ಬಿಗ್ ಬಾಸ್ ಸೀಸನ್ 11ರಲ್ಲಿ ಹಿಂದಿನ ವಾರ ಯಾರೋಬ್ಬರು ಎಲಿಮಿನೇಷನ್ ಆಗೇ ಇಲ್ಲ. ಚೈತ್ರಾ ಕುಂದಾಪುರ ಹಾಗೇ ಐಶ್ವರ್ಯಾ ಅವರು ಸೇಫ್ ಆದರು. ಪ್ರೇಕ್ಷಕರು ಈ ವಾರ ಸಖತ್ ಕುತೂಹಲದಲ್ಲಿ ಇದ್ದಿದ್ದರು. ಇದೀಗ ಮತ್ತೆ ಹೊಸ ಸುದ್ದಿಯೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿ ಕೇಳಿ ಬಿಗ್ ಬಾಸ್ ಫ್ಯಾನ್ಸ್ ಸಖತ್ ಖುಷ್ ಆಗಿದ್ದಾರೆ.
ಕಳೆದ 10 ಸೀಸನ್ಗಳ ಮೂಲಕ ಮನರಂಜನೆ ಕೊಡುವಲ್ಲಿ ಯಶಸ್ವಿಯಾದ ರಿಯಾಲಿಟಿ ಶೋ ಬಿಗ್ಬಾಸ್. ಇದೀಗ 11ನೇ ಸೀಸನ್ ಪ್ರತಿ ಮನೆ ಮನಗಳನ್ನ ಸೆಳೆದಿದೆ. ಏನೇ ಮಿಸ್ ಮಾಡಿದ್ರೂ ಈ ಕಾರ್ಯಕ್ರಮ ಮಿಸ್ ಮಾಡೊಲ್ಲ ಎನ್ನುವಷ್ಟರ ಮಟ್ಟಿಗೆ ವೀಕ್ಷಕರನ್ನ ಆಕರ್ಷಿಸಿದೆ ಈ ಬಾರಿಯ ಬಿಗ್ ಬಾಸ್ ಶೋ.
‘ಬಿಗ್ ಬಾಸ್ ಸೀಸನ್ 11’ ಮನರಂಜನೆಯ ಇತಿಹಾಸದಲ್ಲಿ ಮೈಲುಗಲ್ಲು ಸಾಧಿಸಿದೆ. ಕಳೆದ ಸೀಸನ್ ಕೊಟ್ಟ ಮನರಂಜನೆಗೆ ಕರುನಾಡು ಕಳೆದು ಹೋಗಿತ್ತು. ಅಲ್ಲದೇ, ಬಿಗ್ ಬಾಸ್ ಶೋಗೆ ಭರ್ಜರಿ ರೆಸ್ಪಾನ್ಸ್ ಕೂಡ ಸಿಕ್ಕಿತ್ತು. ಹೀಗಾಗಿ ಕಳೆದ ಬಾರಿ ಬಿಗ್ ಬಾಸ್ ಶೋವನ್ನ ಎರಡು ವಾರಗಳ ಕಾಲ ಜಾಸ್ತಿ ಮಾಡಿ ಮತ್ತಷ್ಟು ಮನರಂಜನೆಯನ್ನ ನೀಡಲಾಗಿತ್ತು. ಇದೀಗ ಸೀಸನ್ 11ರ ಶೋವನ್ನ ಇನ್ನೆರಡು ವಾರಗಳ ಕಾಲ ಮುಂದುವರೆಸುವುದಕ್ಕೆ ನಡೆಯುತ್ತಿದೆಯಂತೆ ಭರ್ಜರಿ ಪ್ಲ್ಯಾನ್.
ಈ ಸುದ್ದಿ ಕೇಳಿ ಬಿಗ್ ಬಾಸ್ ಪ್ರಿಯರು ಸೋಷಿಯಲ್ ಮೀಡಿಯಾ ಮೂಲಕ ಸಂತಸ ಹೊರ ಹಾಕುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಆಗಲಿ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಟಿಆರ್ಪಿ ವಿಚಾರಕ್ಕೆ ಬರೋದಾದರೆ, ಕಿಚ್ಚನ ಪಂಚಾತಿಗೆ ಭರ್ಜರಿ ಡಿಮ್ಯಾಂಡ್ ಇದೆ. ಇನ್ನು ಉಳಿದಂತೆ ಸ್ಪರ್ಧಿಗಳ ಮಧ್ಯೆ ಭಾರಿ ಪೈಪೋಟಿ ನಡೆಯುತ್ತಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗ್ತಾರೆ ಎನ್ನುವ ಕುತುಕೂಲ ವೀಕ್ಷಕರಲ್ಲಿದೆ.
ಮನೆಯಲ್ಲಿ ಇರೋರನ್ನ ಬೂಸ್ಟ್ ಮಾಡಲೆಂದೇ ಬಿಗ್ ಬಾಸ್ ಸೀನಿಯರ್ಗಳನ್ನ ಮನೆಯೊಳಗೆ ಬಿಟ್ಟಿದ್ದಾರೆ. ಆದರೆ, ಇದರಿಂದ ಮನೆಯಲ್ಲಿ ಒಂದು ಕಡೆಗೆ ಖುಷಿ ಇದೆ. ಮತ್ತೊಂದು ಕಡೆಗೆ ಜಗಳದ ಮೂಡ್ ಅಲ್ಲಿಯೇ ಸ್ಪರ್ಧಿಗಳಿದ್ದಾರೆ.ದೊಡ್ಮನೆಯಲ್ಲಿ ಗೆಸ್ಟ್ಗಳ ಆಗಮನ ಜೋರಾಗಿದೆ.