ಸೋಡಿಯಂ ಬಳಸಿ ಕೃಷಿ ಹೊಂಡಾದಲ್ಲಿ ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಮಾಜಿ ಸ್ಪರ್ಧಿ ಡ್ರೋನ್ ಪ್ರತಾಪ್ ಅವರನ್ನು ಇನ್ನೂ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಪೊಲೀಸರಿಂದ ಮಧುಗಿರಿ ನ್ಯಾಯಾಧೀಶರ ಬಳಿ ಹೆಚ್ಚಿನ ವಿಚಾರಣೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಕಸ್ಟಡಿಗೆ ನೀಡಲಾಗಿದೆ. ಬಿಗ್ ಬಾಸ್ ಖ್ಯಾತಿ ಡ್ರೊಣ್ ಪ್ರತಾಪ್ ಸೇರಿ ಮೂವರ ಮೇಲೆ ಎಫ್ಐಆರ್ ದಾಖಲಾಗಿತ್ತು. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ಸುಮೋಟೋ ಕೇಸ್ ದಾಖಲಿಕೊಂಡು ಎಫ್ಐಆರ್ ದಾಖಲಿಸಿತ್ತು.
ರಾತ್ರಿ ಬೆಂಗಳೂರಿನಲ್ಲಿ ಡ್ರೋಣ್ ಪ್ರತಾಪ್ ಅವರನ್ನು ವಶಕ್ಕೆ ಪಡೆದು ಪೊಲೀಸರಿಂದ ವಿಚಾರಣೆ ಆಗಿತ್ತು. ರೈತರ ಕೃಷಿಹೊಂಡದಲ್ಲಿ ಸೋಡಿಯಂ ಬಾಂಬ್ ಬ್ಲಾಸ್ಟ್ ಬಳಿಕ ಯೂಟ್ಯೂಬ್ನಲ್ಲಿ ವಿಡಿಯೋ ಕೂಡ ಅಪ್ಲೋಡ್ ಮಾಡಿದ್ದರು ಪ್ರತಾಪ್. ವಿಡಿಯೋ ಆಧರಿಸಿ ಸುಮೊಟೊ ಕೇಸ್ನಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಬಿಎನ್ಎಸ್ ಕಾಯ್ದೆ ಸೆಕ್ಷನ್ 176 ಮತ್ತು ಸಿ ಆರ್ ಪಿ ಸಿ 158 ಎ ಮತ್ತು ಬಿ, ಹಾಗೂ ಸ್ಪೋಟಕ ವಸ್ತುಗಳ ನಿಯಂತ್ರಣ ಕಾಯ್ದೆ ಅಡಿ ಎಫ್ಐಆರ್ ದಾಖಲಿಸಿದ್ದಾರೆ ಪೊಲೀಸರು.
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10 ಸ್ಪರ್ಧಿಯಾಗಿದ್ದ ಡ್ರೋನ್ ಪ್ರತಾಪ್ ಸಖತ್ ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಡ್ರೋನ್ ಪ್ರತಾಪ್ ನಡೆಸಿರೋ ಸೈನ್ಸ್ ಎಕ್ಸ್ಪೆರಿಮೆಂಟ್ 100% ವರ್ಕೌಟ್ ಆಗ್ಬಿಟ್ಟಿದೆ. ಆದ್ರೀಗ ಇದೇ ಎಕ್ಸ್ಪೆರಿಮೆಂಟ್ ಪರಿಸರ ಪ್ರೇಮಿಗಳನ್ನ ಕೆರಳಿಸಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಗರಂ ಆಗಿದ್ದಾರೆ. ಸೋಡಿಂ ಸ್ಫೋಟದಿಂದಾಗಿ ಬಿಗ್ಬಾಸ್ ಡ್ರೋನ್ ಪ್ರತಾಪ್ಗೆ ಹೊಸ ಸಂಕಷ್ಟ ಎದುರಾಗಿದೆ.