದು ಹೊಸದೇನೂ ಅಲ್ಲ. ಈ ಹಿಂದಿನ ಸೀಸನ್ಗಳಲ್ಲೂ ಈ ಒಂದು ಕಾನ್ಸೆಪ್ಟ್ ಇತ್ತು. ಹಾಗೆ ಇದೀಗ ಕಳೆದ ಸೀಸನ್-೧೦ ರ ಸ್ಪರ್ಧಿಗಳು ದೊಡ್ಮನೆಯಲ್ಲಿ ಕಾಲಿಟ್ಟಿದ್ದಾರೆ. ಆ ಲೆಕ್ಕದಲ್ಲಿ ಸಂತು-ಪಂತು ಬಂದಿದ್ದಾರೆ. ತನಿಷಾ ಕುಪ್ಪಂಡ ಆಗಮಿಸಿದ್ದಾರೆ. ಡ್ರೋನ್ ಪ್ರತಾಪ್ ಎಂಟ್ರಿ ಆಗಿದೆ. ಇವರೆಲ್ಲ ಆಗಮನದಿಂದ ಮನೆಯಲ್ಲಿ ಹೊಸ ಉಲ್ಲಾಸ ಕ್ರಿಯೇಟ್ ಆಗಿದೆ. ಮಾವ ಅಂತ ಸಂತು ಅನ್ನು ಹನುಮಂತ ಕರೆದಿದ್ದಾರೆ. ಚುಟು ಚುಟು ಅಂತೈತಿ ಅಂತ ತನಿಷಾ ಜೊತೆಗೂ ಹನುಮಂತ ಕುಣಿದು ಕುಪ್ಪಳ್ಳಿಸಿದ್ದಾರೆ. ಹೀಗೆ ದೊಡ್ಮನೆಯಲ್ಲಿರೋ ಜೂನಿಯರ್ಗಳಿಗೆ ಹೊಸ ಟಚ್ ಕೊಡೋಕೆ ಈ ಸೀನಿಯರ್ಸ್ ಬಂದಿದ್ದಾರೆ.
ತುಕಾಲಿ ಸಂತೋಷ ಫುಲ್ ಜಾಲಿಯಾಗಿ ಇರುವಾಗ ಬಿಗ್ ಬಾಸ್ ವಿಶೇಷ ಮನವಿ ಮಾಡಿದ್ದಾರೆ. ಸಂತು-ಪಂತು ಜೋಡಿ ಎತ್ತುಗಳು. ಇಬ್ಬರು ಇರದೆ ಹೋದರೇ ಅಪೂರ್ಣತೆ ಭಾವ ಕಾಡುತ್ತದೆ ಎಂದು ಬಿಗ್ ಬಾಸ್ ಹೇಳುತ್ತಿದ್ದಂತೆ ಮೇನ್ ಡೋರ್ನಿಂದ ವರ್ತೂರು ಸಂತೋಷ ಎರಡು ಕೈಯಲ್ಲಿ ಬ್ಯಾಗ್ ಹಿಡಿದು ಎಂಟ್ರಿ ಕೊಟ್ಟರು. ಇದನ್ನು ನೋಡಿದ ತುಕಾಲಿ ಸಂತು ಓಡಿ ಹೋಗಿ ಗೆಳೆಯನನ್ನ ಅಪ್ಪಿಕೊಂಡು ಸಂತಸ ಪಟ್ಟಿದ್ದಾರೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೊಸ ಕಳೆ ಬಂದಿದ್ದು ಹಳಬರು ಹಾಗೂ ಹೊಸಬರು ಮಹಾ ಮಿಲನವಾಗಿದೆ. ಮೊದಲು ಬಿಗ್ ಬಾಸ್ ಮನೆಗೆ ಹಳೆ ಸ್ಪರ್ಧಿಗಳನ್ನ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕಳುಹಿಸುತ್ತಿದ್ದರು. ಆದರೆ ಇದೇ ಬಾರಿ ಹಳೆಯ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ನಾಲ್ವರು ಬಿಗ್ಬಾಸ್ ಮನೆಗೆ ಬಂದಿದ್ದಾರೆ.
ದೊಡ್ಮನೆಯಲ್ಲಿ ಸೀನಿಯರ್ ಮತ್ತು ಜೂನಿಯರ್ ಹೀಗೆ ಮುಖಾ-ಮುಖಿ ಆಗಿದ್ದಾರೆ. ಜೂನಿಯರ್ಗಳ ಆಟಕ್ಕೆ ಸೀನಿಯರ್ ಹೊಸ ಸ್ಪರ್ಶ ಕೊಡೋಕೆ ಬಂದಂತೆ ಇದೆ. ನಿನ್ನೆ ಡ್ರೋನ್ ಪ್ರತಾಪ್ ತನಿಷಾ ಕುಪ್ಪಂಡ ಎಂಟ್ರಿ ಕೊಟ್ಟಿದ್ದರು. ಮನೇಯಲ್ಲಿ ಫುಲ್ ಎಲ್ಲಾ ಜಾಲಿ ಜಾಲಿ ಆಗಿ ನಿನ್ನೆ ದಿನ ಕಳೆದರು ಅಷ್ಟೇ ಅಲ್ಲದೇ ಡ್ರೋನ್ ಪ್ರತಾಪ ಒಂದು ಗೇಮ್ ಆಡಿಸಿದ್ದರು. ಆ ಗೇಮ್ನಲ್ಲಿ ಆಟ ಆಡಿದವರಿಗೆ 2 ನಾಮಿನೇಷನ್ ಪಾಸ್ ಇದೆ ಎಂದು ಡ್ರೋನ್ ಪ್ರತಾಪ ಹೇಳುತ್ತಾರೆ. ಈ ಗೇಮ್ ಆಡಲು ಶಿಶಿರ್, ತ್ರಿವಿಕ್ರಮ್, ಮತ್ತು ರಜತ್ ಅವರನ್ನ ಡ್ರೋನ್ ಪ್ರತಾಪ್ ಸಲೆಕ್ಟ್ ಮಾಡ್ತಾರೆ
ಆದ್ರೆ ಅದೃಷ್ಟವಷಾತ್ ಆ ಗೇಮ್ನಲ್ಲಿ 2 ಪಾಸ್ ತ್ರಿವಿಕ್ರಮ್ಗೆ ಸಿಕ್ಕಿದ್ದು. ತ್ರಿವಿಕ್ರಮ್ ವಾರದ ನಾಮಿನೇಷನ್ ನಿಂದ ಪಾರಾಗಿದ್ದಾರೆ. ಹಾಗೆಯೇ ಇನ್ನೊಂದು ಪಾಸ್ನ್ನ ರಜತ್ ಅವರಿಗೆ ನೀಡಿದ್ದಾರೆ. ಅವರೂ ಕೂಡ ನಾಮಿನೇಷನ್ಯಿಂದ ಪಾರಾಗಿದ್ದಾರೆ.
ಇನ್ನು ಇಂದಿನ ಎಪಿಸೋಡ್ನಲ್ಲಿ ಸಂತು ಪಂತು ಆಗಮನವಾಗಲಿದೆ. ಏನೆಲ್ಲಾ ಮೋಜು ಮಸ್ತಿ ಮಾಡ್ತಾರೆಂದು ಕಾದುನೋಡಬೇಕಿದೆ.