ದಕ್ಷಿಣ ಭಾರತದ ಸ್ಟಾರ್ ನಟಿ ಕೀರ್ತಿ ಸುರೇಶ್ ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಅಭಿಮಾನಿಗಳಿಗೆ ಸಂತಸದ ಕ್ಷಣವಾಗಿದೆ. ಬಾಲ್ಯದ ಗೆಳೆಯ ಆಂಟೋನಿ ತಟ್ಟಿಲ್ ಅವರನ್ನು ಗೋವಾದಲ್ಲಿ ಅದ್ದೂರಿಯಾಗಿ ಡೆಸ್ಟಿನೇಷನ್ ವೆಡ್ಡಿಂಗ್ನಲ್ಲಿ ಮಾಡಿಕೊಂಡ ಕೀರ್ತಿ ಸುರೇಶ್, ತಮ್ಮ ಮದುವೆ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಬಾಲ್ಯದ ಗೆಳೆಯನ ಜೊತೆ 15 ವರ್ಷಗಳ ಪ್ರೀತಿ, ಇಂದು ದಾಂಪತ್ಯ ಜೀವನಕ್ಕೆ ಕಾಲಿ ಟ್ಟಿದ್ದಾರೆ . ಇಬ್ಬರೂ ಕ್ಲಾಸ್ಮೇಟ್ಸ್ ಆಗಿ ಹೈಸ್ಕೂಲ್ನಲ್ಲಿ ಒಟ್ಟಿಗೆ ಓದಿದ್ದರು. ಆಂಟೋನಿ ತಟ್ಟಿಲ್ ಮೂಲತಃ ಕೇರಳದ ಕೊಚ್ಚಿಯವರು, ಆದರೆ ದುಬೈನಲ್ಲಿ ವ್ಯಾಪಾರ ಕ್ಷೇತ್ರದಲ್ಲಿ ಯಶಸ್ವಿಯಾಗಿ ನೆಲೆಸಿದ್ದಾರೆ. ದುಬೈಯಲ್ಲಿ ಹಲವಾರು ಉದ್ಯಮಗಳನ್ನು ನಿರ್ವಹಿಸುತ್ತಿದ್ದಾರೆ.
ಹಿಂದು ಸಂಪ್ರದಾಯದಂತೆ ನಡೆದ ಈ ಮದುವೆಯಲ್ಲಿ ಕೀರ್ತಿ ಕೆಂಪು ಬಣ್ಣದ ಸೀರೆಯಲ್ಲಿ ಮಿಂಚಿದ್ದರು. ಕೆಂಪು ಮುತ್ತಿನ ಗ್ರ್ಯಾಂಡ್ ನೆಕ್ಲೆಸ್ ಹಾಗೂ ಮ್ಯಾಚಿಂಗ್ ಇಯರಿಂಗ್ಸ್ ತೊಟ್ಟಿದ್ದ ಅವರು ಮದುವೆಯ ಸಖತ್ ಆಕರ್ಷಣೆ ಆಗಿದ್ದರು. ತಾಳಿ ಕಟ್ಟುವ ವೇಳೆ ನಟಿ ಕೀರ್ತಿ ಸುರೇಶ್ ಕಣ್ಣೀರು ಹಾಕಿದ್ದಾರೆ. ಮದುವೆಯ ಫೋಟೋಗಳು ಮತ್ತು ವಿಡಿಯೋಗಳು ಅಭಿಮಾನಿಗಳ ಹೃದಯವನ್ನು ಗೆದ್ದಿದ್ದು, ಈ ಮುದ್ದಾದ ಜೋಡಿಗೆ ಎಲ್ಲೆಡೆ ಶುಭಾಶಯಗಳ ಸುರಿಮಳೆ ಸುರಿಯುತ್ತಿದೆ. ಕೆಲ ದಿನಗಳ ಹಿಂದೆಯಷ್ಟೇ ಕೀರ್ತಿ ತಮ್ಮ ಬಾಲ್ಯದ ಗೆಳೆಯನೊಂದಿಗೆ ತೆಗೆಸಿಕೊಂಡಿದ್ದ ಫೋಟೋಗಳು ಸಹ ದೊಡ್ಡ ಸಂಚಲನವನ್ನು ಉಂಟುಮಾಡಿದ್ದವು.