ಕಿಂಗ್ ಕೊಹ್ಲಿ ಮತ್ತು ರವೀಂದ್ರ ಜಡೇಜಾ ಇಬ್ಬರು ಕೂಡಾ ಭಾರತ ತಂಡದ ಸ್ಟಾರ್ ಆಟಗಾರರು. ಕಿಂಗ್ ಬ್ಯಾಟಿಂಗ್ ನಲ್ಲಿ ಫೆಮಸ್ ಇದ್ದರೆ, ಜಡೇಜಾ ತಮ್ಮ ಆಲ್ ರೌಂಡರ್ ಆಟದಿಂದಾಗಿ ಗುರುತಿಸಿಕೊಂಡವರು. ಈ ಇಬ್ಬರು ಆಟಗಾರರು ಭಾರತ ತಂಡಕ್ಕೆ ನೀಡಿದ ಕೊಡುಗೆ ಅಪಾರ. ಇವರಿಬ್ಬರ ಕಾಂಬಿನೇಷನ್ ನಲ್ಲಿ ಭಾರತವು ಅದೇಷ್ಟೋ ಕಠಿಣ ಪರಿಸ್ಥಿತಿಯಲ್ಲಿ ಗೆಲುವಿನ ನಗೆ ಬೀರಿದೆ. ಇವರಿಬ್ಬರ ಮಧ್ಯೆ ಏನು ವ್ಯತ್ಯಾಸ ಅಂದರೆ ಕೊಹ್ಲಿ ಬಲಗೈ ಬ್ಯಾಟ್ಸಮ್ಯಾನ್ ಆದ್ರೆ ಜಡೇಜಾ ಲೆಫ್ಟ್ ಹ್ಯಾಡೆಂಡ್ ಬ್ಯಾಟ್ಸಮ್ಯಾನ್. ಪ್ರಸ್ತುತ ಭಾರತ ತಂಡವು ಬಾರ್ಡರ್ ಗವಾಸ್ಕರ್ ಟ್ರೋಫಿಗಾಗಿ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. 5 ಪಂದ್ಯಗಳ ಈ ಟೆಸ್ಟ್ ಸರಣಿಯಲ್ಲಿ, ಭಾರತ ತಂಡವು 1-1ರ ಸರಣಿ ಸಮಬಲದಲ್ಲಿದೆ.
ನಾಳೆ ಬ್ರಿಸ್ಬೇನಲ್ಲಿ ನಡೆಯಲಿರುವ 3ನೇ ಟೆಸ್ಟ್ ಪಂದ್ಯ ಈಗಾಗಲೇ ಭಾರತ ತಂಡವು ಅಡಿಲೇಡ್ ಮತ್ತು ಪರ್ತ ಟೆಸ್ಟ್ ನಿಂದ ಆಲ್ ರೌಂಡರ್ ಜಡೇಜಾರನ್ನಾ ಹೊರಗಿಟ್ಟಿದೆ. ಜಡ್ಡುರನ್ನಾ ಈ ಟೆಸ್ಟ್ ನಿಂದ ಆಟ ಆಡ್ಸಿದ್ದೇ ಆದಲ್ಲಿ ಅವರು ಹೊಸದೊಂದು ಮೈಲಿಗಲ್ಲು ಬರೆಯಲಿದ್ದಾರೆ. ಅದೇನೆಂದರೆ ನಾಳೆ ಕೊಹ್ಲಿಆಸೀಸ್ ವಿರುದ್ಧ100ನೇ ಇನಿಂಗ್ಸ್ ಆಡಲಿದ್ದಾರೆ. ಕೊಹ್ಲಿ 100ನೇ ಟೆಸ್ಟ್ ಆಡೋಕು ಜಡೇಜಾ ಮೈಲ್ಸ್ಟೋನ್ಗೂ ಏನ ಸಂಬಂಧ ಅಂತೀರಾ? ಖಂಡೀತವಾಗಲೂ ಸಂಬಂಧ ಇದೆ. ಅದೇನೆಂದರೆ ಕೊಹ್ಲಿ ಆಡಿದ ಸ್ಟೇಷಲ್ ಮ್ಯಾಚ್ಗಳಲ್ಲೆಲ್ಲಾ ಜಡೇಜಾ ಉತ್ತಮ ಪ್ರದರ್ಶನ ತೋರಿದ್ದಾರೆ ಅನ್ನೋದು.
ಈ ಹಿಂದೆ ಕೊಹ್ಲಿಆಡಿದ್ದ 100ನೇ ಒನ್ ಡೇ ಮ್ಯಾಚ್ನಲ್ಲಿ ಜಡೇಜಾ 5 ವಿಕೆಟ್ ಕಿತ್ತು ಮ್ಯಾನ್ ಆಫ್ ದಿ ಮ್ಯಾಚ್ ಪಡೆದಿದ್ದರು. ಕೊಹ್ಲಿ ಆಡಿದ್ದ 100ನೇ ಟೆಸ್ಟ್ನಲ್ಲಿ 175ರನ್ ಬಾರಿಸುವ ಮೂಲಕ 9 ವಿಕೆಟ್ ಕಿತ್ತಿದ್ದರು. ಇನ್ನು ಕೊಹ್ಲಿ ಕಾಪ್ಟನ್ ಆಗಿ ಆಡಿದ್ದ 50ನೇ ಟಿ-20ಯಲ್ಲಿ 3 ವಿಕೆಟ್ ಕಿತ್ತು, ಮ್ಯಾನ್ ಆಫ್ ದಿ ಮ್ಯಾಚ್ ಆಗಿದ್ದರು. 2015, 2021 ಮತ್ತು 2023ರಲ್ಲಿ ರನ್ ಮಷಿನ್ ಬರ್ತಡೇ ಇದ್ದ ಸಂದರ್ಭದಲ್ಲಿ, ಜಡ್ಡು ಸೌತ್ ಆಫ್ರಿಕಾ ವಿರುದ್ಧದ ಟೆಸ್ಟ್ ನಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ ವಿಥ್ 8 ವಿಕೆಟ್, ಸ್ಕಾಟ್ಲೆಂಡ್ ವಿರುದ್ದದ ಟಿ-20ಯಲ್ಲಿ ಮ್ಯಾನ್ ಆಫ್ ದಿ ಮ್ಯಾಚ್ 3 ವಿಕೆಟ್, ಸೌತ್ ಆಫ್ರಿಕಾ ವಿರುದ್ಧದ ಓನ್ ಡೇ ಪಂದ್ಯದಲ್ಲಿ 5 ವಿಕೆಟ್, ಇನ್ನೂ ಗೋಟ್ ನ ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ನ 600ನೇ ಇನಿಂಗ್ಸ್ ನಲ್ಲಿ ಎರಡು ಇನಿಂಗ್ಸ್ ನಲ್ಲೂ ಜಡೇಜಾ 5 ವಿಕೆಟ್ ಕಿತ್ತಿದ್ದರು. ಒಟ್ಟಿನಲ್ಲಿ ಅವರ ಈ ಎಲ್ಲಾ ಮೈಲ್ಸ್ಟೋನ್ಗಳನ್ನ ಗಮನಿಸ್ತಾ ಹೋದ್ರೆ ಎಲ್ಲೋ ಒಂದು ಕಡೆ ಕೊಹ್ಲಿ, ಜಡೇಜಾರಿಗೆ ಲಕ್ಕಿ ಮ್ಯಾನ್ ಅನ್ನುವ ಕುತೂಹಲ ಮೂಡಿದೆ.
ಬಾರ್ಡರ್-ಗವಾಸ್ಕರ್ ಟ್ರೋಫಿ 2025, ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಬ್ರಿಸ್ಬೇನ್ ನಲ್ಲಿ ಮಳೆ ಮುನ್ಸೂಚನೆ ಇದೆ. ಪರ್ತ್ ಮತ್ತು ಅಡಿಲೇಡ್ ನಲ್ಲಿ ನಡೆದ ಮೊದಲ ಎರಡು ಪಂದ್ಯಗಳಿಗೆ ಅಡ್ಡಿಯಾಗದ ವರುಣ, ಮೂರನೇ ಟೆಸ್ಟ್ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಿದೆ. ಬಹುಶಃ ಎಲ್ಲಾ 5 ದಿನಗಳಲ್ಲಿ ಮಳೆ ಪರಿಣಾಮ ಬೀರಬಹುದು ಎಂದು ಅಲ್ಲಿನ ಹವಾಮಾನ ಇಲಾಖೆ ವರದಿ ಮಾಡಿದೆ. ಹಾಗೇ ನೋಡಿದರೆ ಪಂದ್ಯ ನಡೆಯುವುದೇ ಅನುಮಾನ ಎಂದು ಹೇಳಲಾಗುತ್ತಿದೆ.