ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 11, 71ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್ಬಾಸ್ ಸೀಸನ್ 11ಕ್ಕೆ ಹಳೆಯ ಸ್ಪರ್ಧಿಗಳ ಆಗಮನವಾಗಿದೆ. ಮೊನ್ನೆಯ ಎಪಿಸೋಡ್ನಲ್ಲಿ ಡ್ರೋನ್ ಪ್ರತಾಪ್ ಹಾಗೂ ತನಿಷಾ ಕುಪ್ಪಂಡ ಬಂದಿದ್ದರು. ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕಳಿಸುವುದಕ್ಕೆ ಒಂದು ರೀಸನ್ ಕೂಡ ಇದೆ. ಅದುವೆ ಬಿಗ್ಬಾಸ್ ಮನೆಯ ಬಹು ಮುಖ್ಯವಾದ ಅಂಶವೇ ನಾಮಿನೇಷನ್ ಪ್ರಕ್ರಿಯೆ. 11ನೇ ವಾರಕ್ಕೆ ಕಾಲಿಟ್ಟ ಬಿಗ್ಬಾಸ್ ಮನೆಗೆ ಕಳೆಯ ಸೀಸನ್ ಸ್ಪರ್ಧಿಗಳು ಒಬ್ಬೊಬ್ಬರಾಗಿ ಎಂಟ್ರಿ ಕೊಟ್ಟು ನಾಮಿನೇಷನ್ ಪ್ರಕ್ರಿಯೆ ನಡೆಸುತ್ತಿದ್ದಾರೆ.
ಇನ್ನೂ, ನಿನ್ನೆಯಎಪಿಸೋಡ್ನಲ್ಲಿ ನಮ್ರತಾ ಗೌಡ ಅವರು ಅವರು ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ನಮ್ರತಾ ಗೌಡ ಎಂಟ್ರಿ ಕೊಡುತ್ತಿದ್ದಂತೆ ಐಶ್ವರ್ಯಾ ಸಿಂಧೋಗಿ ಭಾವುಕರಾದರು. ಬಳಿಕ ನಮ್ರತಾ ಗೌಡಗೇ ಐಶ್ವರ್ಯಾ ಸಿಂಧೋಗಿ ಗಟ್ಟಿಯಾದ ಅಪ್ಪುಗೆ ಕೊಟ್ಟು ಮಿಸ್ ಯೂ ಅಂತ ಹೇಳಿದ್ದಾರೆ.
ಬಿಗ್ಬಾಸ್ಗೆ ಬರುವುದಕ್ಕೂ ಮುನ್ನ ಐಶ್ವರ್ಯಾ ಸಿಂಧೋಗಿ ಹಾಗೂ ನಮ್ರತಾ ಗೌಡ ತುಂಬಾ ಆತ್ಮೀಯ ಸ್ನೇಹಿತರಾಗಿದ್ದರು. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ನಾಗಿಣಿ 2 ಧಾರಾವಾಹಿಯಲ್ಲಿ ಶಿವಾನಿ ಹಾಗೂ ಮಾಯಾಂಗಿನಿ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದರು ನಮ್ರತಾ ಮತ್ತು ಐಶ್ವರ್ಯಾ ಶಿಂಧೋಗಿ.
ನಾಗಿಣಿ ಧಾರಾವಾಹಿಯ ಮೂಲಕ ಇಬ್ಬರು ಒಬ್ಬರಿಗೊಬ್ಬರು ಪರಿಚಯವಾದರು. ಅದ್ಭುತ ನಟನೆಯ ಮೂಲಕ ವೀಕ್ಷಕರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಧಾರಾವಾಹಿ ಮುಕ್ತಾಯದ ನಂತರದಲ್ಲೂ ಇಬ್ಬರ ತಮ್ಮ ಗೆಳತನವನ್ನ ಹಾಗೇ ಕಾಪಾಡಿಕೊಂಡು ಬಂದಿದ್ದಾರೆ.