ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ 7 ಆರೋಪಿಗಳಿಗೂ ಜಾಮೀನು ಮಂಜೂರಾಗಿದೆ.ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎ1 ಆರೋಪಿ ಪವಿತ್ರಾಗೌಡ ಹಾಗೂ ಎ2 ಆರೋಪಿ ನಟ ದರ್ಶನ್ ಅವರಿಗೆ ಪೂರ್ಣಾವಧಿ ಜಾಮೀನು ಅನ್ನು ಹೈಕೋರ್ಟ್ ಮಂಜೂರು ಮಾಡಿದೆ. ಆದರೆ ಪವಿತ್ರಾ ಗೌಡಗೆ ಜಾಮೀನು ಸಿಕ್ಕಿದೆ, ಆದರೆ ಬಿಡುಗಡೆ ಯಾವಾಗ ಅನ್ನೋದು ಈಗ ದೊಡ್ಡ ಪ್ರಶ್ನೆಯಾಗಿದೆ.
ಸೋಮವಾರ ಪವಿತ್ರಾಗೌಡ ರಿಲೀಸ್?
ಸೋಮವಾರ ಜೈಲಿನಿಂದ ಪವಿತ್ರಾಗೌಡ ರಿಲೀಸ್ ಆಗುವ ಸಾಧ್ಯತೆಯಿದೆ. ಯಾಕಂದ್ರೆ, ಷರತ್ತುಬದ್ದ ಜಾಮೀನಿನ ಮೇಲೆ ಕಾನೂನು ಕ್ರಮವನ್ನ ಪೂರೈಸಲು ಸಮಯ ಬೇಕಾಗಿದೆ. ಆದೇಶದ ಪ್ರತಿ ಸಿಕ್ಕಿದ್ರೆ ರೀಲಿಸ್ ಗೆ ಯತ್ನಿಸಬಹುದಿತ್ತು. ಪವಿತ್ರಾ ಪಾತ್ರ ಏನಿದೆ ಎಂಬುವುದರ ಮೇಲೆ ಬೇಲ್ ಸಿಕ್ಕಿದ್ದು. ಸೋಮವಾರ ಎ1 ಪವಿತ್ರಾ ಗೌಡ ಬಿಡುಗಡೆ ಆಗಲಿದ್ದಾರೆಂದು ಪವಿತ್ರಾ ಗೌಡ ಪರ ವಕೀಲೆ ಶಿಲ್ಪಾ ಹೇಳಿದ್ದಾರೆ.
ಪರಪ್ಪನ ಅಗ್ರಹಾರದಲ್ಲಿ ಪ್ರಕರಣದ ಎ-1 ಆರೋಪಿ ಪವಿತ್ರಾ ಗೌಡ ಜಾಮೀನು ಸಿಗುತ್ತಿದ್ದಂತೆ ಕಣ್ಣೀರು ಸುರಿಸಿದ್ದಾಳೆ. ಏಳು ತಿಂಗಳ ಬಳಿಕ ಪವಿತ್ರಾ ಗೌಡಳಿಗೆ ಜಾಮೀನು ಸಿಕ್ಕಿದೆ. ರೆಗ್ಯುಲರ್ ಬೇಲ್ ಸಿಗುತ್ತಿದ್ದಂತೆ ಸಂತೋಷದಿಂದ ಕುಳಿತ ಪವಿತ್ರಾ ಗೌಡ ಕಣ್ಣೀರು ಹಾಕಿ ಭಾವುಕರಾಗಿದ್ದಾರೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ದರ್ಶನ್, ಪವಿತ್ರಾ ಗೌಡ ಸೇರಿ ಇನ್ನಿತರರ ಆರೋಪಿಗಳು ಜೈಲು ಪಾಲಾಗಿದ್ದರು. ಈ ಪ್ರಕರಣ ಭಾರೀ ಸದ್ದು ಮಾಡಿತ್ತು. ಕೇಸ್ನಲ್ಲಿ ಪವಿತ್ರಾ ಗೌಡ ಎ1 ಆರೋಪಿ ಆಗಿದ್ರೆ ದರ್ಶನ್ ಎ2 ಆರೋಪಿ ಆಗಿದ್ದರು.
ಈ ಮೊದಲೇ ಪವಿತ್ರಾ ಗೌಡ ಸಲ್ಲಿಕೆ ಮಾಡಿದ್ದ ಜಾಮೀನು ಅರ್ಜಿಯನ್ನು ಕೋರ್ಟ್ ರದ್ದು ಮಾಡಿತ್ತು. ಆದರೆ ಈಗ ಅವರಿಗೂ ಜಾಮೀನು ಸಿಕ್ಕಿದೆ. ದರ್ಶನ್ ಅವರಿಗೆ ವೈದ್ಯಕೀಯ ಜಾಮೀನು ಸಿಕ್ಕಿತ್ತು. ಹೀಗಾಗಿ ಹೊರ ಬಂದು ದರ್ಶನ್ ಅವರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಇಬ್ಬರ ಜೊತೆ ಇನ್ನು ಐವರಿಗೆ ಬೇಲ್ ಸಿಕ್ಕಿದೆ. ರೇಣುಕಾಸ್ವಾಮಿ ಪ್ರಕರಣದಲ್ಲಿ ಒಟ್ಟು 7 ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಎ1 ಪವಿತ್ರಾ ಗೌಡ, ಎ2 ದರ್ಶನ್, ಎ4 ಜಗದೀಶ್, ಎ7 ಅನುಕುಮಾರ್ ಅಲಿಯಾಸ್ ಅನು, ಎ12 ಲಕ್ಷ್ಮಣ್, ಎ11 ನಾಗರಾಜ್, ಎ14 ಪ್ರದೋಷ್ಗೆ ಜಾಮೀನು ಮಂಜೂರು ಮಾಡಲಾಗಿದೆ. ದರ್ಶನ್ ಅವರು ಮೊದಲು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದರು. ಆದರೆ ಪರಪ್ಪನ ಜೈಲಿನಲ್ಲಿ ಕೆಲ ಸಂಗತಿಗಳು ನಡೆದಿದ್ದರಿಂದ ಬಳ್ಳಾರಿ ಕಾರಾಗೃಹಕ್ಕೆ ಸ್ಥಳಾಂತರ ಮಾಡಲಾಗಿತ್ತು. ಇದರ ಜೊತೆ ದರ್ಶನ್ ಗ್ಯಾಂಗ್ನ ಇನ್ನಿತರ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ದರ್ಶನ್ ಅವರು ಬಳ್ಳಾರಿ ಜೈಲಿನಲ್ಲಿ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದು ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಪಡೆದು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಅವರಿಗೆ ಪೂರ್ಣಾವಧಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.