ನಾಗಚೈತನ್ಯ ಜೊತೆ ಹೊಸ ಬದುಕಿಗೆ ಮುನ್ನುಡಿಯನ್ನು ಬರೆದ ಶೋಭಿತಾ ತಮ್ಮ ಮದುವೆಯಲ್ಲಿ ದಕ್ಷಿಣ ಭಾರತದ ಕಾಂಜೀವರಂ ಸೀರೆಯಲ್ಲಿ ಮಿಂಚಿದ್ದರು. ಚಿನ್ನದ ಝರಿಯಿಂದ ಕಸೂತಿ ಮಾಡಿದ ಸೀರೆಯಲ್ಲಿ ಗಮನ ಸೆಳೆದರು. ಸೊಗಸಾದ ಚಿನ್ನದ ಆಭರಣಗಳನ್ನು ಧರಿಸಿ ಸಾಂಪ್ರದಾಯಿಕ ದಕ್ಷಿಣ ಭಾರತದ ವಧುವಂತೆ ಕಂಗೊಳಿಸಿದ್ದರು. ದಕ್ಷಿಣ ಭಾರತದಲ್ಲಿ ಕಾಸುಮಾಲ ಎಂದು ಕರೆಯಲಾಗುವ ಸಂಪ್ರದಾಯಿಕ ನಾಣ್ಯ ವಿನ್ಯಾಸವನ್ನು ಒಳಗೊಂಡ ನೆಕ್ಲೇಸ್ ಕೂಡ ಮದುವೆಯ ದಿನ ಧರಿಸಿದ್ದ ಶೋಭಿತಾ ಎಲ್ಲರ ಕಣ್ಸೆಳೆದಿದ್ದರು. ಇಂತಹ ಶೋಭಿತಾ ಈಗ ಮದುವೆಯ ನಂತರ ಕಾಕ್ ಟೈಲ್ ಪಾರ್ಟಿ ಮಾಡಿ ಸಂಭ್ರಮಿಸಿದ್ದಾರೆ. ಕಾಕ್ಟೈಲ್ ಪಾರ್ಟಿಯಲ್ಲಿ ಕೂಡ ತಮ್ಮ ಕಾಸ್ಟೂಮ್ನಿಂದ ಎಲ್ಲರ ಕಣ್ಮನ ಸೆಳೆದಿದ್ದಾರೆ.
ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ಶೋಭಿತಾ ಕಾಣಿಸಿಕೊಂಡಿದ್ದಾರೆ. ನಟಿಯ ಲುಕ್ಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.ಬನ್ ಹೇರ್ ಸ್ಟೈಲ್ ನಲ್ಲಿ ಕಾಕ್ ಟೈಲ್ ಪಾರ್ಟಿಗೆ ಬಂದ ಶೋಭಿತಾ ಸಿಂಪಲ್ ಮೇಕಪ್ ಮಾಡಿಕೊಂಡಿದ್ದರು. ಗೋಲ್ಡ್ ಗೌನ್ಗೆ ಹೋಲುವಂತಹ ನೆಕ್ಲೇಸ್ ಧರಿಸಿದ್ದ ಶೋಭಿತಾ ತಮ್ಮ ಉಡುಗೆಗೆ ಮ್ಯಾಚ್ ಆಗುವಂತಹ ಪರ್ಸ್ ಕೈಯಲ್ಲಿ ಹಿಡಿದುಕೊಂಡು ಬಂದಿದ್ದರು.ಈ ಉಡುಗೆಯನ್ನು ಡಿಸೈನ್ ಮಾಡಿದ ಡಿಸೈನರ್ ತರುಣ್ ತಹಿಲಿಯಾನಿ ಶೋಭಿತಾ ಅವರ ಈ ಫೋಟೊಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು ಶೋಭಿತಾ ಅವರ ಸೌಂದರ್ಯವನ್ನು ಹೊಗಳಿದ್ದಾರೆ.
ಅನ್ನಪೂರ್ಣ ಸ್ಟುಡಿಯೋದಲ್ಲಿ ಡಿ.4ರಂದು ರಾತ್ರಿ 8:15ಕ್ಕೆ ಶೋಭಿತಾ ಮತ್ತು ನಾಗಚೈತನ್ಯ ಹಸೆಮಣೆ ಏರಿದರು. ಖುಷಿ ಖುಷಿಯಾಗಿ ಇಬ್ಬರೂ ಮದುವೆಯಾಗಿದ್ದಾರೆ.ಮದುವೆಯಲ್ಲಿ ಶೋಭಿತಾ ಮತ್ತು ನಾಗಚೈತನ್ಯ ಬಿಳಿ ಬಣ್ಣದ ಉಡುಗೆಯಲ್ಲಿ ಕಂಗೊಳಿಸಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ.
ಇನ್ನೂ ಶೋಭಿತಾ ಮತ್ತು ನಾಗಚೈತನ್ಯ ಕಾಲೇಜು ದಿನಗಳಿಂದ ಪರಿಚಿತರು. ಸಮಂತಾ ಜೊತೆಗಿನ ದಾಂಪತ್ಯಕ್ಕೆ ಪೂರ್ಣ ವಿರಾಮ ಬಿದ್ಮೇಲೆ ಶೋಭಿತಾ ಎಂಟ್ರಿ ಕೊಟ್ಟರು.ಎರಡೂವರೆ ವರ್ಷಗಳ ಡೇಟಿಂಗ್ ನಂತರ ಗುರುಹಿರಿಯರ ಸಮ್ಮತಿ ಪಡೆದು ಹೊಸ ಬಾಳಿಗೆ ನಾಗಚೈತನ್ಯ ಮತ್ತು ಶೋಭಿತಾ ಕಾಲಿಟ್ಟಿದ್ದಾರೆ. ಮದುವೆಯಲ್ಲಿ ಈ ಜೋಡಿಗೆ ಶುಭಕೋರಲು ನ್ಯಾಚುರಲ್ ಸ್ಟಾರ್ ನಾನಿ ದಂಪತಿ, ನಟ ಕಾರ್ತಿ ಸೇರಿದಂತೆ ಅನೇಕರು ಭಾಗಿಯಾಗಿದ್ದರು.