ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಟ್ರಿಪ್ಟ್ ನೀಡಿದ್ದಾರೆ ಈ ವಾರ. ಅದರಂತೆ ಸ್ಪರ್ಧಿಗಳು ಆಡಬೇಕಿದೆ. ಎಲ್ಲ ಸದಸ್ಯರ ಮಧ್ಯೆ ಸಖತ್ ಹೈಲೈಟ್ ಆಗ್ತಾ ಇರೋದು ರಜತ್ ಹಾಗೂ ಚೈತ್ರಾ ಇಬ್ಬರ ಕಾಮಿಡಿ ಜಗಳ ನೋಡುಗರಿಗೆ ಮಜಾ ನೀಡುವಂತಿದೆ. ಬಾಸ್ ಬಾಸ್ ಅಂತ ಚೈತ್ರಾಗೆ ಕರೆಯುತ್ತಿದ್ದ ರಜತ್, ಟಾಸ್ಕ್ಲ್ಲಿ ಚೈತ್ರಾ ಅವರು ಪಾಠ ಮಾಡೋದನ್ನ ಹೇಳಿಸಿಕೊಳ್ಳಬೇಕು. ಈಗ ಇಬ್ಬರ ಮಧ್ಯೆ ಮಜವಾದ ಸಂಗತಿ ಒಂದು ನಡೆದಿದೆ.
ಕಿರುತೆರೆಯ ದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11 ದಿನಕ್ಕೊಂದು ಹೊಸ ಹೊಸ ತಿರುವು ಪಡೆದುಕೊಂಡು ಮುನ್ನುಗ್ಗುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ರಜತ್ ಕಿಶನ್ ಸಖತ್ ಸೌಂಡ್ ಮಾಡುತ್ತಿದ್ದಾರೆ. ಮೊದಲ ಪ್ರೋಮೋದಲ್ಲಿ ಧನರಾಜ್ ಜೊತೆಗೆ ಗಲಾಟೆ ಮಾಡಿಕೊಂಡಿರೋ ರಜತ್ ಇದೀಗ ಚೈತ್ರಾ ಕುಂದಾಪುರ ಮುಂದೆ ತನ್ನ ಗಂಡಸ್ತನಕ್ಕೆ ತಾನೇ ಸವಾಲ್ ಹಾಕಿಕೊಂಡಿದ್ದಾರೆ. ಅದು ಕೂಡ ಸಣ್ಣ ವಿಚಾರಕ್ಕೆ ತನಗೆ ತಾನೇ ದೊಡ್ಡ ಸವಾಲ್ ಹಾಕಿಕೊಂಡಿದ್ದಾರೆ.
ಈ ಇಬ್ಬರ ಗಲಾಟೆಗೆ ಮನೆಮಂದಿ ಸುಸ್ತಾಗಿದ್ದಾರೆ. ಐಶ್ವರ್ಯಾ ಅವರು ರಕ್ಷತ್ಗೆ ಇದು ಕ್ಲೀನಿಂಗ್ ಟೈಮ್ ಎಂದಿದ್ದಾರೆ. ಇಬ್ಬರಲ್ಲಿ ಕೊನೆಗೆ ಯಾರು ಸೋಲ್ತಾರೆ ಏನ್ನೋದು ಇವತ್ತಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.