ಸೂಪರ್ ಸ್ಟಾರ್ ಉಪೇಂದ್ರ ಅವರ ಬಹುನಿರೀಕ್ಷಿತ ಹೊಸ ಚಿತ್ರ ‘ಯುಐ’ ಇದೇ ಡಿಸೆಂಬರ್ 20 ರಂದು ತೆರೆಕಾಣಲು ಸಜ್ಜಾಗಿದೆ. ಈ ಸಿನಿಮಾದ ಟೀಸರ್ ಮತ್ತು ಟ್ರೈಲರ್ ಈಗಾಗಲೇ ಪ್ರೇಕ್ಷಕರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದ್ದರೆ,ಈಗ ಬಾಲಿವುಡ್ ನ ಖ್ಯಾತ ನಟ ಆಮೀರ್ ಖಾನ್ ‘ಯುಐ’ ಚಿತ್ರತಂಡಕ್ಕೆ ನನ್ನ ಶುಭ ಹಾರೈಕೆಗಳು” ಎಂದು ಹೇಳಿದ್ದಾರೆ.
ಆಮೀರ್ ಖಾನ್ ಒಂದು ವೀಡಿಯೋ ಹಂಚಿಕೊಂಡಿದ್ದು, ಅದರಲ್ಲಿ ಉಪೇಂದ್ರ ಅವರೊಂದಿಗೆ ಮಾತನಾಡುತ್ತಾರೆ. ತಮ್ಮ ವೀಡಿಯೋ ಸಂದೇಶದಲ್ಲಿ ಅವರು ಹೇಳಿರುವಂತೆ, “ನಾನು ಉಪೇಂದ್ರ ಅವರ ಅಭಿಮಾನಿ. ‘ಯುಐ’ ಚಿತ್ರದ ಟ್ರೈಲರ್ ನೋಡಿದಾಗ ನಿಜಕ್ಕೂಸಂತೋಷವಾಯಿತು. ಈ ಚಿತ್ರ ಸಂಪೂರ್ಣ ವಿಭಿನ್ನವಾಗಿದ್ದು, ಊಹಿಸಲು ಅಸಾಧ್ಯ. . ಈ ಚಿತ್ರ ನಿಜಕ್ಕೂ ಅದ್ಭುತ ಶಾಕ್ ನೀಡುವಂತ್ತಿದೆ. ಎಲ್ಲಾ ಪ್ರೇಕ್ಷಕರು ಈ ಮೂವಿಯನ್ನು ಇಷ್ಟಪಡುವುದು ಖಚಿತ. ಎಂದು ಹೇಳಿದ್ದಾರೆ.
ಆಮೀರ್ ಖಾನ್ ಅವರ ಮಾತುಗಳಿಗೆ ನಟ ಉಪೇಂದ್ರ ಕೃತಜ್ಞತೆ ಸೂಚಿಸಿದ್ದು, ಈ ಬೆಂಬಲಕ್ಕಾಗಿ ಆಮೀರ್ಗೆ ಧನ್ಯವಾದ ತಿಳಿಸಿದ್ದಾರೆ. ಸಿನಿ ಪ್ರೇಕ್ಷಕರು ಮಾತ್ರವಲ್ಲ, ಚಿತ್ರರಂಗದ ತಾರೆಯರೂ ‘ಯುಐ’ ಚಿತ್ರವನ್ನು ಸಂಭ್ರಮಿಸುತ್ತಿರುವುದು, ಇದೊಂದು ವಿಶಿಷ್ಟ ಸಿನಿಮಾವಾಗಿ ಹೊರಹೊಮ್ಮಲಿದೆಯೆಂಬ ನಿರೀಕ್ಷೆಯನ್ನು ಹೆಚ್ಚು ಬಲಪಡಿಸಿದೆ.