ಜನಪ್ರಿಯ ನಟ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಪುಷ್ಪ 2 ಬಿಡುಗಡೆಯ ಸಂದರ್ಭದಲ್ಲಿ ಸಂಧ್ಯಾ ಥಿಯೇಟರ್ನಲ್ಲಿ ನಡೆದ ಘಟನೆಯಿಂದಾಗಿ ಅಲ್ಲು ಅರ್ಜುನ್ನನ್ನು ಇಂದು ಬಂಧಿಸಲಾಗಿದೆ
ಡಿಸೆಂಬರ್ 4ರಂದು ಬುಧವಾರ ವಿವಿಧ ಪ್ರದೇಶಗಳಲ್ಲಿ ಪುಷ್ಪ 2 ಚಿತ್ರದ ಪ್ರೀಮಿಯರ್ ಶೋಗಳನ್ನು ಪ್ರದರ್ಶಿಸಲಾಗಿತ್ತು ಈ ಸಂದರ್ಭದಲ್ಲಿ ಥಯೇಟರ್ ಬಳಿ ಜಮಾಯಿಸಿದ್ದ ಜನರ ಕಾಲ್ತುಳಿತಕ್ಕೆ ಓರ್ವ ಮಹಿಳೆ ಬಲಿಯಾಗಿದ್ದರು. ಮತ್ತು ಆಕೆಯ ಮಗನನ್ನೂ ಸಹ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಷಯ ತಿಳಿದ ಅಲ್ಲು ಅರ್ಜುನ್ ಮೃತ ಮಹಿಳೆಯ ಕುಟುಂಬಕ್ಕೆ 25 ಲಕ್ಷ ಕೊಟ್ಟು ಸಹಾಯ ಮಾಡಿದ್ದರು. ಆದರೆ ಅದಾದ ನಂತರದಲ್ಲಿ ಕುಟುಂಬಸ್ಥರು ನಟ ಅಲ್ಲು ಅರ್ಜುನ್ ವಿರುದ್ಧ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾದ ಮೇರೆಗೆ ನಟ ಅಲ್ಲು ಅರ್ಜುನ್ನನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.