ರಾಜ್ಯದಲ್ಲಿ ಪಂಚಮಸಾಲಿ VS ಹಿಂದುಳಿದ ವರ್ಗಗಳ ಫೈಟ್ ಜೋರಾಗ್ತಿದೆ. 2ಎ ಮೀಸಲಾತಿ ಪರ-ವಿರೋಧ ಕೂಗು ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿದೆ. ಮೀಸಲಾತಿ ಬೇಕೇ ಬೇಕು ಅಂತ ಪಂಚಮಸಾಲಿ ಒತ್ತಾಯ ಮಾಡ್ತಿದ್ರೆ, ಇನ್ನೊಂದು ಕಡೆ ಯಾವುದೇ ಕಾರಣಕ್ಕೂ ಕೊಡಬಾರದು ಅಂತ ಹಿಂದುಳಿದ ವರ್ಗಗಳು ಆಗ್ರಹಿಸಿ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಪಂಚಮಸಾಲಿಗಳನ್ನ 2Aಗೆ ಸೇರಿಸಿದ್ರೆ ಹುಷಾರ್, ಪಂಚಮಸಾಲಿಗಳನ್ನ 2Aಗೆ ಸೇರಿಸಿದ್ರೆ ಉಗ್ರ ಹೋರಾಟದ ಮಾಡ್ತಿವಿ ಎಂದು ಸಿದ್ದರಾಮಯ್ಯಗೆ ಹಿಂದುಳಿದ ವರ್ಗಗಳ ಮುಖಂಡರು ವಾರ್ನಿಂಗ್ ನೀಡಿದ್ದಾರೆ.
ಸಿಎಂ ಭೇಟಿಯಾಗಿ ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡಬೇಡಿ ಎಂದು ಮನವಿ ಪತ್ರ ಕೊಟ್ಟಿದ್ದಾರೆ OBC ಮುಖಂಡರು. 2002 ರಿಂದ ಹಿಂದುಳಿದ ವರ್ಗಗಳನ್ನು ಪ್ರವರ್ಗಗಳಾಗಿ ವಿಂಗಡಣೆ ಮಾಡಲಾಗಿದೆ. 2ಎ ಪಟ್ಟಿಗೆ ಯಾವುದೇ ಸಮುದಾಯವನ್ನ ಸೇರಿಸಬಾರದು ಎಂದು ಕೇಸ್ ಇದೆ. ನ್ಯಾಯಾಲಯದಲ್ಲಿ ಈಗಾಗಲೇ ಪ್ರಕರಣ ವಿಚಾರಣೆ ಹಂತದಲ್ಲಿದೆ. ನ್ಯಾಯಾಲಯಕ್ಕೆ ರಾಘವೇಂದ್ರ ಎಂಬುವರು ಪಿಐಎಲ್ ಹಾಕಿದ್ದಾರೆ. ರಾಘವೇಂದ್ರ VS ಸ್ಟೇಟ್ ಆಫ್ ಕರ್ನಾಟಕ ಮಧ್ಯೆ ಪ್ರಕರಣ ದಾಖಲಾಗಿದೆ. ಹೀಗಾಗಿ ಇದರ ಸಂಬಂಧ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒಬಿಸಿ ಮುಖಂಡರಿಂದ ಮನವಿ ಸಲ್ಲಿಕೆಯಾಗಿದೆ.