ರಾಕಿಂಗ್ ಸ್ಟಾರ್ ಯಶ್ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಟಾಕ್ಸಿಕ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿ ಆಗಿರುವ ಯಶ್ ಬಿಡುವು ಸಿಕ್ಕಾಗ ಅಭಿಮಾನಿಗಳ ಜೊತೆ ಬೆರೆತು ಮಾತಾಡ್ತಾರೆ. ರಸ್ತೆಯಲ್ಲಿ ಮಹಿಳಾ ಅಭಿಮಾನಿಯೊಬ್ಬರು ಯಶ್ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಮಹಿಳೆಯ ಪ್ರೀತಿ ಹಾಗೂ ಗೌರವಕ್ಕೆ ನಟ ಯಶ್ ಕೈ ಮುಗಿದು ಧನ್ಯವಾದ ಹೇಳಿದ್ದಾರೆ.
ರಾಕಿಭಾಯ್ ಯಶ್ಗೆ ಮಹಿಳೆಯೊಬ್ಬರು ಶಾಲು ಹೊದಿಸಿ ಸನ್ಮಾನ ಮಾಡಿರೋ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಶಾಲು ಹೊದಿಸುವ ವೇಳೆ ನಟ ಯಶ್ ಕೈ ಮುಗಿದು ಮಹಿಳೆಯ ಗೌರವ ಹಾಗೂ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ. ಯಶ್ ವಿನಯವಂತಿಕೆಯನ್ನು ಅಭಿಮಾನಿಗಳು ಕೊಂಡಾಡ್ತಿದ್ದಾರೆ.
ಕೆಜಿಎಫ್ ಬಳಿಕ ಟಾಕ್ಸಿಕ್ ಸಿನಿಮಾ ಮೂಲಕ ತೆರೆ ಮೇಲೆ ಬರಲು ಯಶ್ ಭರ್ಜರಿ ತಯಾರಿ ನಡೆಸಿದ್ದಾರೆ. ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಜೊತೆ ಯಶ್ ಟಾಕ್ಸಿಕ್ ಸಿನಿಮಾ ಮಾಡ್ತಿದ್ದಾರೆ. ತೆರೆ ಮೇಲೆ ರಾಕಿಂಗ್ ಸ್ಟಾರ್ ಅಬ್ಬರ ನೋಡಲು ಫ್ಯಾನ್ಸ್ ಕೂಡ ಕಾಯ್ತಿದ್ದಾರೆ.