ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿ ಉಗ್ರಂ ಮಂಜು ಜೋಕರ್ ಆಗಿದ್ದಾರೆ. ಹಾಗೆ ಸುಮ್ನೆ ಜೋಕರ್ ಆಗ್ತೀನಿ ಅಂತಲೇ ಮಂಜು ಜೋಕರ್ ಆಗಿದ್ದಾರೆ. ಎಲ್ಲರಿಗೂ ಕಾಟಕೊಡ್ತೀನಿ ಅಂತಲೇ ಜೋಕರ್ ಆಗಿದ್ದಾರೆ. ಜೋಕರ್ ಮಂಜಣ್ಣ ಏನೋ ಒಂದು ಮಾಡ್ಬೇಕು ಅಂತ ಪ್ಲಾನ್ ಮಾಡಿದ್ದರು. ಜೋಕರ್ ಗೆಟಪ್ ಧರಿಸಿಕೊಂಡು ಕಾಟ ಕೊಡ್ಬೇಕು ಅಂತ ಟ್ರೈ ಮಾಡಿದ್ದರು. ಆದರೆ ಈಗ ಅವರೇ ಥರ ಥರ ಆಗ್ತಿದ್ದಾರೆ. ಗೌತಮಿಯ ಕ್ಷಣ ಕ್ಷಣದ ವಾರ್ನಿಂಗ್ಗೆ ಸೋಲುತ್ತಿದ್ದಾರೆ ಅಂತಿದ್ದಾರೆ ನೆಟ್ಟಿಗರು.
ಬಿಗ್ಬಾಸ್ ಕೊಟ್ಟ ಟಾಸ್ಕ್ ಆಡಲು ಮನೆ ಮಂದಿ ಹರಸಾಹಸ ಪಟ್ಟಿದ್ದಾರೆ. ಹೌದು, ರಿಲೀಸ್ ಆದ ಪ್ರೋಮೋದಲ್ಲಿ ಚೆಂಡು ಅಡೆತಡೆಗಳನ್ನು ದಾಟಿ ಅಲ್ಲಿರುವ ಬುಟ್ಟಿಗ ಬಂದು ಬೀಳಬೇಕಾಗಿತ್ತು. ಇದೇ ಟಾಸ್ಕ್ನಲ್ಲಿ ಗೌತಮಿ, ಐಶ್ವರ್ಯಾ ಆಡುತ್ತಿದ್ದರು. ಆಗ ಉಗ್ರಂ ಮಂಜು ಅವರ ಏಕಾಗ್ರತೆಯನ್ನು ಹಾಳು ಮಾಡಲು ಹಾಡು ಹಾಡಿದ್ದಾರೆ. ಆಗ ಶಿಶಿರ್ ಮಂಜಣ್ಣ ಸ್ಪಲ್ಪ ಸುಮ್ನೆ ಇರಿ ಅಂತ ಹೇಳಿದ್ದಾರೆ. ಇದಕ್ಕೆ ಕೋಪಗೊಂಡ ಮಂಜು ಕಿರುಚಾಡಿದ್ದಾರೆ.
ಆಗ ಗೌತಮಿ ಗೆಳೆಯ ಮಂಜು ವಿರುದ್ಧ ರೆಬೆಲ್ ಆಗಿದ್ದಾರೆ. ಆಡ್ತೀನೋ, ಸಾಯ್ತಿನೋ ದಯವಿಟ್ಟು ನನ್ನ ಕಡೆ ತಿರುಗಬೇಡಿ, ನೀವು ಮಾಡುವ ತಪ್ಪಿಗೆ ನನಗೆ ಬಹಳಷ್ಟು ತೊಂದರೆಯಾಗಿದೆ ಅಂತ ಹೇಳಿದ್ದಾರೆ. ಇದಾದ ಬಳಿಕ ಮತ್ತೆ ಬೆಡ್ರೂಮ್ನಲ್ಲಿ ಗಲಾಟೆ ಮಾಡಿಕೊಂಡು ಮಂಜು ಅವರ ಮೇಲೆ ಗೌತಮಿ ರೇಗಾಡಿದ್ದಾರೆ. ಇನ್ನು ಮಂಜು ಅವರು ಗೌತಮಿ ಅವರನ್ನು ಸಾಮಾಧಾನ ಪಡಿಸಲು ಹೋಗಿದ್ದಾರೆ. ಅದೇ ವೇಳೆಗೆ ಮಂಜು ಅವರು ಕ್ಯಾಪ್ಟನ್ ರೂಮ್ಗೆ ಎಂಟ್ರಿ ಕೊಡಲು ಮುಂದಾದರು. ಆಗ ಗೌತಮಿ ತುಂಬಾ ಗರಂ ಆಗಿಯೇ ಒಳಗೆ ಬರೋ ಹಾಗಿಲ್ಲ ಎಂದಿದ್ದಾರೆ.