ನಟನಾಗಿ, ನಿರೂಪಕನಾಗಿ, ಕಿರುತೆರೆ ಕಾರ್ಯಕ್ರಮದ ಜಡ್ಜ್ ಆಗಿ ಸೃಜನ್ ಲೋಕೇಶ್ ಪ್ರೇಕ್ಷಕರಿಗೆ ಹತ್ತಿರವಾಗಿರೋದು ಗೊತ್ತೇ ಇದೆ. `ನನ್ನಮ್ಮ ಸೂಪರ್ ಸ್ಟಾರ್ 3’ ಶೂಟಿಂಗ್ ಸೆಟ್ನಲ್ಲಿ ಸೃಜನ್ ಲೋಕೇಶ್ ಜಡ್ಜ್ ಆಗಿ ಬಳಿಕ ರಾಜಾ ರಾಣಿ ಶೋನಲ್ಲಿಯೂ ತೀರ್ಪುಗಾರರಾಗಿದ್ದರು. ಇದೀಗ ಮತ್ತೆ ಅವರ ಫ್ಯಾನ್ಸ್ಗೆ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಪ್ರೋಮೋ ನೋಡಿ ಪ್ರೇಕ್ಷಕರು ಸಖತ್ ಖುಷ್ ಆಗಿದ್ದಾರೆ. ವರಲಕ್ಷ್ಮಿ ಆಗಿ ಮಿಂಚಿದ್ದ ಅಪರ್ಣಾ ಅವರು ಈ ಬಾರಿ ಇರೋದಿಲ್ಲ ಎಂಬುದು ಬೇಸರದ ಸಂಗತಿ.
‘ಮಜಾ ಟಾಕೀಸ್’ 2015ರಲ್ಲಿ ಆರಂಭಿಸಲಾಯಿತು. ಇನ್ನು ಕೆಲವೇ ದಿನಗಳಲ್ಲಿ ಈ ಶೋ ಆರಂಭ ಆಗಿ 10 ವರ್ಷ ತುಂಬಲಿದೆ. ಇದೇ ಖುಷಿಯಲ್ಲಿ ಸೃಜನ್ ಲೋಕೇಶ್ ಅವರು ಹೊಸ ಸೀಸನ್ ಆರಂಭಿಸೋ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಈ ಶೋಗಾಗಿ ನಾವು ಕಾಯ್ತಾ ಇದ್ವಿ’ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
2015ರಲ್ಲಿ ಆರಂಭ ಆದ ಈ ಶೋ 2017ರವರೆಗೆ ಇತ್ತು. 2018ರಲ್ಲಿ ‘ಮಜಾ ಟಾಕೀಸ್ ಸೂಪರ್ ಸೀಸನ್’ ಆರಂಭ ಆಯಿತು. 2020ರಲ್ಲಿ ಮತ್ತೆ ‘ಮಜಾ ಟಾಕೀಸ್’ ಹೆಸರಲ್ಲಿ ಶೋ ಶುರುವಾಯಿತು. ಕುರಿ ಪ್ರತಾಪ್, ಇಂದ್ರಜಿತ್ ಲಂಕೇಶ್, ರೆಮೋ, ಶ್ವೇತಾ ಚಂಗಪ್ಪ. ಅವರು ಈ ಹೊಸ ಸೀಸನ್ನಲ್ಲಿ ಇರಬೇಕು ಎಂಬುದೇ ಪ್ರೇಕ್ಷಕರ ಆಸೆ.
ಸೃಜನ್ ಲೋಕೇಶ್, ಕುರಿ ಪ್ರತಾಪ್, ಅಪರ್ಣಾ, ಪವನ್, ಮಂಡ್ಯ ರಮೇಶ್,ವಿಶ್ವ, ವಿ. ಮನೋಹರ್, ಮಿಮಿಕ್ರಿ ದಯಾನಂದ್, ನವೀನ್ ಪಡೀಲ್ ಮುಂತಾದವರು ‘ಮಜಾ ಟಾಕೀಸ್’ನಲ್ಲಿ ಇದ್ದಿದ್ದರು. ಮಜಾ ಟಾಕೀಸ್ ಎಂದರೆ ಅದಕ್ಕೆ ಅದರದ್ದೇ ಆದ ಒಂದು ಫಾರ್ಮ್ಯಾಟ್ ಇದೆ. ಅದನ್ನು ವೀಕ್ಷಕರು ಕೂಡ ಇಷ್ಟಪಟ್ಟಿದ್ದಾರೆ. ಈ ಸೀಸನ್ನಲ್ಲಿ ಮತ್ತೆ ಹೊಸಬರ ಆಗಮನ ಆಗುವ ಸಾಧ್ಯತೆಯಿದ್ದು, ಪ್ರೇಕ್ಷಕರು ಕಾತುರದಿಂದ ಕಾಯ್ತಿದ್ದಾರೆ.